ಧರ್ಮಶಾಲಾ(ಹಿಮಾಚಲ ಪ್ರದೇಶ): ಟಿಬೇಟಿಯನ್ ಟೂರಿಸ್ಟ್ ಗೈಡ್ ಚೀನಾದ ಕಾರಾಗೃಹಗಳಲ್ಲಿ ಸಾವನ್ನಪ್ಪಿರುವ ಪ್ರಕರಣವನ್ನು ಖಂಡಿಸಿ ಟಿಬೆಟಿಯನ್ ಕಾರ್ಯಕರ್ತರು ಧರ್ಮಶಾಲಾದಲ್ಲಿ ಕ್ಯಾಂಡಲ್ ಲೈಟ್ ಜಾಥಾ ನಡೆಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಜಿನ್ಪಾ ಅವರಿಗೆ ಚಿತ್ರಹಿಂಸೆ ನೀಡಲಾಗಿದೆ. ಚೀನಾ ಅಧಿಕಾರಿಗಳ ನಡೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಘಟನೆ ಚೀನಾದ ಕಾರಾಗೃಹಗಳಲ್ಲಿ ರಾಜಕೀಯ ಕೈದಿಗಳನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದನ್ನು ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚೀನಾ ಆಂತರಿಕ ವಿಚಾರಗಳು, ಪ್ರತಿಭಟನೆ, ರಾಜತಾಂತ್ರಿಕತೆಗೆ ಸಂಬಂಧಿಸಿದ ವಿಷಯಗಳನ್ನು ವಿದೇಶಿ ಮಾಧ್ಯಮಗಳಿಗೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಚೀನಾ ಅಧಿಕಾರಿಗಳು ನವೆಂಬರ್ 8, 2013 ರಂದು ಕುಂಚೋಕ್ ಜಿನ್ಪಾ (51) ಅವರನ್ನು ವಶಕ್ಕೆ ಪಡೆದಿದ್ದರು. ಆದರೆ ಈ ಬಗ್ಗೆ ಅವರ ಕುಟುಂಬಕ್ಕೆ ಮಾಹಿತಿ ತಿಳಿಸಿರಲಿಲ್ಲ. ಅಲ್ಲದೆ ಆ ಕುರಿತು ಯಾವುದೇ ಸುದ್ದಿ ಹೊರಬರದಂತೆ ನೋಡಿಕೊಳ್ಳಲಾಗಿತ್ತು. ನಂತರ ಕುಟುಂಬಸ್ಥರಿಗೆ ತಿಳಿಸದೇ ಜೈಲಿನಿಂದ ವರ್ಗಾವಣೆ ಮಾಡಿದ ಮೂರು ತಿಂಗಳೊಳಗೆ ಅಂದ್ರೆ ಫೆಬ್ರವರಿ 6, 2021 ರಂದು ಟಿಬೆಟಿಯನ್ನ ಲಾಸಾದ ಆಸ್ಪತ್ರೆಯಲ್ಲಿ ನಿಧನರಾದರು.
ಸ್ಥಳೀಯ ಮೂಲಗಳ ಪ್ರಕಾರ ಆತ ರಕ್ತಸ್ರಾವ ಹಾಗೂ ಪಾರ್ಶ್ವವಾಯುವಿಯಿಂದ ನರಳುತ್ತಿದ್ದ ಎನ್ನಲಾಗ್ತಿದೆ. 21 ವರ್ಷಗಳ ಕಾಲ ಶಿಕ್ಷೆ ವಿಧಿಸಿರುವುದು ಹಾಗೂ ಅಪರಾಧದ ಕುರಿತು ಈವರೆಗೂ ಸಾರ್ವಜನಿಕವಾಗಿ ಎಲ್ಲಿಯೂ ಮಾಹಿತಿ ಲಭ್ಯವಾಗಿಲ್ಲ ಎಂದು ಟಿಬೇಟಿಯನ್ ಮಾನವ ಹಕ್ಕು ಮತ್ತು ಪ್ರಜಾಪ್ರಭುತ್ವ ಸಂಘಟನೆ (ಟಿಸಿಹೆಚ್ಆರ್ಡಿ) ಆರೋಪಿಸಿದೆ.