ಪೋಕರನ್ (ಜೈಸಲ್ಮೇರ್) : ರಾಜಸ್ಥಾನದ ಪೋಕರನ್ ಫೀಲ್ಡ್ ಫೈರಿಂಗ್ ರೇಂಜ್‌ನಿಂದ ಭಾರತೀಯ ಸೇನೆ ಶುಕ್ರವಾರ ಮೂರು ಕ್ಷಿಪಣಿಗಳನ್ನು ಉಡಾಯಿಸಿದೆ. ಆದ್ರೆ, ತಾಂತ್ರಿಕ ದೋಷದಿಂದಾಗಿ ಮಿಸ್‌ಫೈರಿಂಗ್ ಆಗಿದ್ದು, ಒಂದು ಕ್ಷಿಪಣಿಯ ಅವಶೇಷಗಳು ಅಜಸರ್ ಗ್ರಾಮದ ಬಳಿಯ ಕಚ್ಚಬ್ ಸಿಂಗ್ ಅವರ ಜಮೀನಿನಲ್ಲಿ ಕಂಡುಬಂದಿದೆ. ಮತ್ತೊಂದು ಕ್ಷಿಪಣಿಯ ಅವಶೇಷ ಸತ್ಯಯ್ಯ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದ್ದು, ಮೂರನೇ ಕ್ಷಿಪಣಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಪೊಲೀಸರು ಮತ್ತು ಸೇನಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಪತನಗೊಂಡ ಕ್ಷಿಪಣಿಗಳ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ತಾಂತ್ರಿಕ ದೋಷದಿಂದಾಗಿ ಕ್ಷಿಪಣಿಗಳು ಮಾರ್ಗದಿಂದ ವಿಮುಖವಾಗಿ ಚಲಿಸಿವೆ. ಈ ಕುರಿತು ತನಿಖೆ ಆರಂಭಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸೇನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತಾಭ್ ಶರ್ಮಾ ಖಚಿತಪಡಿಸಿದ್ದಾರೆ.
ಇದನ್ನೂ ಓದಿ : ವಿಡಿಯೋ : ನೌಕಾ ಪಡೆಯಿಂದ ಪ್ರಥಮ ಹಡಗುನಿರೋಧಕ ಕ್ಷಿಪಣಿ ಪರೀಕ್ಷೆ ಯಶಸ್ವಿ
ಘಟನೆ ನಡೆದಾಗ ಪೋಕರನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಆರ್ಮಿ ಘಟಕದಿಂದ ವಾರ್ಷಿಕ ಕ್ಷಿಪಣಿ ಪರೀಕ್ಷೆ ನಡೆಸಲಾಗುತ್ತಿತ್ತು ಎಂದು ಕೆಲ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. "ಸೇನಾ ಘಟಕವು ಶುಕ್ರವಾರ ತನ್ನ ವಾರ್ಷಿಕ ಫೀಲ್ಡ್ ಫೈರಿಂಗ್ ಕಾರ್ಯಚರಣೆ ಕೈಗೊಂಡ ಬಳಿಕ ಮಿಸ್ಫೈರ್ ಆದ ಘಟನೆ ವರದಿಯಾಗಿದೆ. ಕ್ಷಿಪಣಿ ಸುರಕ್ಷಿತವಾಗಿ ಸ್ಫೋಟಗೊಂಡಿದ್ದು, ಆದರ ಅವಶೇಷಗಳು ಪಕ್ಕದ ಹೊಲಗಳಲ್ಲಿ ಬಿದ್ದಿವೆ " ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ : ಬ್ರಹ್ಮೋಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಭಾರತೀಯ ನೌಕಾಪಡೆ..
ಬ್ರಹ್ಮೋಸ್ ಕ್ಷಿಪಣಿ ಉಡಾವಣೆ : ಇದೇ ತಿಂಗಳ ಮಾರ್ಚ್ 5 ರಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ವಿನ್ಯಾಸಗೊಳಿಸಿರುವ ದೇಶೀಯ ಸೀಕರ್ ಮತ್ತು ಬೂಸ್ಟರ್ ಹೊಂದಿರುವ ಬ್ರಹ್ಮೋಸ್ ನಿಖರ ದಾಳಿ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಭಾರತೀಯ ನೌಕಾಪಡೆಯು ಅರೇಬಿಯನ್ ಸಮುದ್ರದಲ್ಲಿ ಹಡಗಿನ ಮೂಲಕ ಈ ಬ್ರಹ್ಮೋಸ್ ಕ್ಷಿಪಣಿಯನ್ನ ಉಡಾವಣೆ ಮಾಡಿದ್ದು, ಯಶಸ್ವಿ ನಿಖರ ದಾಳಿ ನಡೆಸಿತ್ತು. ಆತ್ಮನಿರ್ಭರ ಭಾರತ್ ಯೋಜನೆಯಲ್ಲಿ ಈ ಕ್ಷಿಪಣಿ ನಿರ್ಮಾಣ ಮಾಡಲಾಗಿದೆ ಎಂದು ಭಾರತೀಯ ನೌಕಾಪಡೆ ಟ್ವೀಟ್ ಮಾಡಿ ತಿಳಿಸಿತ್ತು.
ಇದನ್ನೂ ಓದಿ : ಇಂಡೋ ಪಾಕ್ ಯುದ್ಧದಲ್ಲಿ ಮುಂಚೂಣಿಯಲ್ಲಿದ್ದ ನೌಕೆ ನಿರ್ಲಕ್ಷ್ಯ : ಉಸಿರುಗಟ್ಟುವಂತಿದೆ ಚಾಪೆಲ್ ನೌಕೆ ಮ್ಯೂಸಿಯಂ
ಕಳೆದ ವರ್ಷದ ಮೇ 12 ರಂದು ಬಾಲಸೋರೆ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯು ಹಡಗು ನಿರೋಧಕ ಕ್ಷಿಪಣಿ ಪರೀಕ್ಷೆಯನ್ನ ಯಶಸ್ವಿಯಾಗಿ ನಡೆಸಿತ್ತು. ಒಡಿಶಾದ ಬಾಲಸೋರೆ ಸಮುದ್ರದ ತೀರದಲ್ಲಿ ಡಿಆರ್ಡಿಒ ಸಹಯೋಗದೊಂದಿಗೆ ಸೀಕಿಂಗ್ 42-ಬಿ ಹೆಲಿಕಾಪ್ಟರ್ ಮೂಲಕ ಕ್ಷಿಪಣಿ ಪರೀಕ್ಷೆ ನಡೆಸಲಾಗಿತ್ತು.
ಇದನ್ನೂ ಓದಿ : ಉಕ್ರೇನ್‌ನ ಕೀವ್ನಲ್ಲಿ ರಷ್ಯಾದಿಂದ ಸರಣಿ ಕ್ಷಿಪಣಿ ದಾಳಿ..ಸ್ಪೋಟದಿಂದ ಎಂಟು ಮಂದಿ ಸಾವು