ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪ್ರಸಿದ್ಧ ಜಗದ್ದಾತ್ರಿ ಪೂಜಾ ಉತ್ಸವವನ್ನು ತೃಣಮೂಲ ಕಾಂಗ್ರೆಸ್ ಶಾಸಕ ಬಾಬುಲ್ ಸುಪ್ರಿಯೊ ಹಾಗೂ ಪಕ್ಷದ ಕೌನ್ಸಿಲರ್ ಸುದರ್ಶನ ಮುಖರ್ಜಿ ಅವರು ಈ ಬಾರಿ ಪ್ರತ್ಯೇಕವಾಗಿ ಬೇರೆ ಬೇರೆ ಕಡೆ ಏರ್ಪಡಿಸಿದ್ದು, ಇದೂ ಇಬ್ಬರ ನಡುವಿನ ಜಟಾಪಟಿ ಈಗ ತಾರಕಕ್ಕೇರಿದೆ.
ಎರಡು ಬಣಗಳಿಂದ ಪ್ರತ್ಯೇಕ ಜಗದ್ಧಾತ್ರಿ ಪೂಜೆ: ರಾಜ್ಯದ ಮಾಜಿ ಸಚಿವ ಸುಬ್ರತಾ ಮುಖ್ಯೋಪಾಧ್ಯಾಯ ಅವರ ನೇತೃತ್ವದಲ್ಲಿ ಬಹಳ ದಿನಗಳಿಂದ ಜಗದ್ಧಾತ್ರಿ ಪೂಜೆಯನ್ನು ಆಯೋಜಿಸಲಾಗುತ್ತಿತ್ತು. ಅವರ ನಿಧನದ ಬಳಿಕ ಪೂಜಾ ಸಮಿತಿಗೆ ಉತ್ತರಾಧಿಕಾರಿ ಯಾರು? ಎನ್ನುವುದಕ್ಕಾಗಿ ಎರಡು ಬಣಗಳು ಪರಸ್ಪರ ಕೆಸರೆರಚಾಟ ಆರಂಭಿಸಿವೆ. ಹೀಗಾಗಿ ಈ ಬಾರಿ ಎರಡು ಬಣಗಳು ಪ್ರತ್ಯೇಕ ಜಗದ್ಧಾತ್ರಿ ಪೂಜೆ ಆಯೋಜಿಸಲು ನಿರ್ಧರಿಸಿವೆ.
ಜಗದ್ಧಾತ್ರಿ ಪೂಜೆಯ ಸಮಿತಿ ರಚಿಸಿಕೊಂಡು ಸ್ಥಳೀಯ ತೃಣಮೂಲ ವಿಧಾನಪರಿಷತ್ ಸದಸ್ಯ ಸುದರ್ಶನ ಮುಖ್ಯೋಪಾಧ್ಯಾಯ ಪೂಜೆಯ ಅಧ್ಯಕ್ಷತೆ ವಹಿಸಿದ್ದರೆ, ಮತ್ತೊಂದು ಪೂಜೆಗೆ ತೃಣಮೂಲ ಕಾಂಗ್ರೆಸ್ ಶಾಸಕ ಬಾಬುಲ್ ಸುಪ್ರಿಯೊ ಅಧ್ಯಕ್ಷತೆ ವಹಿಸಿ ಭರ್ಜರಿ ತಯಾರಿ ನಡೆಸಿದ್ದಾರೆ.
ಆರೋಪ ಪ್ರತ್ಯಾರೋಪ: ಬಾಬುಲ್ ಸುಪ್ರಿಯೊ ನೇತೃತ್ವದ ಪೂಜಾ ಸಮಿತಿ ಕಾರ್ಯದರ್ಶಿ ಅರುಣ್ ಕುಮಾರ್ ಮೊಂಡಲ್ ಮಾತನಾಡಿ, ಮೂರು ವರ್ಷಗಳ ಹಿಂದೆ ಫರ್ನ್ ರಸ್ತೆಯಲ್ಲಿ ಜಗದ್ಧಾತ್ರಿ ಪೂಜೆಯನ್ನು ಸುಬ್ರತಾ ಮುಖರ್ಜಿ ನೇತೃತ್ವದಲ್ಲಿ ಪ್ರಾರಂಭಿಸಲಾಯಿತು. ಆದರೆ, ಸುಬ್ರತಾ ಮುಖರ್ಜಿ ನಿಧನದ ನಂತರ ಪರಿಸ್ಥಿತಿ ಬದಲಾಯಿತು. ಸುದರ್ಶನ್ ನೇತೃತ್ವದ ಬಣ ಇತರ ಬಣದವರಿಗೆ ಪೂಜೆ ಮಾಡಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ ಅವರು, ಸ್ಥಳದ ಕೊರತೆಯಿಂದ ರಸ್ತೆಬದಿಯಲ್ಲಿ ಕಾರಿನಲ್ಲಿ ಮೂರ್ತಿ ಇಟ್ಟುಕೊಂಡು ಬಾಬುಲ್ ಸುಪ್ರಿಯೊ ನೇತೃತ್ವದಲ್ಲಿ ಪೂಜೆಯನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಆರೋಪ ತಳ್ಳಿಹಾಕಿದ ಕೌನ್ಸಿಲರ್ ಸುದರ್ಶನ್ ಮುಖರ್ಜಿ ನೇತೃತ್ವದ ಪೂಜಾ ಸಮಿತಿ ಸದಸ್ಯ ವಿಜಯ್ ರಾಯ್, ಈ ಪ್ರದೇಶದ ನಿವಾಸಿಗಳಲ್ಲದಿದ್ದರೂ, ಕಸಾಬದಿಂದ ಹಲವಾರು ಜನರು ಈ ಪ್ರದೇಶಕ್ಕೆ ಬಂದು "ಬಲವಂತವಾಗಿ" ಜಗದ್ಧಾತ್ರಿ ಪೂಜೆ ಆಯೋಜಿಸಿದ್ದಾರೆ. ''ಸಮಿತಿ ಬದಲಾದ ಬಳಿಕ ಸ್ಥಳೀಯರು ಸುದರ್ಶನ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು, ಬಾಬುಲ್ ಅಲ್ಲ, ಇದುವರೆಗೆ ಶಾಸಕ ಬಾಬುಲ್ ಜತೆ ಮಾತನಾಡಿಲ್ಲ, ತಮ್ಮಲ್ಲೇ ಚರ್ಚಿಸಿ ಮುಂದೆ ಬೇಕಾದರೆ ಅಧ್ಯಕ್ಷರನ್ನಾಗಿ ಮಾಡಲಾಗುವುದು, ಇಲ್ಲಿ ಸಂಘರ್ಷವಿಲ್ಲ ಎಂದು ರಾಯ್ ತಿಳಿಸಿದ್ದಾರೆ.