ETV Bharat / bharat

ಮದುವೆ ಮನೆಯಲ್ಲಿ ಲಡ್ಡುಗಾಗಿ ಹೊಡೆದಾಟ.. ಠಾಣೆ ಮೆಟ್ಟಿಲೇರಿದ ವಧು - ವರನ ಕುಟುಂಬಸ್ಥರು! - ಛತ್ತೀಸ್‌ಗಢದ ಪೊಲೀಸ್ ಠಾಣೆಗೆ ತಲುಪಿದ ಲಡ್ಡೂಸ್ ವಿವಾದ

ಛತ್ತೀಸ್​ಗಢದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆಯಲ್ಲಿ ಲಡ್ಡೂ ಬಡಿಸದಿದ್ದಕ್ಕೆ ವರ ಮತ್ತು ವಧುವಿನ ಕುಟುಂಬಸ್ಥರ ನಡುವೆ ಹೊಡೆದಾಡಿಕೊಂಡಿರುವ ಪ್ರಸಂಗ ಮುಂಗೇಲಿ ಜಿಲ್ಲೆಯಲ್ಲಿ ನಡೆದಿದೆ.

laddoos not served in Marriage function at Chhattisgarh, laddoos not served in dinner at Mungeli, Laddoos issue reach police station in Chhattisgarh, Chhattisgarh marriage news, ಛತ್ತೀಸ್‌ಗಢದಲ್ಲಿ ಮದುವೆ ಸಮಾರಂಭದಲ್ಲಿ ಬಡಿಸದ ಲಡ್ಡೂ, ಮುಂಗೇಲಿಯಲ್ಲಿ ಊಟಕ್ಕೆ ಬಡಸದ ಲಡ್ಡೂ, ಛತ್ತೀಸ್‌ಗಢದ ಪೊಲೀಸ್ ಠಾಣೆಗೆ ತಲುಪಿದ ಲಡ್ಡೂಸ್ ವಿವಾದ, ಛತ್ತೀಸ್‌ಗಢದಲ್ಲಿ ಮದುವೆ ಸುದ್ದಿ,
ಮದುವೆ ಮನೆಯಲ್ಲಿ ಲಡ್ಡೂ ಸಂಬಂಧ ಹೊಡೆದಾಟ
author img

By

Published : Apr 27, 2022, 2:34 PM IST

ಮುಂಗೇಲಿ (ಛತ್ತೀಸ್‌ಗಢ): ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದ ಬೆಳಕಿಗೆ ಬಂದಿದೆ. ಕೇವಲ ಲಡ್ಡೂಗಾಗಿ ಮದುವೆ ಮನೆಯಲ್ಲಿ ಅಲ್ಲೋಲ ಕಲ್ಲೋಲವೇ ಸುಷ್ಟಿಯಾಗಿದೆ. ಅದ್ದೂರಿಯಾಗಿ ನಡಿಯುತ್ತಿದ್ದ ಮನೆಯಲ್ಲಿ ಏಕಾಏಕಿ ಗಲಾಟೆ, ಹೊಡೆದಾಟ ನಡೆದು ತಲ್ಲಣವಾಗಿತ್ತು. ಅಷ್ಟೇ ಅಲ್ಲದೇ ಎರಡು ಕುಟುಂಬಗಳು ಠಾಣೆ ಮೆಟ್ಟಿಲೇರಿದ್ದ ಪ್ರಸಂಗವೂ ನಡೆದಿದೆ. ಈ ಘಟನೆ ಜಿಲ್ಲೆಯ ಚಾರ್ಭಾಟದಲ್ಲಿ ನಡೆದಿದೆ.

ಏನಿದು ಘಟನೆ: ಮುಂಗೇಲಿ ಜಿಲ್ಲೆಯ ಬೆಮೆತಾರಾ ಗ್ರಾಮಕ್ಕೆ ಸೇರಿದ ಗುಣರಾಮ್ ಸಾಹು ಅವರ ಪುತ್ರ ಸೂರಜ್ ಸಾಹು ಅವರು ರಂಭಾಜ್ ಸಾಹು ಅವರ ಮಗಳು ಕುಂತಿಯೊಂದಿಗೆ ವಿವಾಹವಾಗಲು ಚಾರ್ಭಾಟಕ್ಕೆ ತೆರಳಿದ್ದರು. ವಧುವಿನ ಮನೆಯನ್ನು ತಲುಪಿದ್ದ ವರನ ಕುಟುಂಬಸ್ಥರು ಮದುವೆ ಪ್ರಕ್ರಿಯೆಗಳನ್ನು ನಡೆಸಿದ್ದರು. ಮದುವೆ ಮನೆಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು.

ಲಡ್ಡೂಗಾಗಿ ಹೊಡೆದಾಟ: ಊಟದ ಸಮಯದಲ್ಲಿ ಅತಿಥಿಗಳು ವಿಭಿನ್ನ ತಿನಿಸುಗಳನ್ನು ಸವಿಯುತ್ತಿರುವಾಗ ಕೆಲ ಅತಿಥಿಗಳು ಲಡ್ಡುಗಳನ್ನು ಕೇಳಿದ್ದಾರೆ. ಆದರೆ, ಮದುವೆ ಮನೆಯಲ್ಲಿ ವಧುವಿನ ಪಕ್ಷದವರು ಲಡ್ಡುಗಳ ವ್ಯವಸ್ಥೆ ಮಾಡಿರಲಿಲ್ಲ. ಲಡ್ಡೂ ವ್ಯವಸ್ಥೆ ಮಾಡದ ಕಾರಣ ಅತಿಥಿಗಳ ಬೇಡಿಕೆ ಈಡೇರಿಸಲು ವಧುವಿನ ಪಕ್ಷದವರಿಗೆ ಸಾಧ್ಯವಾಗಿಲ್ಲ. ಈ ವೇಳೆ, ಎರಡೂ ಪಕ್ಷದ ಕಡೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿವೆ. ಖುಷಿ-ಖುಷಿಯಾಗಿ ನಡೆಯುತ್ತಿದ್ದ ಮದುವೆ ಮನೆಯಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಯಿತು.

ಓದಿ: ಫೇಸ್‌ಬುಕ್‌ ಪ್ರೀತಿ, ಓಡಿ ಹೋಗಿ ದೇವಸ್ಥಾನದಲ್ಲಿ ಮದುವೆ: ಇದು ಇಬ್ಬರು ಯುವಕರ ಪ್ರೇಮ್‌ ಕಹಾನಿ!

ಪೊಲೀಸ್​ ಠಾಣೆಗೆ ದೂರು: ಗಲಾಟೆ ಮತ್ತು ಹೊಡೆದಾಟದ ಬಳಿಕ ಎರಡು ಕುಟುಂಬಗಳು ಮುಂಗೇಲಿ ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಎರಡು ಕುಟುಂಬಗಳ ದೂರನ್ನು ಠಾಣೆಯ ಟೌನ್ ಇನ್ಸ್‌ಪೆಕ್ಟರ್ ತಾಳ್ಮೆಯಿಂದ ಆಲಿಸಿ ಪರಿಸ್ಥಿತಿಯ ಗಂಭೀರತೆ ಅರಿತುಕೊಂಡಿದ್ದಾರೆ.

ಸಮಸ್ಯೆ ಬಗೆಹರಿಸಿದ ಇನ್ಸ್​ಪೆಕ್ಟರ್​: ಎರಡು ಕುಟುಂಬಸ್ಥರನ್ನು ಕರೆದು ಸಣ್ಣಪುಟ್ಟ ವಿಚಾರಕ್ಕೆ ಸಂಬಂಧ ಕಡಿದುಕೊಳ್ಳಬೇಡಿ. ಇದು ಎರಡೂ ಕುಟುಂಬಗಳಿಗೆ ದೊಡ್ಡ ನಷ್ಟವಾಗಲಿದೆ. ಜಗಳ ಬಿಟ್ಟು ಒಂದಾಗಿ ಎಂದು ಸಮಾಧಾನ ಪಡಿಸಿದರು. ಇನ್ಸ್​ಪೆಕ್ಟರ್​​ ಮಾತಿಗೆ ಎರಡು ಕುಟುಂಬಗಳು ಗೌರವಿಸಿದವು. ಹೀಗಾಗಿ ಇನ್ಸ್​ಪೆಕ್ಟರ್​ ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಯಶಸ್ವಿಯಾದರು.

ಅದ್ಧೂರಿ ಮದುವೆ: ತಮ್ಮ ಮಕ್ಕಳ ಜೀವನ ಮತ್ತು ಪೊಲೀಸರ ಮಾತಿಗೆ ಗೌರವಿಸಿದ ಎರಡೂ ಕುಟುಂಬಗಳು ವಿವಾಹವನ್ನು ಅದ್ಧೂರಿಯಾಗಿ ನಡೆಸಿದರು. ಎರಡು ಕಟುಂಬಗಳ ಹೊಡೆದಾಟದಿಂದಾಗಿ ಈ ಮದುವೆಯೇ ರದ್ದಾಗಬೇಕಾಗಿತ್ತು. ಆದರೆ, ಈ ಸಮಸ್ಯೆಯನ್ನು ಕ್ಷಣ ಮಾತ್ರದಲ್ಲಿ ಬಗೆಹರಿಸಿದ ಪೊಲೀಸಪ್ಪನಿಗೆ ಎರಡು ಕುಟುಂಬಸ್ಥರು ಧನ್ಯವಾದಗಳನ್ನು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.