ETV Bharat / bharat

ಹೆಲಿಕಾಪ್ಟರ್​ ಪತನ: ದೆಹಲಿ ತಲುಪಿದ ಯೋಧರ ಪಾರ್ಥಿವ ಶರೀರ, ಅಂತಿಮ ದರ್ಶನ ಪಡೆದ ರಾಜನಾಥ್​ ಸಿಂಗ್​​​ - ದೆಹಲಿ ತಲುಪಿದ ಯೋಧರ ಪಾರ್ಥಿವ ಶರೀರ

ತಮಿಳುನಾಡಿನ ನೀಲಿಗಿರಿಯ ಕುನೂರಿನಲ್ಲಿ ನಡೆದಿರುವ ಸೇನಾ ಹೆಲಿಕಾಪ್ಟರ್​​ ಅಪಘಾತದಲ್ಲಿ ಸೇನಾ ಮುಖಂಡ ಬಿಪಿನ್​ ರಾವತ್​​​ ಸೇರಿದಂತೆ 13 ಮಂದಿ ವಿಧಿವಶರಾಗಿದ್ದು, ಇದೀಗ ಅವರ ಪಾರ್ಥಿವ ಶರೀರವನ್ನ ದೆಹಲಿಗೆ ತರಲಾಗಿದೆ.

Mortal remains reach Delhi
Mortal remains reach Delhi
author img

By

Published : Dec 9, 2021, 8:42 PM IST

Updated : Dec 9, 2021, 8:55 PM IST

ನವದೆಹಲಿ: ಹೆಲಿಕಾಪ್ಟರ್​​​ ಅಪಘಾತದಲ್ಲಿ ಮಡಿದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಅವರ ಪತ್ನಿ ಮಧುಲತಾ ಮತ್ತು ಇತರ ಭದ್ರತಾ ಪಡೆ ಸಿಬ್ಬಂದಿಯ ಪಾರ್ಥಿವ ಶರೀರವನ್ನು ತಮಿಳುನಾಡಿನ ಸುಲೂರು ಏರ್​​ಬೇಸ್​​​ನಿಂದ ದೆಹಲಿಯ ಪಾಲಂ ಏರ್​​ಬೇಸ್​​ಗೆ ತೆಗೆದುಕೊಂಡು ಬರಲಾಗಿದೆ.

ದೆಹಲಿ ತಲುಪಿದ ಯೋಧರ ಪಾರ್ಥಿವ ಶರೀರ

ನಿನ್ನೆ ತಮಿಳುನಾಡಿಗೆ ಸೇನಾ ಹೆಲಿಕಾಪ್ಟರ್​​ನಲ್ಲಿ ಪ್ರಯಾಣ ಬೆಳೆಸಿದ್ದ ಸಂದರ್ಭದಲ್ಲಿ ನೀಲಗಿರಿಯ ಕುನೂರು ಬಳಿ ಅಪಘಾತಕ್ಕೀಡಾಗಿದ್ದು, ಸೇನಾ ಮುಖ್ಯಸ್ಥ ರಾವತ್​​ ಸೇರಿದಂತೆ 13 ಯೋಧರು ಸಾವನ್ನಪ್ಪಿದ್ದಾರೆ. ಇದೀಗ ಅವರ ಪಾರ್ಥಿವ ಶರೀರಗಳನ್ನ ದೆಹಲಿಗೆ ತೆಗೆದುಕೊಂಡು ಬರಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

  • Delhi | Defence Minister Rajnath Singh meets families of CDS General Bipin Rawat and other Armed Forces personnel who lost their lives in Tamil Nadu chopper crash yesterday, at Palam airbase pic.twitter.com/vPhALuWWHD

    — ANI (@ANI) December 9, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: ಸೇನಾ ಹೆಲಿಕಾಪ್ಟರ್​ ಪತನ: ತನಿಖೆ ನೇತೃತ್ವ ವಹಿಸಿಕೊಂಡ ಏರ್​​​ ಮಾರ್ಷಲ್​​ ಮನ್ವಿಂದರ್​​ ಸಿಂಗ್​ ಬಗ್ಗೆ ನಿಮಗೆಷ್ಟು ಗೊತ್ತು!?

ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​​ ದೋವಲ್​​​ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡರು. ದೊಡ್ಡ ಪ್ರಮಾಣದಲ್ಲಿ ಅಪಘಾತ ನಡೆದಿರುವ ಕಾರಣ ಯೋಧರ ಮೃತದೇಹದ ಪತ್ತೆ ಹಚ್ಚುವುದು ಕಷ್ಟಕರವಾಗಿದೆ. ಹೀಗಾಗಿ ಡಿಎನ್​ಎ ಪರೀಕ್ಷೆ ನಂತರ ಮೃತದೇಹಗಳನ್ನ ಸಂಬಂಧಿಕರಿಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆಯಲಿದೆ.

Last Updated : Dec 9, 2021, 8:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.