ಟೋಕಿಯೋ, ಜಪಾನ್: ಭಾರತದ ಟೇಬಲ್ ಟೆನ್ನಿಸ್ನ ಮಿಶ್ರ ಡಬಲ್ಸ್ನ ಜೋಡಿಯಾದ ಅಚಂತಾ ಶರತ್ ಕಮಲ್ ಮತ್ತು ಮಣಿಕಾ ಬಾತ್ರಾ ಅವರು ಚೀನಾದ ತೈಪೆ ತಂಡದ ಯುನ್ ಜು ಲಿನ್ ಮತ್ತು ಚೆಂಗ್ ವಿರುದ್ಧ ಸೋಲು ಅನುಭವಿಸಿದ್ದು, ಟೋಕಿಯೋ ಒಲಿಂಪಿಕ್ಸ್ನಲ್ಲಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಟೋಕಿಯೋ ಕ್ರೀಡಾಗ್ರಾಮದ ಮೆಟ್ರೋಪಾಲಿಟನ್ ಜಿಮ್- ಟೇಬಲ್-1ರಲ್ಲಿ 16ನೇ ಸುತ್ತಿನಲ್ಲಿ ಚೀನಾದ ತೈಪೆ ಆಟಗಾರರ ವಿರುದ್ಧ 0-4 ಅಂತರದಲ್ಲಿ ಸೋಲು ಕಂಡಿದ್ದಾರೆ. 7 ಪಂದ್ಯಗಳಲ್ಲಿ ಯಾವುದೇ ರೀತಿಯ ಅವಕಾಶವನ್ನೂ ಭಾರತೀಯ ಕ್ರೀಡಾಪಟುಗಳಿಗೆ ನೀಡದೇ ಮೊದಲ ನಾಲ್ಕೂ ಪಂದ್ಯಗಳನ್ನು ಗೆಲ್ಲುವ ಮೂಲಕ ಚೀನಾದ ತೈಪೆ ಆಟಗಾರರು ಗೆಲುವು ಸಾಧಿಸಿದ್ದಾರೆ.
ಕೇವಲ 24 ನಿಮಿಷಗಳಲ್ಲಿ ಸ್ಪರ್ಧೆ ಮುಕ್ತಾಯಗೊಂಡಿದ್ದು, ಆಗಾಗ ಕಮಲ್ ಮತ್ತು ಬಾತ್ರಾ ಒಂದೆರಡು ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು. ಆದರೆ, ಅಂಕಗಳು ಭಾರತೀಯ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಈಗ ಅಚಂತಾ ಶರತ್ ಕಮಲ್ ಪುರುಷರ ಸಿಂಗಲ್ಸ್ ಸ್ಪರ್ಧೆಯತ್ತ ಗಮನ ಹರಿಸಲಿದ್ದಾರೆ.
ಇನ್ನು ಭಾರತದ ಪುರುಷರ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್ನಲ್ಲಿ ಗೆಲುವಿನೊಂದಿಗೆ ಉತ್ತಮ ಆರಂಭ ಕಂಡಿದೆ. ಜುಡೋ ಪಂದ್ಯದಲ್ಲಿ ಪಾಲ್ಗೊಂಡಿದ್ದ ಭಾರತದ ಏಕೈಕ ಜೂಡೋ ಆಟಗಾರ್ತಿ ಸುಶೀಲಾ ದೇವಿ ನಿರಾಸೆಗೆ ಒಳಗಾಗಿದ್ದಾರೆ.
ಇದನ್ನೂ ಓದಿ: Tokyo Olympics: ಭಾರತೀಯ ಹಾಕಿ ತಂಡದ ಶುಭಾರಂಭ, ನ್ಯೂಜಿಲ್ಯಾಂಡ್ ವಿರುದ್ಧ ರೋಚಕ ಜಯ