ನಾಗ್ಪುರ(ಮಹಾರಾಷ್ಟ್ರ) : ಸಾಮಾನ್ಯವಾಗಿ ಕೋತಿ, ಬೆಕ್ಕು, ಕರಡಿ ಮರ ಏರುವುದನ್ನು ನಾವು ನೋಡಿದ್ದೇವೆ. ಆದರೆ, ಮಹಾರಾಷ್ಟ್ರ-ಮಧ್ಯಪ್ರದೇಶದ ಗಡಿಯಲ್ಲಿರುವ ಪೆಂಚ್ ಅಭಯಾರಣ್ಯದಲ್ಲಿ ಹುಲಿಯೊಂದು ಮರವೇರಿದೆ.
ಪ್ರವಾಸಿಗರು ಈ ದೃಶ್ಯವನ್ನು ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದಿದ್ದಾರೆ. ವಿಡಿಯೋದಲ್ಲಿ ಮರವೇರಿದ ಹುಲಿ, ಮರಕ್ಕೆ ಕುತ್ತಿಗೆ ಉಜ್ಜಿದೆ. ಈ ವಿಡಿಯೋವನ್ನು ನಾಲ್ಕು ದಿನಗಳ ಹಿಂದೆ ಸೆರೆ ಹಿಡಿಯಲಾಗಿದ್ದು, ಸದ್ಯ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.
ಸಾಮಾನ್ಯವಾಗಿ ಮಳೆಗಾಲದಲ್ಲಿ ಪ್ರಾಣಿಗಳಿಗೆ ಚರ್ಮದ ತುರಿಕೆ ಉಂಟಾಗುತ್ತಿದೆ. ಆ ಸಮಯದಲ್ಲಿ ತುರಿಕೆಯಿಂದ ಪಾರಾಗಲು ಹುಲಿ ಮರದ ತೊಗಟೆಗೆ ಮೈ ಉಜ್ಜುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.