ETV Bharat / bharat

ಬಸ್ ​- ಪ್ಯಾಸೆಂಜರ್ ವಾಹನದ ನಡುವೆ ಭೀಕರ ಅಪಘಾತ: ಮೂವರ ದುರ್ಮರಣ, ನಾಲ್ವರಿಗೆ ಗಾಯ - ಅಮ್ರೋಹಾ ಜಿಲ್ಲೆಯಲ್ಲಿ ಭೀಕರ ಅಪಘಾತ

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಬಸ್ ಮತ್ತು ಪ್ಯಾಸೆಂಜರ್ ವಾಹವದ ನಡುವೆ ಭೀಕರ ಅಪಘಾತವಾಗಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.

three-passengers-killed-and-4-critical-in-road-accident-between-bus-and-magic-at-amroha
ಬಸ್​-ಪ್ಯಾಸೆಂಜರ್ ವಾಹನದ ನಡುವೆ ಭೀಕರ ಅಪಘಾತ: ಮೂವರ ದುರ್ಮರಣ, ನಾಲ್ವರಿಗೆ ಗಾಯ
author img

By

Published : Mar 17, 2022, 12:02 PM IST

ಅಮ್ರೋಹಾ(ಉತ್ತರ ಪ್ರದೇಶ): ಬಸ್ ಮತ್ತು ಟಾಟಾ ಮ್ಯಾಜಿಕ್ ಪ್ಯಾಸೆಂಜರ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿ, ಸ್ಥಳದಲ್ಲಿ ಮೂರು ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ಅಪಘಾತದಲ್ಲಿ 4 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಬಚ್ರೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಧನೋರಾ - ಬಿಜ್ನೋರ್ ರಸ್ತೆಯಲ್ಲಿ, ಮುಂಭಾಗದಿಂದ ವೇಗವಾಗಿ ಬಂದ ಬಸ್ ಪ್ಯಾಸೆಂಜರ್ ವಾಹನಕ್ಕೆ ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಘಟನೆಯ ನಂತರ ಬಸ್ ಚಾಲಕ ತಲೆಮರೆಸಿಕೊಂಡಿದ್ದಾನೆ.

ಪೊಲೀಸರು ಗಾಯಾಳುಗಳನ್ನು ಸಿಎಚ್‌ಸಿಗೆ ದಾಖಲಿಸಿದ್ದಾರೆ. ಪ್ಯಾಸೆಂಜರ್ ವಾಹನದಲ್ಲಿದ್ದವರು ದೆಹಲಿಯಿಂದ ತಮ್ಮ ಹಳ್ಳಿಗಳಿಗೆ ಮರಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಪೊಲೀಸರು ಮೂರು ಮೃತದೇಹಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪರಾರಿಯಾಗಿರುವ ಬಸ್ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಭೋಪಾಲ್ - ನಾಗ್ಪುರ ಹೆದ್ದಾರಿಯಲ್ಲಿ ಹೈದರಾಬಾದ್‌ಗೆ ಬರುತ್ತಿದ್ದ ಬಸ್‌ಗೆ ಬೆಂಕಿ; ಪ್ರಯಾಣಿಕರು ಪಾರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.