ನಂದಿಗ್ರಾಮ: ಇಂದು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ನಂದಿಗ್ರಾಮ ಕ್ಷೇತ್ರ ಟಿಎಂಸಿ ಮತ್ತು ಬಿಜೆಪಿಗೆ ಪ್ರತಿಷ್ಠಿತಿ ಕಣವಾಗಿ ಮಾರ್ಪಟ್ಟಿದೆ. ಸಿಎಂ ಮಮತಾ ಬ್ಯಾನರ್ಜಿ ಗಾಯಗೊಂಡ ನಂತರ ಬಿಜೆಪಿ ಮೇಲೆ ಗಂಭೀರವಾಗಿ ಆರೋಪಿಸಿ ಯುಟರ್ನ್ ಹೊಡೆದಿದ್ದರು.
ಮಮತಾ ಬ್ಯಾನರ್ಜಿ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ. ಈಗ ನಂದಿಗ್ರಾಮದಲ್ಲಿ ಟಿಎಂಸಿ ವಿರುದ್ಧ ಗೆಲ್ಲಲು ಬಿಜೆಪಿ ಕಾರ್ಯ ತಂತ್ರ ರೂಪಿಸುತ್ತಿದ್ದು, ಇಂದು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ನಾಮಪತ್ರ ಸಲ್ಲಿಸಲಿದ್ದಾರೆ. ಇಂದು ನಾಮಪತ್ರವನ್ನು ಹಲ್ದಿಯಾ ಎಸ್ಡಿಒಗೆ ಸಲ್ಲಿಸಲಿದ್ದಾರೆ.
ಇದಕ್ಕೂ ಮುನ್ನ ಅವರು ನಂದಿಗ್ರಾಮದಲ್ಲಿರುವ ಸೋನಾಚುರಾ ಸಿನ್ಹಾಭಿನಿ ದೇವಸ್ಥಾನಕ್ಕೆ ತೆರಳಿ ದೇವಿಯ ಆರ್ಶೀವಾದ ಪಡೆದರು. ನಾಮಪತ್ರ ಸಲ್ಲಿಸುವ ವೇಳೆ ಸುವೇಂದು ಅಧಿಕಾರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸಂಸದ ಬಬುಲ್ ಸುಪ್ರಿಯೋ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಸಾಥ್ ನೀಡಲಿದ್ದಾರೆ.
-
I hope to receive people's blessings. I'm confident people will support BJP & bring it for real development in West Bengal. There is no question of any competition. BJP won 18 Parliamentary seats in 2019 & it will form a strong govt this time with a huge margin: Suvendu Adhikari pic.twitter.com/WYC38gUqso
— ANI (@ANI) March 12, 2021 " class="align-text-top noRightClick twitterSection" data="
">I hope to receive people's blessings. I'm confident people will support BJP & bring it for real development in West Bengal. There is no question of any competition. BJP won 18 Parliamentary seats in 2019 & it will form a strong govt this time with a huge margin: Suvendu Adhikari pic.twitter.com/WYC38gUqso
— ANI (@ANI) March 12, 2021I hope to receive people's blessings. I'm confident people will support BJP & bring it for real development in West Bengal. There is no question of any competition. BJP won 18 Parliamentary seats in 2019 & it will form a strong govt this time with a huge margin: Suvendu Adhikari pic.twitter.com/WYC38gUqso
— ANI (@ANI) March 12, 2021
ಜನರ ಆಶೀರ್ವಾದ ನಮ್ಮ ಮೇಲಿದೆ ಎಂದು ನಾನು ಭಾವಿಸುತ್ತೇನೆ. ಪಶ್ಚಿಮ ಬಂಗಾಳದಲ್ಲಿ ಜನರು ಬಿಜೆಪಿಯನ್ನು ಬೆಂಬಲಿಸುತ್ತಾರೆ. ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಹಾಕುತ್ತಾರೆ ಎಂದು ನನಗೆ ವಿಶ್ವಾಸವಿದೆ. ಯಾವುದೇ ಸ್ಪರ್ಧೆಯ ಪ್ರಶ್ನೆಯೇ ಇಲ್ಲ. 2019 ರಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದಿದೆ. ಈ ಬಾರಿ ಪಶ್ಚಿಮಬಂಗಾಳದಲ್ಲಿ ಬಿಜೆಪಿ ಭಾರಿ ಅಂತರದೊಂದಿಗೆ ಪ್ರಬಲ ಸರ್ಕಾರವನ್ನು ರಚಿಸುತ್ತದೆ ಎಂದು ಸುವೇಂದು ಅಧಿಕಾರಿ ತಿಳಿಸಿದರು.