ETV Bharat / bharat

ಅಂದು ಅಸೆಂಬ್ಲಿ ಚುನಾವಣೆಗೆ ಟಿಕೆಟ್‌ವಂಚಿತ ತಿರತ್‌ ಸಿಂಗ್‌ ರಾವತ್‌ ಇಂದು ಸಿಎಂ

author img

By

Published : Mar 10, 2021, 10:36 PM IST

ಉತ್ತರಾಖಂಡದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟು ನೂತನ ಮುಖ್ಯಮಂತ್ರಿ ಆಯ್ಕೆಯಾಗುವುದರ ಮೂಲಕ ಅಂತ್ಯಗೊಂಡಿದೆ. ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ ತಿರಥ್​ ಸಿಂಗ್​ ರಾವತ್​ಗೆ ಬಿಜೆಪಿ ಇದೀಗ ಮಣೆ ಹಾಕಿದೆ.

Tirath Singh Rawat
Tirath Singh Rawat

ಡೆಹ್ರಾಡೂನ್​: ಉತ್ತರಾಖಂಡ್​ನಲ್ಲಿ ಉಂಟಾಗಿದ್ದ ಬಿಜೆಪಿ ರಾಜಕೀಯ ಬಿಕ್ಕಟ್ಟಿಗೆ ತ್ರಿವೇಂದ್ರ ಸಿಂಗ್​​ ರಾವತ್ ತಲೆದಂಡವಾಗಿದ್ದು, ಬಿಜೆಪಿ ಸಂಸದ ತಿರಥ್​ ಸಿಂಗ್​ ರಾವತ್​ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ.

ವಿಶೇಷವೆಂದರೆ, 2017ರಲ್ಲಿ ಉತ್ತರಾಖಂಡ್‌ ವಿಧಾನಸಭೆ ಚುನಾವಣೆ ವೇಳೆ ತಿರಥ್​ ಸಿಂಗ್​ ರಾವತ್‌ ಅವರಿಗೆ ಪಕ್ಷ ಟಿಕೆಟ್(ಎಂಎಲ್​ಎ ಟಿಕೆಟ್​)​ ನಿರಾಕರಿಸಿತ್ತು. ಆದರೆ ಇದೀಗ ಮುಖ್ಯಮಂತ್ರಿ ಆಗಿ ನೇಮಕಗೊಂಡಿದ್ದಾರೆ. ಈ ಹಿಂದೆ 2000-02ರವರೆಗೆ ಇವರು ರಾಜ್ಯದ ಮೊದಲ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಜತೆಗೆ ಉತ್ತರಾಖಂಡದ ಬಿಜೆಪಿ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿರುವುದು ಗಮನಾರ್ಹವಾಗಿದೆ.

ಇದನ್ನೂ ಓದಿ: ಉತ್ತರಾಖಂಡ ನೂತನ ಮುಖ್ಯಮಂತ್ರಿಯಾಗಿ ತಿರಥ್ ಸಿಂಗ್ ರಾವತ್ ಪ್ರಮಾಣ

ರಾಷ್ಟ್ರೀಯ ಬಿಜೆಪಿ ಕಾರ್ಯದರ್ಶಿ ಆಗಿ ಆಯ್ಕೆಯಾಗಿದ್ದ ರಾವತ್​​ ಅವರಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಗರ್ವಾಲ್​ ಕ್ಷೇತ್ರದಿಂದ ಟಿಕೆಟ್​ ನೀಡಲಾಗಿತ್ತು. ಇಲ್ಲಿ ಜಯ ಸಾಧಿಸಿದ್ದರು. ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರೂ ರಾವತ್​ ಕೇಂದ್ರ ಹಾಗೂ ರಾಜ್ಯದೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಅದರ ಫಲವಾಗಿ ಇಂದು ಅವರನ್ನು ಮುಖ್ಯಮಂತ್ರಿ ಹುದ್ದೆ ಹುಡುಕಿಕೊಂಡು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.