ಚೆನ್ನೈ (ತಮಿಳುನಾಡು): ಯುಟ್ಯೂಬ್ನಲ್ಲಿ ಅವಹೇಳನಕಾರಿ ವಿಚಾರಗಳ ಪೋಸ್ಟ್ ಮಾಡಿದ್ದ ಸಂಬಂಧ ಖ್ಯಾತ ಯುಟ್ಯೂಬರ್ನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಯೂಟ್ಯೂಬರ್ ಮಾಧವ್ ಮಾಣಿಕಂ ಅವರನ್ನ ತಮಿಳುನಾಡಿನ ಸೇಲಂನಲ್ಲಿ ಬಂಧಿಸಲಾಗಿದ್ದು, ಚೆನ್ನೈಗೆ ಕರೆತರಲಾಗಿದೆ. ಅಲ್ಲದೇ ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಾಧವ್ ಮಾತ್ರವಲ್ಲದೇ ಆತನ ಪತ್ನಿ ಕೃತಿಕಾ ಎಂಬಾಕೆಯನ್ನೂ ಸಹ ಬಂಧಿಸಲಾಗಿದೆ. ಐಟಿ ನಿಯಮಗಳ ಉಲ್ಲಂಘಿಸಿ ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ನಿಂದನಾತ್ಮಕ ವಿಷಯಗಳನ್ನು ಪೋಸ್ಟ್ ಮಾಡುತ್ತಿದ್ದರು. ತಮ್ಮ ಚಾನಲ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಈ ರೀತಿಯ ಕೃತ್ಯಕ್ಕೆ ಕೈಹಾಕಿದ್ದರು. ಹೀಗಾಗಿ ದಂಪತಿಯನ್ನ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ಸಂಬಂದ ತಮಿಳುನಾಡು ಸೈಬರ್ ಪೊಲೀಸರು ಐಪಿಸಿಯ ವಿವಿಧ ಸೆಕ್ಷನ್ ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ ನಿಷೇಧ ಕಾಯ್ದೆ ಅಡಿ ದೂರು ದಾಖಲಾಗಿದೆ. ಅಲ್ಲದೇ ಮಾಧವ್ ವಿರುದ್ಧ ನಿಂದನೀಯು ವಿಚಾರ ಪ್ರಕಟ ಸಂಬಂಧ 100ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.
ಮಾಧವ್ ಮೂರು ಯೂಟ್ಯೂಬ್ ಚಾನಲ್ ಹೊಂದಿದ್ದು, ‘ಟಾಕ್ಸಿಕ್ ಮದನ್ 18+’, ‘ಪಬ್ ಮದನ್ ಗರ್ಲ್ ಫ್ಯಾನ್’ ಮತ್ತು ‘ರಿಚೀ ಗೇಮಿಂಗ್’ ಚಾನಲ್ಗಳಲ್ಲಿ ಅವಹೇಳನಕಾರಿ ಕಂಟೆಂಟ್ ಅಪ್ಲೋಡ್ ಮಾಡಿರುವ ಕುರಿತು ದೂರು ಕೇಳಿಬಂದಿತ್ತು.
ಓದಿ: ಬಿಡುಗಡೆಗೂ ಮೊದಲೇ ಪೈರಸಿ ವೆಬ್ಸೈಟ್ಗಳಲ್ಲಿ ಕಾಣಿಸಿಕೊಂಡ 'ಜಗಮೆ ತಾಂಧಿರಾಮ್'!