ETV Bharat / bharat

ನರ್ಸ್​ ಬದಲಿಗೆ ವ್ಯಾಕ್ಸಿನ್​ ನೀಡಿದ ಟಿಎಂಸಿ ಕೌನ್ಸಿಲರ್​.... ವೈರಲ್​ ಆಯ್ತು ವಿಡಿಯೋ - ಟಿಎಂಸಿ ಕೌನ್ಸಿಲರ್

ಮಹಿಳಾ ಟಿಎಂಸಿ ಕೌನ್ಸಿಲರ್​ ನರ್ಸ್​ ಬದಲಿಗೆ ತಾವೇ ಕೋವಿಡ್​ ವ್ಯಾಕ್ಸಿನ್​ ನೀಡಿರುವ ಘಟನೆ ನಡೆದಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

tmc leader Tabassum
tmc leader Tabassum
author img

By

Published : Jul 3, 2021, 8:46 PM IST

ಕೋಲ್ಕತ್ತಾ: ದೇಶಾದ್ಯಂತ ಕೋವಿಡ್​ ಮಹಾಮಾರಿಗೆ ವ್ಯಾಕ್ಸಿನ್ ನೀಡುವ ಕೆಲಸ ಭರದಿಂದ ನಡೆಯುತ್ತಿದ್ದು, ನರ್ಸ್​, ಡಾಕ್ಟರ್​​ ಈ ಕಾರ್ಯ ಅಚ್ಚುಕಟ್ಟಾಗಿ ಮಾಡ್ತಿದ್ದಾರೆ. ಆದರೆ ಸದ್ಯ ಪಶ್ಚಿಮ ಬಂಗಾಳದಲ್ಲಿ ನಡೆದಿರುವ ಘಟನೆವೊಂದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಹೀಗಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಾಗುತ್ತಿದೆ.

  • Seems like TMC govt has no control over its administrators.TMC's Tabassum Ara, a member of the administrative body of AMC, has vaccinated people herself and risked hundreds of lives…Will her political colour shield her from stern punishment?@MamataOfficial pic.twitter.com/EaF3EsK9Bw

    — Babul Supriyo (@SuPriyoBabul) July 3, 2021 " class="align-text-top noRightClick twitterSection" data=" ">

ಕೋವಿಡ್​ ವ್ಯಾಕ್ಸಿನ್​ ನೀಡ್ತಿದ್ದ ಸೆಂಟರ್​ವೊಂದರಲ್ಲಿ ಮಹಿಳಾ ಟಿಎಂಸಿ ಕೌನ್ಸಿಲರ್​​ ತಬಸ್ಸುಮ್​ ಆರಾ ನರ್ಸ್​​ ಬದಲಿಗೆ ತಾವೇ ಕೈಯಲ್ಲಿ ಸಿರಿಂಜ್​ ಹಿಡಿದುಕೊಂಡು ಲಸಿಕೆ ನೀಡಿದ್ದಾರೆ. ಇದರ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ.

ಪಶ್ಚಿಮ ಬಂಗಾಳದ ಕುಲತಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಟಿಎಂಸಿ ಕೌನ್ಸಿಲರ್​​ ಆಗಿರುವ ತಬಸ್ಸುಮ್​ ಅರಾ ಈ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಟಿಎಂಸಿಗೆ ಅದರ ನಾಯಕರ ಮೇಲೆ ಹಿಡತವಿಲ್ಲ. ಯಾವುದೇ ರೀತಿಯ ಅನುಭವವಿಲ್ಲದವರು ಲಸಿಕೆ ನೀಡ್ತಿದ್ದು, ಈ ರೀತಿಯಾದರೆ ಅದನ್ನ ಪಡೆದುಕೊಂಡವರ ಪರಿಸ್ಥಿತಿ ಏನು ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೌನ್ಸಿಲರ್​, ನಾನು ಯಾವುದೇ ಲಸಿಕೆ ನೀಡಿಲ್ಲ. ಈ ಪ್ರದೇಶದಲ್ಲಿ ಜನರು ವ್ಯಾಕ್ಸಿನ್​ ಪಡೆದುಕೊಳ್ಳಲು ಹಿಂದೇಟು ಹಾಕ್ತಿದ್ದ ಕಾರಣ ನಾನು ಕೈಯಲ್ಲಿ ಸಿರಿಂಜ್​​ ಹಿಡಿದುಕೊಂಡಿದ್ದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.