ಪುಣೆ (ಮಹಾರಾಷ್ಟ್ರ): ಆಕ್ಸಿಜನ್, ಹಾಸಿಗೆಗಳು ಸಿಗದೇ ಪ್ರತಿನಿತ್ಯ ಕೋವಿಡ್ ರೋಗಿಗಳು ಪರದಾಡುತ್ತಿರುವ ಈ ಸಂದರ್ಭದಲ್ಲಿ ಆಸ್ಪತ್ರೆಯೊಂದು ವೆಂಟಿಲೇಟರ್ ಬೆಡ್ಗೆ 1 ಲಕ್ಷ ರೂ. ಹಣ ಕೇಳಿರುವುದು ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚ್ವಾಡ್ ಪ್ರದೇಶದ ಮಹಾನಗರ ಪಾಲಿಕೆ ಅಡಿಯಲ್ಲಿ ಬರುವ ಆಸ್ಪತ್ರೆಯ ವೈದ್ಯರು ರೋಗಿಯ ಕುಟುಂಬಕ್ಕೆ 1 ಲಕ್ಷ ರೂ. ಬಿಲ್ ಮಾಡಿದ್ದಾರೆ. ಉಚಿತ ಹಾಸಿಗೆ ಒದಗಿಸಬೇಕಾದ ಪಾಲಿಕೆ ಆಸ್ಪತ್ರೆ ಇಷ್ಟೊಂದು ದೊಡ್ಡ ಮೊತ್ತದ ಹಣ ಕೇಳಿರುವುದರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಈ ಸಂಬಂಧ ಮೂವರು ವೈದ್ಯರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಮಾರಾಟ: ವಿಜಯಪುರದಲ್ಲಿ 3 ಪ್ರಕರಣ ದಾಖಲು
ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯಿರುವ ಈ ವೇಳೆಯಲ್ಲಿ ರೆಮ್ಡೆಸಿವಿರ್, ಆಮ್ಲಜನಕ, ಮತ್ತು ಇತರ ವೈದ್ಯಕೀಯ ಸರಕುಗಳನ್ನು ಅಕ್ರಮವಾಗಿ ಸಂಗ್ರಹಿಸಿ, ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ.