ETV Bharat / bharat

ದೇಶದಲ್ಲಿ ಕೋವಿಡ್​ಗೆ​ ಮೂವರ ಬಲಿ; ಸಾವಿರ ಗಡಿ ದಾಟಿದ JN.1 ಪ್ರಕರಣಗಳು - ಕೋವಿಡ್

ಕಳೆದ 24 ಗಂಟೆಗಳ ಅವಧಿಯಲ್ಲಿ ಕೇರಳದಲ್ಲಿ ಎರಡು ಮತ್ತು ಕರ್ನಾಟಕದಲ್ಲಿ ಒಂದು ಕೋವಿಡ್​ ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

Etv Bharatthree-fresh-covid-deaths-india-crosses-1000-cases-of-jn1-variant
ದೇಶದಲ್ಲಿ 3 ಕೋವಿಡ್ ಸಾವುಗಳು ದಾಖಲು: ಸಾವಿರ ಗಡಿ ದಾಟಿದ ಕೋವಿಡ್ ರೂಪಾಂತರಿ JN.1 ಪ್ರಕರಣಗಳು
author img

By ETV Bharat Karnataka Team

Published : Jan 12, 2024, 5:47 PM IST

Updated : Jan 12, 2024, 9:27 PM IST

ನವದೆಹಲಿ: ಭಾರತದಲ್ಲಿ ಇಂದು 609 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಸೋಂಕಿತ ಪ್ರಕರಣಗಳ ಸಂಖ್ಯೆ 3,368ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸಚಿವಾಲಯದ ಇತ್ತೀಚಿನ ಅಂಕಿ - ಅಂಶಗಳ ಪ್ರಕಾರ, ಕಳೆದ 24 ಗಂಟೆಗಳ ಅವಧಿಯಲ್ಲಿ ಕೇರಳದಲ್ಲಿ ಎರಡು ಮತ್ತು ಕರ್ನಾಟಕದಲ್ಲಿ ಒಂದು ಕೋವಿಡ್​ ಸಾವುಗಳು ವರದಿಯಾಗಿವೆ. ಒಟ್ಟು ಸಕ್ರಿಯ ಪ್ರಕರಣಗಳಲ್ಲಿ, ಶೇ. 92 ರಷ್ಟು ರೋಗಿಗಳು ಹೋಮ್​ ಕ್ವಾರಂಟೈನ್​ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಹಂಚಿಕೊಂಡಿದೆ.

ಐಎನ್ಎಸ್ಎಸಿಒಜಿ ಪ್ರಕಾರ, ಕೋವಿಡ್ 19ರ ಉಪ ರೂಪಾಂತರ ಜೆಎನ್ .1 ಪ್ರಕರಣಗಳ ಸಂಖ್ಯೆ 1,000 ಗಡಿ ದಾಟಿದೆ. ಉತ್ತರ ಪ್ರದೇಶದಲ್ಲಿ ಜೆಎನ್ .1 ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಜೆಎನ್ .1 ಪ್ರಕರಣ ಪತ್ತೆಯಾದ 16ನೇ ರಾಜ್ಯವಾಗಿದೆ. ಇಂಡಿಯನ್ ಸಾರ್ಸ್-ಕೋವ್-2 ಜೆನೋಮಿಕ್ಸ್ ಕನ್ಸೋರ್ಟಿಯಂ (ಐಎನ್ಎಸ್ಎಸಿಒಜಿ) ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ ಅತಿ ಹೆಚ್ಚು (214), ಮಹಾರಾಷ್ಟ್ರ (170), ಕೇರಳ (154), ಆಂಧ್ರಪ್ರದೇಶ (189), ಗುಜರಾತ್ (76) ಮತ್ತು ಗೋವಾ (66) ಕೋವಿಡ್ ಪ್ರಕರಣಗಳು ವರದಿಯಾಗಿವೆ.

ದೇಶದಲ್ಲಿ ಒಟ್ಟು 1,013 ಜೆಎನ್ .1 ಪ್ರಕರಣಗಳು ಪತ್ತೆ: ತೆಲಂಗಾಣ ಮತ್ತು ರಾಜಸ್ಥಾನದಲ್ಲಿ ತಲಾ (32), ಛತ್ತೀಸ್‌ಗಢದಲ್ಲಿ( 25), ತಮಿಳುನಾಡಿನಲ್ಲಿ (22), ದೆಹಲಿಯಲ್ಲಿ (16), ಉತ್ತರ ಪ್ರದೇಶ (6), ಹರಿಯಾಣದಲ್ಲಿ (5), ಒಡಿಶಾದಲ್ಲಿ (3), ಪಶ್ಚಿಮ ಬಂಗಾಳದಲ್ಲಿ (2) ಮತ್ತು ಉತ್ತರಾಖಂಡದಲ್ಲಿ (1) ಪ್ರಕರಣಗಳು ದಾಖಲಾಗಿವೆ. 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈವರೆಗೆ ಒಟ್ಟು 1,013 ಜೆಎನ್ .1 ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ದೇಶದಲ್ಲಿ ಜೆಎನ್ .1 ಉಪ ರೂಪಾಂತರ ಪ್ರಕರಣಗಳ ಮೇಲೆ ನಿಗಾ ವಹಿಸುವಂತೆ ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ತಿಳಿಸಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಜ್ಯಗಳೊಂದಿಗೆ ಹಂಚಿಕೊಂಡಿರುವ COVID-19 ಗಾಗಿ ಪರಿಷ್ಕೃತ ಕಣ್ಗಾವಲು ಕಾರ್ಯತಂತ್ರದ ವಿವರವಾದ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಅನುಸರಿಸುವಂತೆ ರಾಜ್ಯಗಳಿಗೆ ಕೋರಿದೆ. ಇನ್‌ಫ್ಲುಯೆಂಜಾ ತರಹದ ಅನಾರೋಗ್ಯ (ILI) ಮತ್ತು ತೀವ್ರ ಉಸಿರಾಟದ ಕಾಯಿಲೆ (SARI) ಯ ಜಿಲ್ಲಾವಾರು ಪ್ರಕರಣಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಮತ್ತು ವರದಿ ಮಾಡಲು ರಾಜ್ಯಗಳಿಗೆ ಸೂಚಿಸಿದೆ.

ಇದನ್ನೂ ಓದಿ: ಥಾಯ್ಲೆಂಡ್‌ನ ಗುಹೆಯಲ್ಲಿ ಹೊಸ ಮಾರಣಾಂತಿಕ ಸೋಂಕು ಪತ್ತೆ

Last Updated : Jan 12, 2024, 9:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.