ETV Bharat / bharat

ಮಿನಿಷ್ಟ್ರೇನು_____.. ಶೂ ಒದ್ದೆಯಾಗುತ್ತೆ ಅಂತಾ ಹೀಗೆ ಮಾಡೋದಾ.. ಸಚಿವರೇ ಇದೇನಾ ನಿಮ್ಮ ಸಂಸ್ಕೃತಿ!? - TN Minister carried by fishermen to save his slipper getting wet

ಸಮುದ್ರ ಸವೆತದ ಬಗ್ಗೆ ಪರಿಶೀಲನೆಗೆ ಬಂದಿದ್ದ ವೇಳೆ ಸಚಿವರು ದೋಣಿಲ್ಲಿ ಪ್ರಯಾಣ ಬೆಳೆಸಿದ್ದರು. ದೋಣಿ ತೀರಕ್ಕೆ ಬಂದಾಗ ಅನಿತಾ ಆರ್.ರಾಧಾಕೃಷ್ಣನ್ ನೀರಿಗೆ ಕಾಲಿಡಲು ಹಿಂದೇಟು ಹಾಕಿದರು. ಇದನ್ನು ಗಮನಿಸಿದ ಮೀನುಗಾರರು ಒಣಗಿದ ಜಾಗ ತಲುಪುವವರೆಗೆ ಭುಜದ ಮೇಲೆ ಹೊತ್ತುಕೊಂಡರು.

ಸಚಿವರೇ ಇದೇನಾ ನಿಮ್ಮ ಸಂಸ್ಕೃತಿ?!
ಸಚಿವರೇ ಇದೇನಾ ನಿಮ್ಮ ಸಂಸ್ಕೃತಿ?!
author img

By

Published : Jul 9, 2021, 6:59 AM IST

ಚೆನ್ನೈ : ತಮಿಳುನಾಡು ಮೀನುಗಾರಿಕೆ ಸಚಿವ ಅನಿತಾ ಆರ್ ರಾಧಾಕೃಷ್ಣನ್ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ತಿರುವಳ್ಳೂರು ಜಿಲ್ಲೆಯ ಪಾಲವರ್ಕಡು ಸಮುದ್ರ ತೀರಕ್ಕೆ ಸಚಿವರು ಭೇಟಿ ನೀಡಿದ ಸಮಯದಲ್ಲಿ ತಮ್ಮ ಶೂ ಒದ್ದೆಯಾಗುತ್ತದೆ ಎಂದು ಮೀನುಗಾರರ ಭುಜದ ಮೇಲೆ ಕುಳಿತು ತೀರ ದಾಟಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ಸಚಿವರ ಈ ನಡೆಗೆ ಜಾಲತಾಣದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಇದೇನಾ ಸಚಿವ ಸಂಸ್ಕೃತಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಮುದ್ರ ಕೊರೆತದ ಬಗ್ಗೆ ಪರಿಶೀಲನೆಗೆ ಬಂದಿದ್ದ ವೇಳೆ ಸಚಿವರು ದೋಣಿಯಲ್ಲಿ ಪ್ರಯಾಣ ಬೆಳೆಸಿದ್ದರು.

ಸಚಿವರೇ ಇದೇನಾ ನಿಮ್ಮ ಸಂಸ್ಕೃತಿ?!

ದೋಣಿ ತೀರಕ್ಕೆ ಬಂದಾಗ ಅನಿತಾ ಆರ್.ರಾಧಾಕೃಷ್ಣನ್ ನೀರಿಗೆ ಕಾಲಿಡಲು ಹಿಂದೇಟು ಹಾಕಿದರು. ಇದನ್ನು ಗಮನಿಸಿದ ಮೀನುಗಾರರು ಒಣಗಿದ ಜಾಗ ತಲುಪುವವರೆಗೆ ಭುಜದ ಮೇಲೆ ಹೊತ್ತುಕೊಂಡರು.

ಆದರೆ, ಈ ಆರೋಪ ತಿರಸ್ಕರಿಸಿರುವ ಸಚಿವ ಅನಿತಾ ಆರ್.ರಾಧಾಕೃಷ್ಣನ್, ಈ ಘಟನೆ ನಡೆದದ್ದು ಮೀನುಗಾರರು ನನ್ನ ಮೇಲಿಟ್ಟಿರುವ ಪ್ರೀತಿಯಿಂದ. ಯಾವುದೇ ಬಲವಂತದಿಂದಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.