ಮುಂಬೈ(ಮಹಾರಾಷ್ಟ್ರ): ಮಲಾಡ್ನಲ್ಲಿ ನಿರ್ಮಾಣಗೊಂಡಿರುವ ಸ್ಪೋರ್ಟ್ಸ್ ಕಾಂಪ್ಲೆಕ್ಸ್ಗೆ ಟಿಪ್ಪು ಸುಲ್ತಾನ್ ಹೆಸರಿಡಲಾಗಿದ್ದು, ಇದಕ್ಕೆ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗಿದೆ. ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಬಿಜೆಪಿ, ಭಜರಂಗದಳ ಸೇರಿದಂತೆ ವಿವಿಧ ಪಕ್ಷಗಳು ಪ್ರತಿಭಟನೆ ನಡೆಸಿದವು.
ಮಹಾರಾಷ್ಟ್ರದ ಮಲಾಡ್ನಲ್ಲಿ ನಿರ್ಮಾಣಗೊಂಡಿರುವ ಸ್ಪೋರ್ಟ್ಸ್ ಕಾಂಪ್ಲೆಕ್ಸ್ಗೆ ಸಚಿವ ಅಸ್ಲಾಂ ಶೇಖ್ ಇಂದು ಉದ್ಘಾಟನೆ ಮಾಡಿದ್ದು, ಅದಕ್ಕೆ ಟಿಪ್ಪು ಸುಲ್ತಾನ್ ಎಂದು ನಾಮಕರಣ ಮಾಡಿದ್ದಾರೆ. ಇದರ ಬೆನ್ನಲ್ಲೇ ವಿವಾದ ಭುಗಿಲೆದ್ದಿದೆ. ಭಾರತೀಯ ಜನತಾ ಪಾರ್ಟಿ, ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ಸಹ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದವು.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ VHP ಮುಖಂಡ ಶ್ರೀರಾಜ್ ನಾಯರ್, ಮುಂಬೈನಲ್ಲಿ ಶಾಂತಿ ಕದಡುವ ಉದ್ದೇಶದಿಂದಲೇ ಈ ಹೆಸರು ಇಡಲಾಗಿದೆ. ನಮ್ಮದು ಶಾಂತಿ ಭೂಮಿ. ಹಿಂದೂ ವಿರೋಧಿಯ ಹೆಸರು ಇಟ್ಟಿರುವುದು ಖಂಡನೀಯ ಎಂದಿದ್ದಾರೆ.
-
Maharashtra: Mumbai Police takes into custody Bajrang Dal workers protesting against the naming of a sports complex after Tipu Sultan pic.twitter.com/Ky678EhATa
— ANI (@ANI) January 26, 2022 " class="align-text-top noRightClick twitterSection" data="
">Maharashtra: Mumbai Police takes into custody Bajrang Dal workers protesting against the naming of a sports complex after Tipu Sultan pic.twitter.com/Ky678EhATa
— ANI (@ANI) January 26, 2022Maharashtra: Mumbai Police takes into custody Bajrang Dal workers protesting against the naming of a sports complex after Tipu Sultan pic.twitter.com/Ky678EhATa
— ANI (@ANI) January 26, 2022
ಇದನ್ನೂ ಓದಿರಿ: ಧ್ವಜಾರೋಹಣದ ವೇಳೆ ರಾಷ್ಟ್ರಧ್ವಜವನ್ನ ತಲೆಕೆಳಗಾಗಿ ಹಾರಿಸಿದ ಸಚಿವರು..!
ಮುಂಬೈನ ಕ್ರೀಡಾ ಸಂಕೀರ್ಣದ ಹೊರಗಡೆ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಆಡಳಿತ ಪಕ್ಷದಲ್ಲಿರುವ ಕಾಂಗ್ರೆಸ್ಗೆ ಭಾರಿ ಮುಖಭಂಗವಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಕೂಡ, ಕ್ರೀಡಾ ಸಂಕೀರ್ಣದ ಫೋಟೋ ಟ್ವೀಟ್ ಮಾಡಿದೆ. ಟಿಪ್ಪು ಸುಲ್ತಾನ್ ಹೆಸರು ಇಟ್ಟಿದ್ದಕ್ಕಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಪ್ರತಿಭಟನೆ ನಡೆಸಿರುವ ಭಜರಂಗ ದಳದ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದು, ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ