ETV Bharat / bharat

ಸಿಂಗಾಪುರದಲ್ಲಿ ಉದ್ಯೋಗ ನೀಡುವ ಭರವಸೆ: ₹23 ಲಕ್ಷ ಕಳೆದುಕೊಂಡ ಪ್ರಾಧ್ಯಾಪಕ

ತಮಿಳುನಾಡಿನ ಪ್ರೇಮ್​​ ನವಾಸ್ ಎಂಬ ಪ್ರಾಧ್ಯಾಪಕರಿಗೆ ಸಿಂಗಾಪುರದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಆನ್​ಲೈನ್​ ವಂಚಕರು 23 ಲಕ್ಷ ರೂ ಪಡೆದು ವಂಚಿಸಿದ್ದಾರೆ. ಈ ಸಂಬಂಧ ಸೈಬರ್ ಪೊಲೀಸ್‌ ವಿಭಾಗವು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದೆ.

ಆನ್​ಲೈನ್​ ವಂಚನೆ
ಆನ್​ಲೈನ್​ ವಂಚನೆ
author img

By

Published : Dec 4, 2022, 12:51 PM IST

ಚೆನ್ನೈ: ಪ್ರಾಧ್ಯಾಪಕರೊಬ್ಬರಿಗೆ ಆನ್​ಲೈನ್​ ವಂಚಕನೊಬ್ಬ ಕೆಲಸ ಕೊಡಿಸುವುದಾಗಿ ಹೇಳಿ ಅವರಿಂದ 23.5 ಲಕ್ಷ ರೂಪಾಯಿ ಹಣ ತೆಗೆದುಕೊಂಡು ವಂಚಿಸಿರುವ ಘಟನೆ ತಮಿಳುನಾಡಿನ ತಿರುಚ್ಚಿನಲ್ಲಿ ನಡೆದಿದೆ.

ಸೌದಿ ಅರೇಬಿಯಾದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ಪ್ರೇಮ್​​ ನವಾಸ್​, ಕೋವಿಡ್​ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದರು. ನಿರುದ್ಯೋಗಿಯಾಗಿದ್ದ ಅವರು ಹುದ್ದೆ ಕಳೆದುಕೊಂಡ ನಂತರ ತಿರುಚ್ಚಿ ಜಿಲ್ಲೆಯ ಮುಸ್ರಿ ತಾಲೂಕಿನ ತಿರುಮುರುಗನ್ ನಗರಕ್ಕೆ ಬಂದಿದ್ದರು. ಬಳಿಕ ಆನ್‌ಲೈನ್ ಜಾಬ್ ಸೈಟ್‌ಗಳ ಮೂಲಕ ವಿದೇಶದಲ್ಲಿ ಹೊಸ ಉದ್ಯೋಗಾವಕಾಶಕ್ಕಾಗಿ ಹುಡುಕಾಟ ನಡೆಸುತ್ತಿದ್ದರು ಎಂದು ತಿರುಚ್ಚಿ ಪೊಲೀಸರು ತಿಳಿಸಿದ್ದಾರೆ.

ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಹುದ್ದೆಗೆ ಮಾಸಿಕ 6 ಲಕ್ಷ ರೂ. ವೇತನ ನೀಡುವುದಾಗಿ ಭರವಸೆ ನೀಡಿ, ವ್ಯಕ್ತಿಯೊಬ್ಬ ನನ್ನನ್ನು ಸಂಪರ್ಕಿಸಿದ್ದ ಎಂದು ಪ್ರೇಮ್ ನವಾಸ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ವಿಷಯವಾಗಿ ವಂಚಕ ಸ್ಕೈಪ್ ಮೂಲಕ ಅವರೊಂದಿಗೆ ಮಾತನಾಡಿದ್ದನಂತೆ.

ಇದನ್ನೂ ಓದಿ: ಫೇಸ್​ಬುಕ್ ಪ್ರೇಯಸಿಯಿಂದ ಆನ್​ಲೈನ್ ವಂಚನೆ; ತನಿಖೆಗೆ ವಿಶೇಷ ತಂಡ ರಚನೆ

ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್‌ಡಿ ಮಾಡಿರುವ ಪ್ರೇಮ್ ನವಾಸ್​​ನನ್ನು ಒಮ್ಮೆ ಬಲೆಗೆ ಬೀಳಿಸಿರುವ ವಂಚಕರು ನೋಂದಣಿ ಶುಲ್ಕ ಮತ್ತು ಇತರ ವೆಚ್ಚಗಳಿಗೆ ಹಣ ಕೇಳಿ 23,53, 228 ರೂ.ಗಳನ್ನು ತೆಗೆದುಕೊಂಡಿದ್ದಾರೆ. ಹಣವನ್ನು ಮೂರು ಕಂತುಗಳಲ್ಲಿ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಪಡೆದುಕೊಳ್ಳಲಾಗಿದೆ. ವಂಚಕರು ಮೂರು ವಿಭಿನ್ನ ಮೊಬೈಲ್​ ನಂಬರ್​ ಮತ್ತು ಸ್ಕೈಪ್ ಐಡಿಗಳು ಹಾಗೂ ಎರಡು ಇಮೇಲ್ ಐಡಿಗಳ ಮೂಲಕ ಅವರನ್ನು ಸಂಪರ್ಕಿಸಿದ್ದಾರೆ ಎಂದು ಪ್ರಾಧ್ಯಾಪಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ತಿರುಚ್ಚಿ ಪೊಲೀಸರು ತಮಿಳುನಾಡು ಪೊಲೀಸರ ಸೈಬರ್ ವಿಭಾಗವನ್ನು ಸಂಪರ್ಕಿಸಿದ್ದು, ತನಿಖೆ ಮುಂದುವರಿದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ವಿಭಾಗವು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.