ETV Bharat / bharat

ತಮಿಳುನಾಡಲ್ಲಿ ಜೂನ್​ 28ರವರೆಗೆ ಲಾಕ್​ಡೌನ್ ವಿಸ್ತರಣೆ: ನಿರ್ಬಂಧ ಸಡಿಲಿಕೆ - lockdown extended in tamilunadu

ತಮಿಳುನಾಡು ಸರ್ಕಾರ ರಾಜ್ಯದಲ್ಲಿ ಜೂನ್​28 ರವರೆಗೆ ಕೊರೊನಾ ಲಾಕ್​ಡೌನ್​ ಅನ್ನು ವಿಸ್ತರಣೆ ಮಾಡಿದೆ. ಆದರೆ ಕೆಲವು ನಿಯಮಗಳನ್ನು ಸಡಿಲಿಕೆ ಮಾಡಿ ಸಾರ್ವಜನಿಕ ಸಾರಿಗೆ ಸಂಚಾರಕ್ಕೂ ಅವಕಾಶ ನೀಡಿದೆ.

lockdown
lockdown
author img

By

Published : Jun 20, 2021, 4:15 PM IST

ಚನ್ನೈ: ರಾಜ್ಯದಲ್ಲಿ ಕೋವಿಡ್​ ಸೋಂಕಿತರ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ತಮಿಳುನಾಡು ಸರ್ಕಾರ ಮತ್ತೊಂದು ವಾರ ಲಾಕ್​ಡೌನ್​ ಅನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. ಕೆಲ ನಿರ್ಬಂಧಗಳನ್ನು ಸಡಿಲಿಸಿ ಲಾಕ್​ಡೌನ್​ ವಿಸ್ತರಣೆ ಮಾಡಲಾಗಿದೆ.

ತಮಿಳುನಾಡಿನ ಜಿಲ್ಲೆಗಳನ್ನು ಮೂರು ಶ್ರೇಣಿಗಳಾಗಿ ವಿಂಗಡಿಸಲಾಗಿದೆ.

ಶ್ರೇಣಿ -1- ಕೊಯಮತ್ತೂರು, ನೀಲಗಿರೀಸ್​, ತಿರುಪ್ಪೂರ್​ ಸೇರಿ 11 ಜಿಲ್ಲೆಗಳಲ್ಲಿ ಹಿಂದಿನ ನಿರ್ಬಂಧಗಳೊಂದಿಗೆ ಲಾಕ್​ಡೌನ್​​ ಅನ್ನು ವಿಸ್ತರಿಸಲಾಗಿದೆ.

ಶ್ರೇಣಿ -2 : 23 ಜಿಲ್ಲೆಗಳಲ್ಲಿ ಲಾಕ್​ಡೌನ್​ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ.

ಶ್ರೇಣಿ -3 ಜಿಲ್ಲೆಗಳು- ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟುಗಳಲ್ಲಿ ಶ್ರೇಣಿ 2 ರಲ್ಲಿನ ಜಿಲ್ಲೆಗಳಿಗಿಂತ ಹೆಚ್ಚು ಲಾಕ್​​ಡೌನ್​ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ.

ಶ್ರೇಣಿ -3 ಜಿಲ್ಲೆಗಳಲ್ಲಿ ಶೇ. 50 ರಷ್ಟು ಸಾರ್ವಜನಿಕ ಸಾರಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ 100 ಜನರೊಂದಿಗೆ ಸಿನಿಮಾ ಶೂಟಿಂಗ್ ಮತ್ತು ಟಿವಿ ಸೀರಿಯಲ್ಸ್ ಶೂಟಿಂಗ್‌ಗೆ ಅವಕಾಶ ನೀಡಲಾಗುವುದು. ಆದರೆ, ಕಲಾವಿದರು ಆರ್‌ಟಿ ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ.

  • ತರಕಾರಿ, ಹಣ್ಣು, ದಿನಸಿ, ಚಿಕನ್​ ಸೆಂಟರ್​ಗಳು ಸಂಜೆ 7 ರವರೆಗೆ ತೆರೆದಿರಬಹುದು.
  • ಜಿಲ್ಲೆಗಳಲ್ಲಿ ಶೇ. 50 ರಷ್ಟು ಪ್ರಯಾಣಿಕರೊಂದಿಗೆ ಬಸ್​ ಸಂಚಾರಕ್ಕೆ ಅವಕಾಶ
  • ಚೆನ್ನೈನಲ್ಲಿ ಮೆಟ್ರೋ ರೈಲುಗಳು ತಮ್ಮ ಸಾಮರ್ಥ್ಯದ ಶೇ. 50 ರಷ್ಟು ಪ್ರಯಾಣಿಕರೊಂದಿಗೆ ಕಾರ್ಯ ನಿರ್ವಹಿಸಬಹುದು.
  • ಎಲ್ಲಾ ಅಗತ್ಯ ಸರ್ಕಾರಿ ಕ್ಷೇತ್ರಗಳು 100% ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದು. ಇತರ ಸರ್ಕಾರಿ ಕಚೇರಿಗಳು 50% ಸಿಬ್ಬಂದಿ ಯೊಂದಿಗೆ ಕಾರ್ಯನಿರ್ವಹಿಸಬಹುದು.
  • ಇ-ಕಾಮರ್ಸ್ ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.
  • ಪೂರ್ವ ಅನುಮತಿಯೊಂದಿಗೆ ವಾರಕ್ಕೊಮ್ಮೆ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲು ಚಿತ್ರಮಂದಿರಗಳಿಗೆ ಅನುಮತಿ ನೀಡಲಾಗುವುದು.
  • ಎಲೆಕ್ಟ್ರಿಕಲ್​ ವಸ್ತುಗಳು, ಹಾರ್ಡ್‌ವೇರ್ ಮಳಿಗೆಗಳು, ವಾಹನ ಮಳಿಗೆಗಳು, ಸ್ಟೇಷನರೀಸ್​ ಅಂಗಡಿಗಳು, ವಾಹನ ಬಿಡಿಭಾಗ ಮಾರಾಟ ಅಂಗಡಿಗಳು, ಫುಟ್​ವೇರ್​ ಅಂಗಡಿಗಳು, ಗೃಹೋಪಯೋಗಿ ಉಪಕರಣಗಳು ಮತ್ತು ಸ್ಮಾರ್ಟ್‌ಫೋನ್ ಮಾರಾಟ ಅಂಗಡಿಗಳನ್ನು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ತೆರೆಯಬಹುದು.
  • ಶ್ರೇಣಿ -1 ಮತ್ತು ಶ್ರೇಣಿ -2 ಜಿಲ್ಲೆಗಳಲ್ಲಿ ಗರಿಷ್ಠ 50 ಜನರೊಂದಿಗೆ ಮದುವೆ ಮತ್ತು ಇನ್ನಿತರ ಸಮಾರಂಭಗಳನ್ನು ಮಾಡಬಹುದು, ಆದರೆ ಇ-ನೋಂದಣಿ ಪಡೆದಿರಬೇಕು.
  • ಶ್ರೇಣಿ 3 ಜಿಲ್ಲೆಗಳಲ್ಲಿ, ಇ - ನೋಂದಣಿ ಇಲ್ಲದೆ ಜನರಿಗೆ ಟ್ಯಾಕ್ಸಿಗಳು ಮತ್ತು ಆಟೋಗಳಲ್ಲಿ ಪ್ರಯಾಣಿಸಲು ಅನುಮತಿ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.