ETV Bharat / bharat

ಮುಂಬೈಗೆ ಮೂವರು ಉಗ್ರರು ಎಂಟ್ರಿ: ಮಾಹಿತಿ ಸಿಗುತ್ತಲೇ ತನಿಖೆ ಚುರುಕುಗೊಳಿಸಿದ ಖಾಕಿ - ಮುಂಬೈ ಪೊಲೀಸ್

ಶುಕ್ರವಾರ ಮುಂಬೈಯನ್ನು ತಲ್ಲಣಗೊಳಿಸುವಂತ ಕರೆಯೊಂದು ಕಂಟ್ರೋಲ್ ರೂಂಗೆ ಬಂದಿತ್ತು. ದುಬೈನಿಂದ ಮುಂಬೈಗೆ ಮೂವರು ಉಗ್ರರು ಆಗಮಿಸಿದ್ದಾರೆ ಎಂದು ರಾಜಾ ಥೋಂಗೆ ಎಂಬುವರು ಹೇಳಿದ್ದಾರೆ. ಈ ಭಯೋತ್ಪಾದಕರು ಪಾಕಿಸ್ತಾನಕ್ಕೆ ಸಂಬಂಧಿಸಿದವರು ಎಂಬ ಮಾಹಿತಿ ಬಂದಿದೆ. ಇದರಿಂದ ಮುಂಬೈ ಪೊಲೀಸರು ಅಲರ್ಟ್ ಆಗಿದ್ದಾರೆ.

Three terrorists entered Mumbai
ಮುಂಬೈ ಪ್ರವೇಶಿಸಿದ ಮೂವರು ಉಗ್ರರು
author img

By

Published : Apr 8, 2023, 3:59 PM IST

ಮುಂಬೈ (ಮಹಾರಾಷ್ಟ್ರ): ಕಳೆದ ಹಲವು ತಿಂಗಳುಗಳಿಂದ ಪೊಲೀಸರಿಗೆ ಬೆದರಿಕೆ ಕರೆಗಳು ಹಾಗೂ ಇ-ಮೇಲ್‌ಗಳು ಬರುತ್ತಿವೆ. ಹೌದು, ಭಯೋತ್ಪಾದಕರು ಮುಂಬೈಗೆ ಪ್ರವೇಶಿಸಿದ್ದಾರೆ ಅಥವಾ ಮುಂಬೈನಲ್ಲಿ ಬಾಂಬ್ ಸ್ಫೋಟ ನಡೆಯಲಿದೆ ಎಂದು ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಮುಂಬೈ ಪೊಲೀಸ್ ನಿಯಂತ್ರಣ ರೂಂಗೆ ಕರೆಯೊಂದು ಬಂದಿದೆ. ಶುಕ್ರವಾರ ಬೆಳಗ್ಗೆ ದುಬೈನಿಂದ ಮೂವರು ಉಗ್ರರು ಮುಂಬೈ ಪ್ರವೇಶಿಸಿದ್ದಾರೆ ಎಂದು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇದರಿಂದ ಮುಂಬೈ ಪೊಲೀಸರು ತ್ವರಿತ ಪರಿಶೀಲನೆಗೆ ಮುಂದಾಗಿದ್ದಾರೆ. ಈ ಮಾಹಿತಿ ನಿಜವೋ ಅಥವಾ ಸುಳ್ಳೋ ಎನ್ನುವ ಬಗ್ಗೆ ಮುಂಬೈ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.

ಭಯೋತ್ಪಾದಕರಿಗೆ ಬಗ್ಗೆ ಏನಿದು ಮಾಹಿತಿ?: ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ ವ್ಯಕ್ತಿ ತನ್ನ ಹೆಸರು ರಾಜಾ ಥೋಂಗೆ ಎಂದು ಹೇಳಿದ್ದಾನೆ. ಮುಂಬೈನಲ್ಲಿ ದೋ ನಂಬರ್ ಬ್ಯುಸಿನೆಸ್ ಇದೆ ಎಂದು ಆತ ಮಾಹಿತಿ ನೀಡಿದ್ದಾರೆ. ಅದೇ ರೀತಿ, ರಾಜಾ ಥೋಂಗೆ ಎಂಬ ವ್ಯಕ್ತಿಯು, ಶುಕ್ರವಾರ ಭಯೋತ್ಪಾದಕರು ದುಬೈನಿಂದ ಮುಂಬೈಗೆ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಮಾಹಿತಿಯಿಂದಾಗಿ, ಮುಂಬೈ ಪೊಲೀಸರ ತನಿಖಾ ತಂಡವು ಈ ಮಾಹಿತಿಯನ್ನು ಪರಿಶೀಲಿಸುವಲ್ಲಿ ನಿರತವಾಗಿದೆ.

ಪಾಕಿಸ್ತಾನದೊಂದಿಗೆ ಉಗ್ರರ ನಂಟು: ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ ರಾಜಾ ಥೋಂಗೆ, ಮುಂಬೈ ಪ್ರವೇಶಿಸಿದ ಮೂವರು ಭಯೋತ್ಪಾದಕರು ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಮೂವರು ಭಯೋತ್ಪಾದಕರ ಪೈಕಿ ಒಬ್ಬನ ಹೆಸರು ಮುಜಿಮ್ ಸೈಯದ್ ಎಂದು ಅವರು ಮಾಹಿತಿ ನೀಡಿದ್ದಾರೆ. ಅದೇ ರೀತಿ ಭಯೋತ್ಪಾದಕ ಮುಜಿಮ್ ಸೈಯದ್​ನ ಕಾರ್ ನಂಬರ್ ಮತ್ತು ಮೊಬೈಲ್ ಸಂಖ್ಯೆಯನ್ನು ಸಹ ರಾಜಾ ಥೋಂಗೆ, ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ನೀಡಿದ್ದಾರೆ. ಮುಜಿಮ್ ಸೈಯದ್ ಮೊಬೈಲ್ ಸಂಖ್ಯೆ ಮತ್ತು ವಾಹನದ ಸಂಖ್ಯೆಯ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆ ಕರೆ ನಿಜವೋ ಸುಳ್ಳೋ?: ಅದೇ ರೀತಿ ಮುಂಬೈ ಕಂಟ್ರೋಲ್ ರೂಂಗೆ ಕರೆ ಮಾಡಿದ ರಾಜಾ ಥೋಂಗೆ ಅವರ ಸಂಪರ್ಕ ಸಂಖ್ಯೆಯನ್ನು ಮುಂಬೈ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಆದರೆ, ಈ ಕರೆ ನಿಜವೋ ಅಥವಾ ಹುಸಿ ಕರೆಯೋ ಎಂದು ಪೊಲೀಸರು ಇನ್ನೂ ಪರಿಶೀಲಿಸುತ್ತಿದ್ದಾರೆ. ಅದೇ ರೀತಿ, ಮೂವರು ಭಯೋತ್ಪಾದಕರು ಅಪಘಾತ ಮಾಡಲು ಮುಂಬೈಗೆ ಪ್ರವೇಶಿಸಿದ್ದಾರೆಯೇ? ಈ ಬಗ್ಗೆಯೂ ಮುಂಬೈ ಪೊಲೀಸರು ತ್ವರಿತ ಗತಿಯಲ್ಲಿ ತನಿಖೆ ಕೈಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬಾಂಬ್ ಸ್ಫೋಟ ಬಗ್ಗೆ ಬಂದಿತ್ತು ಕರೆ: ಇದಕ್ಕೂ ಮುನ್ನ ಮುಂಬೈ ಪೊಲೀಸ್ ಟ್ರಾಫಿಕ್ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಪ್ರವೀಣ್ ಪಡವಾಲ್ ಅವರಿಗೆ ರಾತ್ರಿ ಒಂದು ಗಂಟೆ ಸುಮಾರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬರು ಮೀರಾ ರೋಡ್ ಭಾಯಂದರ್​​ನಲ್ಲಿ ಬಾಂಬ್ ಸ್ಫೋಟ ನಡೆಯಲಿದೆ ಎಂದು ಮಾಹಿತಿ ನೀಡಿದ್ದರು. ಆ ಮಾಹಿತಿಯೂ ಸುಳ್ಳು ಎಂದು ತಿಳಿದಿದೆ. ಅದಕ್ಕೂ ಮುನ್ನವೇ ಕಂಟ್ರೋಲ್ ರೂಂನಲ್ಲಿ ಸಂಚಾರ ಪೊಲೀಸರಿಗೆ ವಾಟ್ಸ್​ಆ್ಯಪ್ ಸಂದೇಶ ಬಂದಿತ್ತು. ಮುಂಬೈನಲ್ಲಿ ಬಾಂಬ್ ಸ್ಫೋಟ ನಡೆಸಲಾಗುವುದು ಎಂದೂ ತಿಳಿಸಲಾಗಿತ್ತು. ಈ ಹಿಂದೆ ನಾಗ್ಪಾಡಾದಲ್ಲಿರುವ ಮುಂಬೈ ಪೊಲೀಸ್ ಕಂಟ್ರೋಲ್ ರೂಂನಲ್ಲಿ ಬಾಂಬ್ ಇಡಲಾಗಿದೆ ಎಂದು ಕರೆ ಬಂದಿತ್ತು. ಆರೋಪಿಯನ್ನು 24 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದರು. ಆದರೆ, ಈ ಎಲ್ಲಾ ಫೋನ್ ಕರೆಗಳು ಮತ್ತು ಸಂದೇಶಗಳು ಹುಸಿ ಅನ್ನೋದು ನಂತರ ಗೊತ್ತಾಗಿತ್ತು.

ಇದನ್ನು ಓದಿ: ಬಿಹಾರ ಸಚಿವ ತೇಜ್​ ಪ್ರತಾಪ್​ ಆಪ್ತರ ಬ್ಯಾಗ್​ಗಳ ಹೊರ ಹಾಕಿದ ಹೋಟೆಲ್ ಸಿಬ್ಬಂದಿ: ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.