ETV Bharat / bharat

ಚಿರತೆಯೊಂದಿಗೆ ಕಾದಾಡಿ ತನ್ನ ಕರುವನ್ನು ಉಳಿಸಿಕೊಂಡ ಹಸು! - ತನ್ನ ಕರುಳಬಳ್ಳಿಯನ್ನು ಉಳಿಸಿಕೊಂಡ ತಾಯಿ ಹಸು

ತನ್ನ ಕರುವಿನ ಮೇಲೆ ದಾಳಿ ಮಾಡಿದ್ದ ಚಿರತೆ ಮೇಲೆ ತಾಯಿ ಹಸುವೊಂದು ಧೈರ್ಯದಿಂದಲೇ ಹೊರಾಡಿ ಕರುಳಬಳ್ಳಿಯನ್ನು ಉಳಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬಹ್ರೇಚ್​ ಜಿಲ್ಲೆಯಲ್ಲಿ ನಡೆದಿದೆ.

Cow clashed with leopard to save calf's life  Cow clashes with leopard to save its calf  save her calf cow clashes  baraich Katarniya range  baraich news  baraich latest news  Cow clashed with leopard  ಚಿರತೆ ಹಸು ಕಾದಾಟ  ಬಹ್ರೇಚ್​ನಲ್ಲಿ ಚಿರತೆ ಹಸು ಕಾದಾಟ  ತನ್ನ ಕರುಳಬಳ್ಳಿಯನ್ನು ಉಳಿಸಿಕೊಂಡ ತಾಯಿ ಹಸು  ಬಹ್ರೇಚ್ ಸುದ್ದಿ
ಕಾಡಿಗೆ ಓಡಿಸಿ ತನ್ನ ಕರುಳಬಳ್ಳಿಯನ್ನು ಉಳಿಸಿಕೊಂಡ ತಾಯಿ ಹಸು
author img

By

Published : Jun 5, 2021, 8:35 AM IST

ಬಹ್ರೇಚ್: ಹಸುವೊಂದು ತನ್ನ ಕರುವನ್ನು ಉಳಿಸಲು ಚಿರತೆಯೊಂದಿಗೆ ಹೊರಾಡಿದ ಘಟನೆ ಕೈಲಾಶ್‌ಪುರಿ ಗ್ರಾಮದಲ್ಲಿ ನಡೆದಿದೆ.

ಕಾಂಪೌಂಡ್‌ನಲ್ಲಿ ಹಸುವನ್ನು ಕಟ್ಟಲಾಗಿತ್ತು. ಚಿರತೆ ರಾತ್ರಿ 12 ಗಂಟೆಯ ಸುಮಾರಿಗೆ ಕರು ಮೇಲೆ ದಾಳಿ ಮಾಡಿದೆ. ತನ್ನ ಕರು ತೊಂದರೆಯಲ್ಲಿದೆ ಎಂದು ತಿಳಿದ ಹಸು ತನ್ನ ಶಕ್ತಿಯಿಂದ ಹಗ್ಗವನ್ನು ಕಿತ್ತುಕೊಂಡು ಬಂದಿದ್ದು, ಚಿರತೆಯೊಂದಿಗೆ ಕಾದಾಟ ಶುರು ಮಾಡಿತು ಎಂದು ಹಸುವಿನ ಮಾಲೀಕ ಶ್ರವಣ್ ಹೇಳಿದ್ದಾರೆ.

10ರಿಂದ 15 ನಿಮಿಷಗಳ ಕಾಲ ಹಸು ಚಿರತೆಯೊಂದಿಗೆ ಹೋರಾಡಿದೆ. ಕೊನೆಗೆ ಹಸು ತನ್ನ ಕರುವನ್ನು ಚಿರತೆ ವಶದಿಂದ ಬಿಡಿಸಿದೆ. ಬಳಿಕ ಹಸು ಚಿರತೆಯನ್ನು ಸುಮಾರು 200 ಮೀಟರ್​ವರೆಗೆ ದೂರ ಓಡಿಸಿದೆ. ಹಸುವಿನೊಂದಿಗೆ ಗೆಲ್ಲಲಾಗದ ಚಿರತೆ ಅಲ್ಲಿಂದ ಕಾಡಿನ ಕಡೆಗೆ ಓಡಿ ಹೋಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.