ETV Bharat / bharat

ಕಾಲ್ನಡಿಗೆಯಲ್ಲೇ ಬೋಧಗಯಾದಿಂದ ಧರ್ಮಶಾಲಾ ತಲುಪಿದ ಬೌದ್ಧ ಸನ್ಯಾಸಿ: 2,100 ಕಿ.ಮೀ ಪಯಣ!

ಟಿಬೆಟಿಯನ್ ಬೌದ್ಧ ಸನ್ಯಾಸಿಯೊಬ್ಬರು ಬಿಹಾರದ ಬೋಧಗಯಾದಿಂದ ಕಾಲ್ನಡಿಗೆಯಲ್ಲಿಯೇ ಹಿಮಾಚಲ ಪ್ರದೇಶದ ಧರ್ಮಶಾಲಾ ತಲುಪಿದ್ದಾರೆ.

Buddhist monk reached Dharamshala on foot
ಕಾಲ್ನಡಿಗೆಯಲ್ಲೇ ಬೋಧಗಯಾದಿಂದ ಧರ್ಮಶಾಲಾ ತಲುಪಿದ ಬೌದ್ಧ ಸನ್ಯಾಸಿ..
author img

By

Published : Jun 30, 2023, 10:54 PM IST

ಕಾಂಗ್ರಾ (ಹಿಮಾಚಲ ಪ್ರದೇಶ): ಜಗತ್ತಿನಲ್ಲಿ ಶಾಂತಿ, ಸೌಹಾರ್ದತೆ ನೆಲೆಸಬೇಕು ಎಂಬ ಸಂದೇಶದೊಂದಿಗೆ ಟಿಬೆಟಿಯನ್ ಬೌದ್ಧ ಸನ್ಯಾಸಿಯೊಬ್ಬರು ಬಿಹಾರದ ಬೋಧಗಯಾದಿಂದ ಕಾಲ್ನಡಿಗೆಯಲ್ಲಿಯೇ ಹಿಮಾಚಲ ಪ್ರದೇಶದ ಧರ್ಮಶಾಲಾ ತಲುಪಿದರು. ಸುದೀರ್ಘ ಪಯಣ ಮೆಕ್ಲಿಯೋಡ್ಗಂಜ್ ತಲುಪಿದ ನಂತರ ಕೊನೆಗೊಂಡಿತು. ಇವರು ಗಯಾದಿಂದ ಧರ್ಮಶಾಲಾಕ್ಕೆ ಸುಮಾರು 8 ತಿಂಗಳ ಪ್ರಯಾಣ ಪೂರ್ಣಗೊಳಿಸಿದ್ದಾರೆ. ಇದೇ ಸಮಯದಲ್ಲಿ, ಟಿಬೆಟಿಯನ್ ಧಾರ್ಮಿಕ ನಾಯಕ ದಲೈ ಲಾಮಾ ಅವರನ್ನು ಭೇಟಿ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ.

ಕಾಲ್ನಡಿಗೆಯಲ್ಲಿ 2,100 ಕಿ.ಮೀ. ಪ್ರಯಾಣ: ಧರ್ಮಶಾಲಾದ ಮೆಕ್ಲಿಯೋಡ್‌ಗಂಜ್ ತಲುಪಿದ ಬೌದ್ಧ ಸನ್ಯಾಸಿ ಈ ನಡಿಗೆಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂದು ಹೇಳಿದರು. ಅದರಲ್ಲೂ ಇತ್ತೀಚಿನ ದಿನಗಳ ರಣ ಬಿಸಿಲು ಅವರನ್ನು ತುಂಬಾ ಕಾಡಿದೆ. ಸುಡುಬಿಸಿಲಿನಲ್ಲಿ ಪ್ರಯಾಣ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಆದರೆ, ಶಾಖ ಧೈರ್ಯ ಮತ್ತು ಉತ್ಸಾಹ ಮುರಿಯಲು ಸಾಧ್ಯವಾಗಲಿಲ್ಲ. ಬೋಧಗಯಾದಿಂದ ಧರ್ಮಶಾಲಾದ ಮೆಕ್ಲಿಯೋಡ್‌ಗಂಜ್‌ವರೆಗೆ ಸುಮಾರು 2,100 ಕಿಲೋ ಮೀಟರ್‌ಗಳಷ್ಟು ದೂರವನ್ನು ಕಾಲ್ನಡಿಗೆಯಲ್ಲೇ ಎಂಟು ತಿಂಗಳುಗಳಲ್ಲಿ ಪ್ರಯಾಣಿಸಿದ್ದಾರೆ.

ದಲೈ ಲಾಮಾ ಅವರನ್ನು ಭೇಟಿ ಮಾಡಿದರೆ ಕಾಲ್ನಡಿಗೆಯ ಪ್ರಯಾಣ ಸಾರ್ಥಕವಾಗುತ್ತದೆ. ದಲೈಲಾಮಾ ಅವರೇ ನನಗೆ ಸ್ಫೂರ್ತಿ. ಅವರು ಇಡೀ ವಿಶ್ವದಲ್ಲಿ ಶಾಂತಿಯ ಸಂದೇಶವನ್ನು ನೀಡುವ ರೀತಿಯಲ್ಲಿ, ತಾನು ಜನರಿಗೆ ಶಾಂತಿ ಸಂದೇಶವನ್ನು ನೀಡಲು ಕಾಲ್ನಡಿಗೆಯಲ್ಲಿ ಏಕೆ ಪ್ರಯಾಣಿಸಬಾರದೆಂದು ಯೋಚಿಸಿ ಪಾದಯಾತ್ರೆ ಆರಂಭಿಸಿದೆ ಎಂದರು.

ಇದನ್ನೂ ಓದಿ: ಭಾರತದಲ್ಲಿ ಬೌದ್ಧ ಧರ್ಮ ಮರುಹುಟ್ಟು ಪಡೆದಿದೆ: ಮೋದಿ ಶ್ಲಾಘಿಸಿದ ದಕ್ಷಿಣ ಕೊರಿಯಾದ ಬೌದ್ಧ ಸನ್ಯಾಸಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.