ETV Bharat / bharat

ಗುವಾಹಟಿಯಲ್ಲಿ ಹೆಚ್ಚುತ್ತಿದೆ ಶಿಂಧೆ ಬಲ.. ಅಲಗಾಡುತ್ತಿದೆ ಮಹಾ ಅಘಾಡಿ ಬುಡ, ಸಭೆ ಕರೆದ ಎನ್​ಸಿಪಿ - ಮಹಾರಾಷ್ಟ್ರ ಸರ್ಕಾರದ ಸುದ್ದಿ

ಏಕನಾಥ್ ಶಿಂಧೆ ಅವರ ಬಂಡಾಯ ಸರ್ಕಾರವನ್ನು ಅಸ್ಥಿರಗೊಳಿಸಿದೆ ಮತ್ತು ರಾಜಕೀಯ ಬೆಳವಣಿಗೆಗಳನ್ನು ಹೆಚ್ಚಿಸಿದೆ. ಶಿವಸೇನೆ ನಾಯಕ ಏಕನಾಥ್ ಶಿಂಧೆರನ್ನು ಬೆಂಬಲಿಸುವ ಶಾಸಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಮಧ್ಯೆ ಎನ್​​ಸಿಪಿ ನಾಯಕ ಶರದ್ ಪವಾರ್ ತಮ್ಮ ಸದಸ್ಯರೊಂದಿಗೆ ಸಭೆ ನಡೆಸಲಿದ್ದಾರೆ. ಮಹಾ ಸರ್ಕಾರದಲ್ಲಿ ಆಗುತ್ತಿರುವ ಇತ್ತೀಚಿನ ಬೆಳವಣಿಗೆ ಬಗ್ಗೆ ತಿಳಿಯೋಣಾ ಬನ್ನಿ.

Mavia government  Shiv Sena MLAs have reached Guwahati  Maharashtra government news  Maharashtra political news  ಮಾವಿಯಾ ಸರ್ಕಾರ  ಗುವಾಹಟಿ ತಲುಪಿದ ಶಿವಸೇನೆ ಶಾಸಕರು  ಮಹಾರಾಷ್ಟ್ರ ಸರ್ಕಾರದ ಸುದ್ದಿ  ಮಹಾರಾಷ್ಟ್ರ ರಾಜಕೀಯ ಸುದ್ದಿ
ಗುವಾಹಟಿಯಲ್ಲಿ ಹೆಚ್ಚುತ್ತಿದೆ ಶಿಂಧೆ ಬಲ
author img

By

Published : Jun 23, 2022, 9:50 AM IST

Updated : Jun 23, 2022, 12:54 PM IST

ಗುವಾಹಟಿ: ಮಹಾರಾಷ್ಟ್ರ ರಾಜಕೀಯದಲ್ಲಿ ನಡೆಯುತ್ತಿರುವ ಗೊಂದಲದ ನಡುವೆಯೇ ಶಿವಸೇನೆಯ ಒಟ್ಟು ಏಳು ಶಾಸಕರು ಗುವಾಹಟಿಗೆ ತೆರಳಿದ್ದಾರೆ. ಶಾಸಕರು ಸೂರತ್‌ನಿಂದ ಅಸ್ಸೋಂನ ಗುವಾಹಟಿ ತಲುಪಿದ್ದು, ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆರನ್ನು ಭೇಟಿಯಾಗಿದ್ದಾರೆ. ಶಾಸಕರ ಹೆಸರು ಸದಾ ಸರ್ವಂಕರ, ಮಂಗೇಶ್ ಕುಡಾಳ್ಕರ್, ಉದರ್ಕರ್, ದಾದಾ ವ್ಯೂಸಿಯಾ, ದೀಪಕ್​ ಮರ್ಕಾಂತ್​, ಅಶ್ವಿನಿ ಜೈಸ್ವಾಲ್ ಬಂಡಾಯ ಶಾಸಕ ಶಿಂಧೆರನ್ನು ಭೇಟಿ ಮಾಡಲಿದ್ದಾರೆ. ಮಂಗಳವಾರ ಮತ್ತು ಬುಧವಾರದ ಈ ಎರಡು ದಿನಗಳಲ್ಲಿ ಶಿವಸೇನೆಯ ಆರು ಅತೃಪ್ತ ಶಾಸಕರು ಸೂರತ್‌ನಲ್ಲಿ ಬೀಡುಬಿಟ್ಟಿದ್ದರು.

ಸೂರತ್​ಗೆ ತೆರಳಿದ ಮೂವರು ಶಾಸಕರು: ಮಹಾರಾಷ್ಟ್ರ ರಾಜಕೀಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗಳು ಕುತೂಹಲ ಮೂಡಿಸುತ್ತಿವೆ. ಶಿವಸೇನೆಯ ಏಳು ಶಾಸಕರು ಬುಧವಾರ ರಾತ್ರಿ ಮುಂಬೈಯಿಂದ ಸೂರತ್‌ನ ಲೇ ಮೆರಿಡಿಯನ್ ಹೋಟೆಲ್‌ಗೆ ತಲುಪಿದ್ದರು. ಸದಾ ಸರ್ವಂಕರ್​, ಮಂಗೇಶ್ ಕುಡಾಳ್ಕರ್, ಉದರ್ಕರ್, ದಾದಾ ವ್ಯೂಸಿಯಾ, ದೀಪಕ್​ ಮರ್ಕಾಂತ್​, ಅಶ್ವಿನಿ ಜೈಸ್ವಾಲ್ ಮತ್ತು ಮತ್ತೊಬ್ಬ ಶಾಸಕ ಸೂರತ್​ದಿಂದ ಗುವಾಹಟಿಗೆ ತೆರಳಿ ಶಾಸಕ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಗುವಾಹಟಿಯಲ್ಲಿ ಹೆಚ್ಚುತ್ತಿದೆ ಶಿಂಧೆ ಬಲ

ಶಿಂಧೆ ಟ್ವೀಟ್​: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಫೇಸ್‌ಬುಕ್ ಸಂಭಾಷಣೆಯ ನಂತರ ಏಕನಾಥ್ ಶಿಂಧೆ ಟ್ವೀಟ್ ಮಾಡಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ಮಹಾವಿಕಾಸ್ ಅಘಾಡಿ ಸರ್ಕಾರದಿಂದ ಅದರ ಮಿತ್ರ ಪಕ್ಷಗಳಿಗೆ ಲಾಭ ಮಾಡಿಕೊಟ್ಟಿದೆ. ಇದರಿಂದಾಗಿ ಶಿವಸೈನಿಕರು ಮುಳುಗಿ ಹೋಗಿದ್ದಾರೆ. ಇತರ ಪಕ್ಷಗಳು ಬಲಗೊಳ್ಳುತ್ತಿರುವ ಸಂದರ್ಭದಲ್ಲಿ ಶಿವಸೈನಿಕರು ಮತ್ತು ಶಿವಸೇನೆಯನ್ನು ವ್ಯವಸ್ಥಿತವಾಗಿ ಹಣಿಯಲಾಗುತ್ತಿದೆ. ಪಕ್ಷ ಮತ್ತು ಶಿವಸೈನಿಕರ ಉಳಿವಿಗಾಗಿ ಅಸ್ವಾಭಾವಿಕ ಮೈತ್ರಿಕೂಟದಿಂದ ಹೊರಬರುವುದು ಅತ್ಯಗತ್ಯ. ಅದರಲ್ಲೂ ಮಹಾರಾಷ್ಟ್ರದ ಹಿತದೃಷ್ಟಿಯಿಂದ ಈಗಲೇ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಶಿಂಧೆ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಓದಿ: ನನ್ನೊಂದಿಗೆ 40 ಶಾಸಕರಿದ್ದಾರೆ, ಬಾಳಾ​ ಠಾಕ್ರೆ 'ಹಿಂದುತ್ವ' ತತ್ವಕ್ಕೆ ಬದ್ಧ: ಏಕನಾಥ ಶಿಂಧೆ

ಹೊಸ ಸರ್ಕಾರದ ಲೆಕ್ಕಾಚಾರ: ರಾಜ್ಯದಲ್ಲಿ ಪ್ರಸ್ತುತ ಒಟ್ಟು 287 ಶಾಸಕರಿದ್ದಾರೆ. ಬಹುಮತಕ್ಕೆ 144 ಶಾಸಕರ ಅಗತ್ಯವಿದೆ. ರಾಜ್ಯದಲ್ಲಿ ಬಿಜೆಪಿ ಒಟ್ಟು 113 ಶಾಸಕರನ್ನು ಹೊಂದಿದೆ. 106 ಶಾಸಕರು ಮತ್ತು ಪಕ್ಷೇತರು ಸೇರಿದಂತೆ ಬಿಜೆಪಿಯ ಒಟ್ಟು ಬಲ 113 ಆಗಿದೆ. ಏಕನಾಥ್ ಶಿಂಧೆ ಅವರ ಫೋಟೋದಲ್ಲಿರುವ ಶಾಸಕರನ್ನು ಸೇರಿಸಿ ಬಿಜೆಪಿ ಸರ್ಕಾರ ರಚಿಸಬಹುದು. ಆದರೆ, ಏಕನಾಥ್ ಶಿಂಧೆ ಅವರೊಂದಿಗೆ 37 ಶಿವಸೇನೆ ಶಾಸಕರು ಇಲ್ಲದಿದ್ದರೆ ಪಕ್ಷಾಂತರ ನಿಷೇಧದ ಪ್ರಕಾರ ಅವರ ಸದಸ್ಯತ್ವ ರದ್ದುಗೊಳಿಸಬಹುದು.

ಸಭೆಗೆ ಶರದ್​ ‘ಪವರ್​’: ಶಿಂಧೆ ಬೆಂಬಲಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ರಾಜಕೀಯ ಬಿಕ್ಕಟ್ಟು ಸೃಷ್ಟಿಸಿದೆ. ರಾಜ್ಯದ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಶಿಂಧೆಯವರ ಬಂಡಾಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ.

ಏಕನಾಥ್ ಶಿಂಧೆ ಮತ್ತು ಅವರ ಬೆಂಬಲಿಗರು ಮೈತ್ರಿ ತೊರೆಯಲು ತೀರ್ಮಾನಿಸಿದ್ದಾರೆ. ಇದರಿಂದ ಸರ್ಕಾರದ ಬುಡ ಅಲುಗಾಡಿದೆ. ಈ ಹಿನ್ನೆಲೆ ಶರದ್ ಪವಾರ್ ಎನ್​ಸಿಪಿ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.

ಉಪಮುಖ್ಯಮಂತ್ರಿ ಅಜಿತ್ ಪವಾರ್, ಎನ್‌ಸಿಪಿ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್, ಸಂಸದ ಪ್ರಫುಲ್ ಪಟೇಲ್, ಮುಖಂಡ ಛಗನ್ ಭುಜಬಲ್, ಜಿತೇಂದ್ರ ಅವ್ಹಾದ್ ಮೊದಲಾದವರು ಭಾಗವಹಿಸಲಿದ್ದಾರೆ. ಹೀಗಾಗಿ ಇಂದಿನ ಸಭೆಯಲ್ಲಿ ಶರದ್ ಪವಾರ್ ಯಾವ ಪಾತ್ರ ವಹಿಸುತ್ತಾರೆ ಎಂಬುದು ಮುಖ್ಯವಾಗಿದೆ.

Last Updated : Jun 23, 2022, 12:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.