ETV Bharat / bharat

ಪ್ರೀತಿಯ ಹೆಸರಲ್ಲಿ ಪ್ರೇಮಿ- ಇಬ್ಬರು ಸ್ನೇಹಿತರಿಂದ ಬಾಲಕಿ ಮೇಲೆ ಅತ್ಯಾಚಾರ... ಐವರು ಬಾಲಕರು ಸೇರಿ ಆರು ಜನರ ಬಂಧನ! - ಬಾಲಕಿ ಪೋಷಕರಿಂದ ಪೊಲೀಸ್​ ಠಾಣೆಗೆ ದೂರು

ಪ್ರೀತಿಯ ಹೆಸರಲ್ಲಿ ಒಬ್ಬನಾದರೆ, ಮತ್ತಿಬ್ಬರು ಸ್ನೇಹಿತರು ಬೆದರಿಸಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ಕಂಡು ಬಂದಿದೆ.

Three friends rape on 10th girl  Three friends rape on 10th girl in Telangana  Six people arrested over rape case in Telangana  ಪ್ರೀತಿಯ ಹೆಸರಲ್ಲಿ ಒಬ್ಬ  ಬೆದರಿಸಿ ಇಬ್ಬರು ಬಾಲಕಿ ಮೇಲೆ ಅತ್ಯಾಚಾರ  ಐವರು ಬಾಲಕರು ಸೇರಿ ಆರು ಜನ ಬಂಧನ  ಬೆದರಿಸಿ ಮತ್ತಿಬ್ಬರು ಸ್ನೇಹಿತರು ಬಾಲಕಿಯ ಮೇಲೆ ಅತ್ಯಾಚಾರ  ಜಿಲ್ಲೆಯಲ್ಲಿ ದಾರುಣ ಘಟನೆ  ಪ್ರಿಯಕರನೊಂದಿಗೆ ಏಕಾಂತದಲ್ಲಿ ಕಾಲ ಕಳೆಯುತ್ತಿದ್ದ  ಬಾಲಕಿ ತಾನು ವಾಸಿಸುತ್ತಿದ್ದ ಬೀದಿ  ಬಾಲಕಿಗೆ ಬೆದರಿಸಿ ಅತ್ಯಾಚಾರ  ಚಿಕ್ಕ ವಯಸ್ಸಿನಲ್ಲಿ ಪ್ರೀತಿಗೆ ಬಿದ್ದ ಬಾಲೆ  ಬಾಲಕಿಯ ಮೇಲೆ ಅತ್ಯಾಚಾರ  ಬಾಲಕಿ ಪೋಷಕರಿಂದ ಪೊಲೀಸ್​ ಠಾಣೆಗೆ ದೂರು  ಐವರು ಬಾಲಕರು ಸೇರಿದಂತೆ ಆರು ಜನ ಬಂಧನ
ಪ್ರೀತಿಯ ಹೆಸರಲ್ಲಿ ಒಬ್ಬ, ಬೆದರಿಸಿ ಇಬ್ಬರು ಬಾಲಕಿ ಮೇಲೆ ಅತ್ಯಾಚಾರ
author img

By

Published : Jun 27, 2023, 11:36 AM IST

ಕರೀಂನಗರ, ತೆಲಂಗಾಣ: ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಬಾಲಕಿಯೊಬ್ಬಳು ತನ್ನ ಪ್ರೇಮಿ ಮತ್ತು ಇಬ್ಬರು ಸ್ನೇಹಿತರಿಂದಲೇ ಅತ್ಯಾಚಾರಕ್ಕೊಳಗಾಗಿರುವ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಆದರೆ, ಈ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಜನರನ್ನು ಪೊಲೀಸರು ಬಂಧಿಸಿದ್ದು, ಇದರಲ್ಲಿ ಐವರು ಬಾಲಕರಾಗಿದ್ದಾರೆ.

ಬಾಲಕಿಯ ಮೇಲೆ ಅತ್ಯಾಚಾರ: ಇತ್ತೀಚಿಗೆ ಕರೀಂನಗರ ಪಟ್ಟಣದಲ್ಲಿ ಬಾಲಕಿ ತನ್ನ ಪ್ರಿಯಕರನೊಂದಿಗೆ ಏಕಾಂತದಲ್ಲಿ ಕಾಲ ಕಳೆಯುತ್ತಿದ್ದಳು. ಈ ಸಂದರ್ಭದಲ್ಲಿ ಆಕೆಯ ಸ್ನೇಹಿತರು ರಹಸ್ಯವಾಗಿ ಫೋಟೋ ಮತ್ತು ವಿಡಿಯೋಗಳನ್ನು ಸೆರೆ ಹಿಡಿದಿದ್ದರು. ಬಳಿಕ ಆಕೆಯನ್ನು ಬೆದರಿಸಿ ವಿವಿಧ ಸಂದರ್ಭಗಳಲ್ಲಿ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

ಚಿಕ್ಕ ವಯಸ್ಸಿನಲ್ಲಿ ಪ್ರೀತಿಗೆ ಬಿದ್ದ ಬಾಲೆ: ಪೊಲೀಸರ ಪ್ರಕಾರ, ಕರೀಂನಗರ ಜಿಲ್ಲೆಯೊಂದರ ಶಾಲೆಯಲ್ಲಿ ಬಾಲಕಿ ಹತ್ತನೇ ತರಗತಿ ಓದುತ್ತಿದ್ದಾಳೆ. ಬಾಲಕಿ ತಾನು ವಾಸಿಸುತ್ತಿದ್ದ ಬೀದಿಯಲ್ಲಿ ಇಂಟರ್ ಓದುತ್ತಿದ್ದ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಅನ್ಯೋನ್ಯವಾಗಿಯೇ ಇದ್ದರು. ಒಂದು ವರ್ಷದ ಹಿಂದೆ ಸಂದರ್ಭವೊಂದರಲ್ಲಿ ಪ್ರೇಮಿಗಳು ಏಕಾಂತದಲ್ಲಿ ಕಾಲ ಕಳೆದಿದ್ದಾರೆ. ಆದರೆ, ಪ್ರೇಮಿಗಳಿಬ್ಬರು ಏಕಾಂತದಲ್ಲಿ ಕಾಲ ಕಳೆದ ದೃಶ್ಯವನ್ನು ಹುಡುಗನ ಇಬ್ಬರು ಸ್ನೇಹಿತರು ರಹಸ್ಯವಾಗಿ ಚಿತ್ರೀಕರಿಸಿದ್ದರು. ಬಳಿಕ ವಿಡಿಯೋ ಮತ್ತು ಫೋಟೋಗಳನ್ನು ಮುಂದಿಟ್ಟುಕೊಂಡು ಬಾಲಕಿಗೆ ಬೆದರಿಕೆ ಹಾಕಲು ಶುರುಮಾಡಿದ್ದಾರೆ.

ಬಾಲಕಿಗೆ ಬೆದರಿಸಿ ಅತ್ಯಾಚಾರ: ನಾವು ತೆಗೆದ ವಿಡಿಯೋ ಮತ್ತು ಫೋಟೋಗಳನ್ನು ನಿಮ್ಮ ಪೋಷಕರಿಗೆ ಕಳುಹಿಸುವುದಾಗಿ ಆರೋಪಿಗಳು ಬಾಲಕಿಗೆ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಭೀತರಾದ ಬಾಲಕಿ ಆರೋಪಿಗಳ ಷರತ್ತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಬಾಲಕಿಯ ಭಯವನ್ನು ಸದುಪಯೋಗ ಪಡಿಸಿಕೊಂಡ ಆರೋಪಿಗಳು ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ.

ಮುಂದುವರಿದ ಆರೋಪಿಗಳ ಅಟ್ಟಹಾಸ: ಅಷ್ಟಕ್ಕೆ ಆರೋಪಿಗಳ ಅಟ್ಟಹಾಸ ನಿಲ್ಲಲಿಲ್ಲ. ಇತ್ತೀಚೆಗಷ್ಟೇ ಆರೋಪಿಗಳ ಮೂವರು ಸ್ನೇಹಿತರು ಸಹ ಆಕೆಯ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದರು. ಮೂರು ದಿನಗಳ ಹಿಂದೆ ಈ ವಿಷಯ She Team ಗಮನಕ್ಕೆ ಬಂದಿದೆ. ಬಳಿಕ ಆರೋಪಿಗಳನ್ನು ಕರೆಸಿ ಕೌನ್ಸೆಲಿಂಗ್ ನಡೆಸಿ ಅವರನ್ನು ಬಿಟ್ಟು ಕಳುಹಿಸಲಾಗಿತ್ತು. ಆದ್ರೆ ಈ ವಿಷಯ ಗೌಪ್ಯವಾಗಿಡಲಾಗಿತ್ತು.

ಬಾಲಕಿ ಪೋಷಕರಿಂದ ಪೊಲೀಸ್​ ಠಾಣೆಗೆ ದೂರು: ಆದರೆ ಏಕಾಏಕಿ ಬಾಲಕಿ ತನ್ನ ಪೋಷಕರೊಂದಿಗೆ ನಗರದ ಒನ್‌ಟೌನ್ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಇದರೊಂದಿಗೆ ಪೊಲೀಸರು ಆಕೆಯ ಪ್ರಿಯಕರನೊಂದಿಗೆ ಆರು ಮಂದಿಯ ವಿರುದ್ಧ ಪೋಕ್ಸೊ, ಅತ್ಯಾಚಾರ ಮತ್ತು ಬೆದರಿಕೆಯ ಪ್ರಕರಣ ದಾಖಲಿಸಿದ್ದಾರೆ.

ಐವರು ಬಾಲಕರು ಸೇರಿದಂತೆ ಆರು ಜನ ಬಂಧನ: ದಾಖಲಾಗಿರುವ ಆರು ಮಂದಿಯಲ್ಲಿ ಐವರು ಬಾಲ ವಿದ್ಯಾರ್ಥಿಗಳಾಗಿದ್ದು, ಮತ್ತೊಬ್ಬ ಮಾತ್ರ ಮೇಜರ್‌ ಆಗಿದ್ದಾರೆ. ಆ ಯುವಕ ಪಾಲಿಟೆಕ್ನಿಕ್‌ ಎರಡನೇ ವರ್ಷ ಪೂರೈಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಓದಿ: ಸತ್ತ ಮೊಮ್ಮಗನ ಶವದೊಂದಿಗೆ ಐದು ದಿನ ಕಳೆದ ಅಜ್ಜಿ... ವೃದ್ಧೆಯ ಅವತಾರ ನೋಡಿ ಬೆಚ್ಚಿಬಿದ್ದ ಪೊಲೀಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.