ETV Bharat / bharat

ಭಾರತೀಯ ಸಂಪ್ರದಾಯದಂತೆ ಹಸೆಮಣೆ ಏರಿದ ಮೂವರು ರಷ್ಯಾ ಜೋಡಿಗಳು - ಹರಿದ್ವಾರದಲ್ಲಿ ರಷ್ಯಾ ಜನರ ಮದುವೆ

3 Russian cupels not the tie: ಮೂರು ರಷ್ಯಾ ಜೋಡಿಗಳು ಭಾರತೀಯ ಸಂಪ್ರದಾಯದ ಪ್ರಕಾರ ದಾಂಪತ್ಯ ಜೀವನ ಆರಂಭಿಸಿದ್ದಾರೆ.

Russian couples get married as per Indian customs
ಭಾರತೀಯ ಸಂಪ್ರದಾಯದಂತೆ ಹಸೆಮಣೆ ಏರಿದ ಮೂರು ರಷ್ಯಾ ಜೋಡಿ
author img

By ETV Bharat Karnataka Team

Published : Oct 5, 2023, 11:00 AM IST

ಹರಿದ್ವಾರ (ಉತ್ತರಾಖಂಡ): ಅಖಂಡ್​​ ಪರಮ್​​​ಧಾಮ್​​ ಆಶ್ರಮದಲ್ಲಿ ಮೂವರು ರಷ್ಯಾ ಪ್ರಜೆಗಳು ಭಾರತೀಯ ಪದ್ಧತಿಯಂತೆ ಹಸೆಮಣೆ ಏರಿದರು. ರಷ್ಯಾದ 50 ಮಂದಿ ಆಧ್ಯಾತ್ಮಿಕ ಪ್ರಯಾಣದ ಸಲುವಾಗಿ ಹರಿದ್ವಾರಕ್ಕೆ ಆಗಮಿಸಿದ್ದಾರೆ. ಭಾರತೀಯ ಸಂಸ್ಕೃತಿ ರಷ್ಯಾ ಪ್ರವಾಸಿಗರನ್ನು ಸೆಳೆದಿದೆ. ರಷ್ಯಾದ 50 ಜನರ ಪೈಕಿ ಮೂರು ಜೋಡಿ ಭಾರತದಲ್ಲೇ ಮದುವೆಯಾಗಲು ನಿರ್ಧರಿಸಿತು. ಮೂರು ಜೋಡಿಗಳು ಆಶ್ರಮದಲ್ಲಿ ತಂಗಿದ್ದು, ಭಾರತೀಯ ಪದ್ಧತಿಯಂತೆ ವಿಧಿವಿಧಾನಗಳೊಂದಿಗೆ ವಿವಾಹವಾದರು.

three-russian-couples-get-married-as-per-indian-customs-in-haridwar
ಭಾರತೀಯ ಸಂಪ್ರದಾಯದಂತೆ ಹಸೆಮಣೆ ಏರಿದ ಮೂವರು ರಷ್ಯಾ ಜೋಡಿಗಳು

ಈ ಮದುವೆ ಸಮಾರಂಭದಲ್ಲಿ ರಷ್ಯಾ ನಾಗರಿಕರು ಭಾರತೀಯರೊಂದಿಗೆ ಸೇರಿ ಕುಣಿದು ಕುಪ್ಪಳಿಸಿದರು. ಡ್ರಮ್ಸ್, ಉತ್ತರಾಖಂಡದ ವಾದ್ಯಗಳ ಸದ್ದಿಗೆ ರಷ್ಯಾ ಮಂದಿ ಬಹಳ ಹುರುಪಿನಿಂದ ನೃತ್ಯ ಮಾಡಿದರು. ಮೊದಲು, ಮದುವೆಯ ಮೆರವಣಿಗೆಯನ್ನು ಭಾರತೀಯ ಪದ್ಧತಿಯಂತೆ ನಡೆಸಲಾಯಿತು. ಆಶ್ರಮದಲ್ಲಿ ನಿರ್ಮಿಸಲಾದ ಶಿವ ದೇವಾಲಯದಲ್ಲಿ ನವಜೋಡಿಗಳು ಶಿವನ ಆಶೀರ್ವಾದ ಪಡೆದರು. ನಂತರ ಅಖಂಡ್​​​ ಪರಮ್​​ಧಾಮ್​ನ ಅಧ್ಯಕ್ಷ ಸ್ವಾಮಿ ಪರಮಾನಂದ್ ಗಿರಿ ಮಹಾರಾಜರ ಆಶೀರ್ವಾದ ಪಡೆದು, ಪರಸ್ಪರ ಹಾರ ಬದಲಾಯಿಸಿಕೊಂಡರು. ಬಳಿಕ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಮದುವೆ ಸಂಪನ್ನಗೊಂಡಿತು. ಮಂತ್ರ ಪಠಣಗಳ ನಡುವೆ ಮಂಟಪದಲ್ಲಿ ಸಪ್ತಪದಿ ತುಳಿದರು.

ಮೂರು ರಷ್ಯಾ ಜೋಡಿಗಳು ಭಾರತೀಯ ಸಂಪ್ರದಾಯದ ಪ್ರಕಾರ ದಾಂಪತ್ಯ ಜೀವನ ಆರಂಭಿಸಿದ್ದಾರೆ

ವಿವಾಹ ಸಮಾರಂಭದಲ್ಲಿ ವರರು ಭಾರತೀಯ ಸಂಪ್ರದಾಯದ ಶೆರ್ವಾನಿ ಧರಿಸಿದ್ದರೆ, ವಧು ಭಾರತೀಯ ಪದ್ಧತಿಯ ಲೆಹೆಂಗಾದಲ್ಲಿ ಮಿಂಚಿದರು. ಈ ಹಿಂದೆಯೂ ಅನೇಕ ರಷ್ಯನ್ ಪ್ರಜೆಗಳು ಭಾರತೀಯ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದಾರೆ ಎಂದು ರಷ್ಯಾ ನಾಗರಿಕರು ತಿಳಿಸಿದ್ದಾರೆ. ಹಲವು ವರ್ಷ ಕಳೆದಿದ್ದು, ಪರಸ್ಪರ ಪ್ರೀತಿ, ವಿಶ್ವಾಸ, ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎಂದು ಸಂತಸ ಹಂಚಿಕೊಂಡರು. ಈ ಮದುವೆ ಕಾರ್ಯಕ್ರಮದಲ್ಲೂ ಕೊನೆವರೆಗೆ ಪರಸ್ಪರರ ಕಷ್ಟ ಸುಖದಲ್ಲಿ ಭಾಗಿ ಆಗುತ್ತೇವೆಂದು ನವಜೋಡಿಗಳು ಪ್ರತಿಜ್ಞೆ ಮಾಡಿದ್ದಾರೆ.

ಅಖಂಡ್​​ ಪರಮ್​​​ಧಾಮ್​​ ಆಶ್ರಮದಲ್ಲಿ ಮೂವರು ರಷ್ಯಾ ಪ್ರಜೆಗಳು ಭಾರತೀಯ ಪದ್ಧತಿಯಂತೆ ಹಸೆಮಣೆ ಏರಿದರು

ಭಾರತೀಯ ಸಂಸ್ಕೃತಿಯಿಂದ ನವಜೋಡಿಗಳು ಹೆಚ್ಚು ಪ್ರಭಾವಿತರಾಗಿದ್ದಾರೆ ಎಂದು ಜೊತೆಗಿದ್ದವರು ತಿಳಿಸಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ನಿರ್ಧರಿಸಿ, ಭಾರತೀಯ ಪದ್ಧತಿ ಪ್ರಕಾರ ನವಜೀವನ ಆರಂಭಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಕಲ್ಲು ತೂರಾಟ ಪ್ರಕರಣ: ರಾಗಿಗುಡ್ಡಕ್ಕಿಂದು ಬಿಜೆಪಿಯ ಸತ್ಯಶೋಧನಾ ಸಮಿತಿ ಭೇಟಿ

ಭಾರತ ಹಲವು ಸಂಪ್ರದಾಯ, ಆಚರಣೆಗಳ ತವರೂರು. ಸಾಂಪ್ರದಾಯಿಕತೆಗೆ ನಮ್ಮ ದೇಶ ಹೆಸರುವಾಸಿ. ಭಾರತೀಯರು ಅದೆಷ್ಟೇ ಆಧುನಿಕತೆಗೆ ಒಗ್ಗಿಕೊಂಡರೂ ಕೂಡ ಸಂಪ್ರದಾಯ ಮರೆತಿಲ್ಲ. ಭಾರತೀಯ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳಲು, ತಿಳಿದುಕೊಳ್ಳಲು ವಿದೇಶಿಗರು ಆಗಮಿಸುತ್ತಾರೆ. ಅದೆಷ್ಟೋ ಮಂದಿ ಭಾರತೀಯ ಆಚರಣೆಗಳಿಗೆ ಮನಸೋಲುತ್ತಾರೆ. ಇದೀಗ ಆಗಮಿಸಿರುವ ರಷ್ಯಾ ಜನರು ಕೂಡ ಇಲ್ಲಿನ ಆಚರಣೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 50 ಮಂದಿ ಪೈಕಿ ಮೂರು ಜೋಡಿ ಮದುವೆಯಾಗಿದ್ದು, ಭಾರತೀಯರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.