ಕೇಶ್‌ಪುರ( ಪಶ್ಚಿಮ ಬಂಗಾಳ): ಎರಡನೇ ಹಂತದ ಚುನಾವಣೆಗೆ ಮುನ್ನ ಕೇಶಪುರ ಬ್ಲಾಕ್‌ನಲ್ಲಿ ಟಿಎಂಸಿ ಕಾರ್ಯಕರ್ತನೊಬ್ಬನ ಕೊಲೆಯಾಗಿದೆ.
ಮೃತಪಟ್ಟವನ ಹೆಸರು ಉತ್ತಮ್ ಡೋಲುಯಿ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಮದಿನಿಪುರ ವೈದ್ಯಕೀಯ ಕಾಲೇಜಿಗೆ ಗಂಭೀರವಾಗಿ ಗಾಯಗೊಂಡಿದ್ದ ಉತ್ತಮ್ನನ್ನು ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಟಿಎಂಸಿ ಕಾರ್ಯಕರ್ತ ಉತ್ತಮ್ ಮೃತಪಟ್ಟಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 7 ಮಂದಿಯನ್ನ ಬಂಧಿಸಿ ವಿಚಾಣೆಗೊಳಪಡಿಸಿದ್ದಾರೆ.
ಇಂದು ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಚುನಾವಣೆಗೆ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ರಿಂದ ಸಂಜೆ ಆರು ಗಂಟೆವರೆಗೆ ಮತದಾನ ನಡೆಯಲಿದೆ. ಹಿಂಸಾಚಾರ ನಡೆಯದಂತೆ ಭಾರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.