ETV Bharat / bharat

ಗೋವಾ ಜಲಗಡಿ ಅಕ್ರಮ ಪ್ರವೇಶ: ಕರ್ನಾಟಕದ ಮೂವರು ಮೀನುಗಾರರು ವಶಕ್ಕೆ - ಮೀನುಗಾರಿಕಾ ಸಚಿವ ನೀಲಕಂಠ ಹಳರಂಕರ್

ಕರ್ನಾಟಕದ ಮೀನುಗಾರರು ಗೋವಾ ಜಲಪ್ರದೇಶವನ್ನು ಪ್ರವೇಶಿಸಿದ್ದಾರೆ. ಆದ್ದರಿಂದ ಮೀನುಗಾರರು ಮತ್ತು ಅವರ ಬೋಟ್​ಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಸಂಜೆ ಮೀನುಗಳನ್ನು ಹರಾಜು ಮಾಡಲಾಯಿತು ಎಂದು ನೀಲಕಂಠ ಹಳರಂಕರ್ ತಿಳಿಸಿದ್ದಾರೆ.

ಗೋವಾ ಜಲಗಡಿ ಅಕ್ರಮ ಪ್ರವೇಶ: ಕರ್ನಾಟಕದ ಮೂವರು ಮೀನುಗಾರರು ವಶಕ್ಕೆ

author img

By

Published : Nov 14, 2022, 10:22 PM IST

Updated : Nov 15, 2022, 12:32 PM IST

ಪಣಜಿ: ಗೋವಾ ಜಲಗಡಿಯನ್ನು ಪ್ರವೇಶಿಸಿದ್ದಕ್ಕಾಗಿ ಕರ್ನಾಟಕದಿಂದ ಮೂರು ಮೀನುಗಾರರನ್ನು ಗೋವಾದ ಅಧಿಕಾರಿಗಳು ಸೋಮವಾರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಮೀನುಗಾರರು ನಿಯಮಗಳನ್ನು ಪಾಲಿಸದ ಕಾರಣ ಕ್ರಮ ಕೈಗೊಳ್ಳಲಾಗಿದೆ ಎಂದು ಮೀನುಗಾರಿಕಾ ಸಚಿವ ನೀಲಕಂಠ ಹಳರಂಕರ್ ತಿಳಿಸಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಕರ್ನಾಟಕದ ಮೀನುಗಾರರು ಗೋವಾ ಜಲಪ್ರದೇಶವನ್ನು ಪ್ರವೇಶಿಸಿದ್ದಾರೆ. ಆದ್ದರಿಂದ ಮೀನುಗಾರರು ಮತ್ತು ಅವರ ಬೋಟ್​ಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಸಂಜೆ ಮೀನುಗಳನ್ನು ಹರಾಜು ಮಾಡಲಾಯಿತು ಎಂದು ನೀಲಕಂಠ ಹಳರಂಕರ್ ತಿಳಿಸಿದ್ದಾರೆ.

ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಳರಂಕರ್ ಸ್ಪಷ್ಟಪಡಿಸಿದ್ದಾರೆ. ಎಲ್ಲಾ ಕಾನೂನು ಪ್ರಕ್ರಿಯೆ ಮುಗಿದ ನಂತರ ಮೀನುಗಾರರನ್ನು ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.

ಗೋವಾದ ಮೀನುಗಾರ ಸಮುದಾಯವು ನೆರೆಯ ರಾಜ್ಯಗಳ ಮೀನುಗಾರಿಕೆ ಟ್ರಾಲರ್‌ಗಳು ತಮ್ಮ ಪ್ರದೇಶದಲ್ಲಿ ಮೀನು ಹಿಡಿಯುತ್ತಿರುವ ಬಗ್ಗೆ ದೂರು ನೀಡಿದ್ದವು.

ಇದನ್ನು ಓದಿ: ಹೇಯ ಕೃತ್ಯ.. ಬಾಲಕಿ ಮೇಲೆ ಅತ್ಯಾಚಾರವೆಸಗಿ ನಾಲಿಗೆ ಕತ್ತರಿಸಿದ ದುರುಳರು

Last Updated : Nov 15, 2022, 12:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.