ETV Bharat / bharat

ರಾಷ್ಟ್ರೀಯ ಹೆದ್ದಾರಿ 30 ರಲ್ಲಿ ಟೈಮ್ ಬಾಂಬ್ ಪತ್ತೆ..! ಕೆಲಕಾಲ ಆತಂಕದ ವಾತಾವರಣ - ಮಧ್ಯಪ್ರದೇಶದ ಸೊಹಗಿ

ಮಧ್ಯಪ್ರದೇಶದ ಸೊಹಗಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 30ರಲ್ಲಿ ಶುಕ್ರವಾರ ತಡರಾತ್ರಿ ಟೈಂ ಬಾಂಬ್ ಪತ್ತೆಯಾಗಿದೆ.

Time bomb found on National Highway 30
ರಾಷ್ಟ್ರೀಯ ಹೆದ್ದಾರಿ 30 ರಲ್ಲಿ ಟೈಮ್ ಬಾಂಬ್ ಪತ್ತೆ
author img

By

Published : Jan 22, 2022, 8:49 AM IST

ರೇವಾ(ಮಧ್ಯಪ್ರದೇಶ): ಸೊಹಗಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 30ರಲ್ಲಿ ಶುಕ್ರವಾರ ತಡರಾತ್ರಿ ಟೈಂ ಬಾಂಬ್ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದಾರೆ.

ಸೇತುವೆಯ ಕೆಳಗೆ ಕೆಂಪು ಬಣ್ಣದ ಟೈಮರ್ ಬಾಂಬ್: ರೇವಾವನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 30ರ ಸೊಹಗಿ ಪೊಲೀಸ್ ಠಾಣೆ ವ್ಯಾಪ್ತಿಯ ಮೇಲ್ಸೇತುವೆ ಕೆಳಗೆ ಅನುಮಾನಾಸ್ಪದ ಸ್ಥಿತಿಯಲ್ಲಿ ಕೆಂಪು ಬಣ್ಣದ ಬಾಕ್ಸ್ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಪತ್ತೆಯಗಿದೆ.

ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಬಾಂಬ್ ನಿಷ್ಕ್ರಿಯ ದಳಕ್ಕೆ ತಿಳಿಸಿದ್ದಾರೆ. ಪೊಲೀಸರ ಮಾಹಿತಿ ಮೇರೆಗೆ ರೇವಾದಿಂದ ಬಾಂಬ್ ನಿಷ್ಕ್ರಿಯ ದಳ ತಡ ಆಗಮಿಸಿದ್ದು, ತನಿಖೆಯ ನಂತರವೇ ಸಂಪೂರ್ಣ ವಿಷಯ ತಿಳಿಯಲಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

4 ವರ್ಷಗಳ ಹಿಂದೆ ಸಿಲಿಂಡರ್ ಬಾಂಬ್ ಪತ್ತೆ: ಇದಕ್ಕೂ ಮೊದಲು ರೇವಾ ಜಿಲ್ಲೆಯಲ್ಲಿ ಬಾಂಬ್ ಪತ್ತೆಯಾದ ಘಟನೆಗಳು ನಡೆದಿವೆ. ಸುಮಾರು 4 ವರ್ಷಗಳ ಹಿಂದೆ, ಗರ್ಹಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಲಿಂಡರ್ ಬಾಂಬ್ ಪತ್ತೆಯಾಗಿತ್ತು. ಇದೀಗ ಮತ್ತೊಮ್ಮೆ ಜಿಲ್ಲೆಯ ಸೋಹಗಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈಂ ಬಾಂಬ್‌ನಂತೆ ಕಾಣುವ ಕೆಂಪು ಬಣ್ಣದ ಬಾಕ್ಸ್ ಪತ್ತೆಯಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಗ್ರಾಹಕರ ಸೋಗಿನಲ್ಲಿ ಆಭರಣ ಮಳಿಗೆಗೆ ನುಗ್ಗಿದ ಖದೀಮರು: ಹಾಡಹಗಲೇ ಕೋಟ್ಯಂತರ ರೂ. ಚಿನ್ನಾಭರಣ ಕಳ್ಳತನ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.