ಚೆನ್ನೈ: ಕೇಂದ್ರಾಡಳಿತ ಪ್ರದೇಶ ಲಕ್ಷ ದ್ವೀಪದಲ್ಲಿ ಜನ ವಿರೋಧಿ ಕಾನೂನುಗಳನ್ನು ಜಾರಿಗೆ ತಂದ ಆರೋಪದಡಿ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ರನ್ನು ವಾಪಸ್ ಕರೆಸಿಕೊಳ್ಳುವಂತೆ ಪಿಎಂಗೆ ತಮಿಳುನಾಡು ಸಿಎಂ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಎಂ.ಕೆ.ಸ್ಟಾಲಿನ್, ಮುಸ್ಲಿಮರನ್ನು ದೂರವಿಡಲು ಜನವಿರೋಧಿ ನೀತಿಗಳನ್ನು ಪ್ರುಫುಲ್ ಪಟೇಲ್ ಜಾರಿಗೆ ತಂದಿದ್ದಾರೆ. ಅವರ ಈ ನಡೆ ನಮಗೆ ದುಃಖವನ್ನುಂಟು ಮಾಡುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ದೇಶದ ಆರ್ಥಿಕತೆ ಉಳಿಸಲು ನೋಟು ಮುದ್ರಿಸಿ, ಬಡವರಿಗೆ ಹಂಚಿ: ಬ್ಯಾಂಕರ್ ಉದಯ್ Kotak ಸಲಹೆ
ನಮ್ಮ ದೇಶದ ಶಕ್ತಿಯೇ ಬಹುತ್ವ. ಆದರೆ, ಪ್ರಫುಲ್ ಜಾರಿಗೊಳಿಸಿರುವ ನಿಯಮಗಳು ಲಕ್ಷದ್ವೀಪದ ಜನರ ಮೂಲ ಹಕ್ಕುಗಳನ್ನು ಕಸಿಯುತ್ತಿವೆ. ಹಾಗಾಗಿ ಪ್ರಧಾನಿ ಮೋದಿಯವರು ಮಧ್ಯ ಪ್ರವೇಶಿಸಿ ಅವರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಸ್ಟಾಲಿನ್ ಒತ್ತಾಯಿಸಿದ್ದಾರೆ.