ETV Bharat / bharat

ಹಬ್ಬದ ಸಂಭ್ರಮಕ್ಕೆ ಮಣ್ಣು ತರಲು ಹೋದಾಗ ದುರಂತ: ಮಗು ಸೇರಿ ಮೂವರ ದುರ್ಮರಣ - ದೀಪಾವಳಿ ಹಬ್ಬ

ದೀಪಾವಳಿಗೂ ಮುನ್ನ ಮನೆಗಳನ್ನು ಸ್ವಚ್ಛಗೊಳಿಸಲು ಕಾಡಿನಿಂದ ಮಣ್ಣು ತರಲು ಹೋದಾಗ ದುರಂತ ಸಂಭವಿಸಿ, ಮಹಿಳೆಯರಿಬ್ಬರು ಸೇರಿ ಮೂವರು ಅಸುನೀಗಿದ್ದಾರೆ.

three person died in chatra
ಮಣ್ಣನಿನಡಿ ಸಿಲುಕಿ ಹೆಣ್ಣ ಮಗು ಸೇರಿ ಮೂವರು ಸಾವು
author img

By

Published : Oct 16, 2022, 9:08 PM IST

ಛಾತ್ರ(ಜಾರ್ಖಂಡ್​): ಜಿಲ್ಲೆಯ ಪ್ರತಾಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾರಾ ಗ್ರಾಮದಲ್ಲಿ ಮಣ್ಣು ಅಗೆಯುವಾಗ​ ಭೂಕುಸಿತ ಸಂಭವಿಸಿ ಇಬ್ಬರು ಮಹಿಳೆಯರು ಮತ್ತು ಹೆಣ್ಣು ಮಗು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಮಹಿಳೆಯರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಲಗಳ ಪ್ರಕಾರ ಮಹಿಳೆಯರು ದೀಪಾವಳಿಗೂ ಮುನ್ನ ತಮ್ಮ ಮನೆಗಳನ್ನು ಸ್ವಚ್ಛಗೊಳಿಸಲು ಕಾಡಿನಿಂದ ಮಣ್ಣು ತರಲು ಹೋಗಿದ್ದರು. ಚಿಕ್ಕ ಗುಹೆಯಾಕಾರದ ಜಾಗದಲ್ಲಿ ಮಣ್ಣು ಅಗೆಯುವಾಗ ಏಕಾಏಕಿ ಕುಸಿದು ಮಣ್ಣಿನಡಿ ಸಿಲುಕಿದ್ದಾರೆ.

ಮಹಿಳೆಯರ ಕಿರುಚಾಟ ಕೇಳಿ ಸ್ಥಳೀಯರು ಸ್ಥಳಕ್ಕಾಗಮಿಸಿ ಅವರನ್ನು ಹೊರತೆಗೆದಿದ್ದಾರೆ. ಬಳಿಕ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು, ಅಲ್ಲಿ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನಿಬ್ಬರನ್ನು ಬೇರೊಂದು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಿಂದ ಗ್ರಾಮದಲ್ಲಿ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಸೂತಕ ಆವರಿಸಿದೆ.

ಇದನ್ನೂ ಓದಿ: ಗಾಯಾಳುವನ್ನು ಆಸ್ಪತ್ರೆಗೆ ಕಾರಿನಲ್ಲಿ ಕರೆದೊಯ್ದು ಶಿವಮೊಗ್ಗ ಎಎಸ್​ಪಿ.. ವಿಧಿಯಾಟಕ್ಕೆ ವ್ಯಕ್ತಿ ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.