ಕೃಷ್ಣಾ(ಆಂಧ್ರ ಪ್ರದೇಶ): ತನ್ನ ಜ್ಞಾನದಿಂದ ಅದ್ಭುತಗಳನ್ನು ಸೃಷ್ಟಿಸುತ್ತಿರುವ ಮೂರು ವರ್ಷದ ಬಾಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ಅದ್ಭುತ ಪ್ರತಿಭೆಯಿಂದ ‘ಇಂಡಿಯನ್ ಬುಕ್ ಆಫ್ ರಿಕಾರ್ಡ್ಸ್ ಮತ್ತು ಇಂಟರ್ನ್ಯಾಷನಲ್ ಬುಕ್ ಆಫ್ ರಿಕಾರ್ಡ್ಸ್’ನಲ್ಲಿ ತನ್ನ ಸಾಧನೆ ಮೂಲಕ ಗಮನ ಸೆಳೆದಿದ್ದಾನೆ.
![Three years old boy is creating record, Three years old boy is creating record in Indian book of record, Indian book of record, Indian book of records news, ದಾಖಲೆ ಬರೆದ ಮೂರು ವರ್ಷದ ಬಾಲಕ, ಇಂಡಿಯನ್ ಬುಕ್ ರೆಕಾರ್ಡ್ಸ್ನಲ್ಲಿ ದಾಖಲೆ ಬರೆದ ಮೂರು ವರ್ಷದ ಬಾಲಕ, ಇಂಡಿಯನ್ ಬುಕ್ ರೆಕಾರ್ಡ್ಸ್, ಇಂಡಿಯನ್ ಬುಕ್ ರೆಕಾರ್ಡ್ಸ್ ಸುದ್ದಿ,](https://etvbharatimages.akamaized.net/etvbharat/prod-images/ap_vja_26_12_bala_medhavi_1_pkg_ap10044_1211digital_1605178640_959_1311newsroom_1605241120_793.jpg)
ವೇಮುರಿ ವೆಂಕಟೇಶ್ವರ ರಾವ್ ಮತ್ತು ಸ್ವರೂಪ ರಾಣಿ ಕೃಷ್ಣ ಜಿಲ್ಲೆಯ ಘಂಟಶಾಲದಲ್ಲಿ ವಾಸಿಸುತ್ತಿದ್ದಾರೆ. ಅವರ ಮಗ ಡಾ.ವೇಮುರಿ ಪ್ರವೀಣ್ ಕುಮಾರ್ ಮತ್ತು ಆತನ ಪತ್ನಿ ವೈದ್ಯರಾಗಿದ್ದು, ಅಮೆರಿಕದ ದಕ್ಷಿಣ ಕಾರೊಲಿನಾದಲ್ಲಿ ವಾಸಿಸುತ್ತಿದ್ದಾರೆ.
ವೇಮುರಿ ಪ್ರವೀಣ್ ಕುಮಾರ್ ಕುಟುಂಬ ಕೊರೊನಾ ಹರಡುವ ಮೊದಲು ಅಂದ್ರೆ ಜನವರಿಯಲ್ಲಿ ತಮ್ಮ ಮೂರು ವರ್ಷದ ಮಗ ಜೈ ಯೊಂದಿಗೆ ಭಾರತಕ್ಕೆ ಬಂದರು. ವೇಮುರಿ ಪ್ರವೀಣ್ ಕುಮಾರ್ ತನ್ನ ತಂದೆ-ತಾಯಿ ಜೊತೆ ಮಗ ಜೈ ಅನ್ನು ಬಿಟ್ಟು ಮತ್ತೆ ಅಮೆರಿಕಕ್ಕೆ ಹಿಂದುರಿಗಿದರು.
![Three years old boy is creating record, Three years old boy is creating record in Indian book of record, Indian book of record, Indian book of records news, ದಾಖಲೆ ಬರೆದ ಮೂರು ವರ್ಷದ ಬಾಲಕ, ಇಂಡಿಯನ್ ಬುಕ್ ರೆಕಾರ್ಡ್ಸ್ನಲ್ಲಿ ದಾಖಲೆ ಬರೆದ ಮೂರು ವರ್ಷದ ಬಾಲಕ, ಇಂಡಿಯನ್ ಬುಕ್ ರೆಕಾರ್ಡ್ಸ್, ಇಂಡಿಯನ್ ಬುಕ್ ರೆಕಾರ್ಡ್ಸ್ ಸುದ್ದಿ,](https://etvbharatimages.akamaized.net/etvbharat/prod-images/ap_vja_26_12_bala_medhavi_2_pkg_ap10044_1211digital_1605179255_413_1311newsroom_1605241120_56.jpg)
ಕೊರೊನಾದಿಂದ ಮನೆಯಲ್ಲೇ ಅಜ್ಜ-ಅಜ್ಜಿಯ ಜೊತೆ ಆಟವಾಡುತ್ತಾ ಕಾಲ ಕಳೆದಿದ್ದಾನೆ. ಈ ವೇಳೆ ಅಜ್ಜಾ-ಅಜ್ಜಿ ಜೈಗೆ ಇರುವ ನೆನಪಿನ ಶಕ್ತಿಯ ಬಗ್ಗೆ ತಿಳಿದಿದೆ. ಅಜ್ಜಿ ಸ್ವರೂಪ ರಾಣಿ ಮೊಮ್ಮಗ ಜೈಗೆ ವಿಶ್ವ ಭೂಪಟದಲ್ಲಿರುವ ದೇಶಗಳ ಹೆಸರುಗಳು ಮತ್ತು ಇತರ ವಿವರಗಳನ್ನು ನೆನಪಿಟ್ಟುಕೊಳ್ಳಲು ತರಬೇತಿ ನೀಡಿದರು. ಮೂರು ವರ್ಷದ ಬಾಲಕ ಜೈ ಈ ಆರೇಳು ತಿಂಗಳ ಅವಧಿಯಲ್ಲಿ ಚಿತ್ರಗಳನ್ನು, ಚಿತ್ರಗಳ ವಿವರಗಳನ್ನು ನೆನಪಿಟ್ಟುಕೊಳ್ಳುವ ಹವ್ಯಾಸವನ್ನು ಬೆಳೆಸಿಕೊಂಡನು.
ಮೊದಲಿಗೆ, ಆ ನಕ್ಷೆಯಲ್ಲಿನ ಹೆಸರುಗಳು, ದೇಶಗಳು ಮತ್ತು ಸಂಬಂಧಿತ ಧ್ವಜಗಳನ್ನು ಗುರುತಿಸಲು ಅಜ್ಜಿ ಜೈಗೆ ತರಬೇತಿ ನೀಡಿದರು. ನಂತರ ಜೈ ಯಾವುದೇ ಕ್ರಮದಲ್ಲಿ ವಿಶ್ವ ನಕ್ಷೆಗಳ ಪ್ರಶ್ನೆಗಳಿಗೆ ತಕ್ಷಣ ಉತ್ತರಿಸುವಂತಹ ಕಲೆಯನ್ನು ಕಲಿಸಿಕೊಟ್ಟರು. ಕೂಡಲೇ 195 ದೇಶಗಳ ಧ್ವಜ ಕಾರ್ಡ್‌ಗಳನ್ನು ತಂದ ಅಜ್ಜಿ ಜೈಗೆ ಅವುಗಳನ್ನು ಗುರುತಿಸಲು ತರಬೇತಿ ನೀಡಿದರು. ಕಡಿಮೆ ಸಮಯದಲ್ಲಿ ಜೈ ವಿಶ್ವ ಭೂಪಟದಲ್ಲಿರುವ ರಾಷ್ಟ್ರಗಳ ಧ್ವಜಗಳು ಮತ್ತು ವಿವರಗಳನ್ನು ಕಲಿತನು.
![Three years old boy is creating record, Three years old boy is creating record in Indian book of record, Indian book of record, Indian book of records news, ದಾಖಲೆ ಬರೆದ ಮೂರು ವರ್ಷದ ಬಾಲಕ, ಇಂಡಿಯನ್ ಬುಕ್ ರೆಕಾರ್ಡ್ಸ್ನಲ್ಲಿ ದಾಖಲೆ ಬರೆದ ಮೂರು ವರ್ಷದ ಬಾಲಕ, ಇಂಡಿಯನ್ ಬುಕ್ ರೆಕಾರ್ಡ್ಸ್, ಇಂಡಿಯನ್ ಬುಕ್ ರೆಕಾರ್ಡ್ಸ್ ಸುದ್ದಿ,](https://etvbharatimages.akamaized.net/etvbharat/prod-images/ap_vja_26_12_bala_medhavi_3_pkg_ap10044_1211digital_1605179236_872_1311newsroom_1605241120_86.jpg)
ಇದರ ಜೊತೆಗೆ ಜೈ ವಂಡರ್ ಕಿಡ್ ರಸಾಯನಶಾಸ್ತ್ರ, ಗ್ರಹಗಳು ಮತ್ತು ಇಂಗ್ಲಿಷ್, ತೆಲುಗು ಮತ್ತು ಹಿಂದಿ ಪದಗಳಲ್ಲಿನ ಅಂಶಗಳನ್ನು ಗ್ರಹಿಸಿದ್ದಾನೆ. ಮಗನ ಅಪರೂಪದ ಪ್ರತಿಭೆಯನ್ನು ಗುರುತಿಸಿದ ಪೋಷಕರು ‘ಇಂಡಿಯಾ ಬುಕ್ ಆಫ್ ರಿಕಾರ್ಡ್ಸ್’ಗೆ ಮಾಹಿತಿ ನೀಡಿದರು.
ಸಂಬಂಧಿತ ಪರೀಕ್ಷೆಯಲ್ಲಿ ಜೈ 112 ದೇಶಗಳ ಧ್ವಜಗಳನ್ನು ಗುರುತಿಸಿ ಸ್ವಯಂಪ್ರೇರಿತ ಉತ್ತರ ನೀಡುವ ಮೂಲಕ ನೆರೆದಿದ್ದವರನ್ನು ಆಶ್ಚರ್ಯಗೊಳಿಸಿದರು. ಬಳಿಕ ಜೈ ಹೆಸರನ್ನು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ನೋಂದಾಯಿಸಿದರು. ಬಳಿಕ ಅಕ್ಟೋಬರ್‌ನಲ್ಲಿ ಸಂಬಂಧಿತ ಪರೀಕ್ಷೆಯನ್ನು ಗೆಲ್ಲುವ ಮೂಲಕ ದಕ್ಷಿಣ ಕಾರೊಲಿನಾದ ‘ಇಂಟರ್ನ್ಯಾಷನಲ್ ಬುಕ್ ಆಫ್ ರಿಕಾರ್ಡ್ಸ್’ನಲ್ಲಿ ತನ್ನ ಹೆಸರನ್ನು ದಾಖಲಿಸಿದನು. ಈ ಮೂಲಕ ಬಾಲಕ ಜೈ ‘ಸೂಪರ್ ಟ್ಯಾಲೆಂಟೆಡ್ ಕಿಡ್ ಅವಾರ್ಡ್’ ಪಡೆದನು.