ETV Bharat / bharat

ಮದ್ಯ ಸೇವಿಸಿ ಕಾರು ಚಲಾಯಿಸಿದ್ದರಿಂದ ಟ್ರಕ್‌ಗೆ ಡಿಕ್ಕಿ.. ಸ್ಥಳದಲ್ಲೇ ಮೂವರ ದುರ್ಮರಣ, ಓರ್ವನ ಸ್ಥಿತಿ ಗಂಭೀರ.. - ಸುರಾರಾಂ ಮಲ್ಲಾರೆಡ್ಡಿ ಆಸ್ಪತ್ರೆ

ಕಾರಿನಲ್ಲಿದ್ದ ನಾಲ್ವರೂ ಮದ್ಯ ಸೇವನೆ ಮಾಡಿದ್ದರು. ಗಾಯಗೊಂಡ ಅಶೋಕ್ ಸ್ಥಿತಿ ಚಿಂತಾಜನಕವಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ..

Three Died and One Injured When a Car hits A Parked Lorry in Medchal District
ತೆಲಂಗಾಣದಲ್ಲಿ ಭೀಕರ ಅಪಘಾತ: ಮೂವರ ಸಾವು
author img

By

Published : Dec 12, 2021, 2:39 PM IST

ಮೇಡ್ಚಲ್, ತೆಲಂಗಾಣ : ನಿಲ್ಲಿಸಿದ್ದ ಟ್ರಕ್​ಗೆ ಕಾರೊಂದು ಡಿಕ್ಕಿಯಾಗಿ ಹದಿಹರೆಯದ ಮೂವರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮೇಡ್ಚಲ್​ ಜಿಲ್ಲೆಯ ಡುಂಡಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬೌರಾಂಪೇಟ್​ ಎಂಬಲ್ಲಿ ನಡೆದಿದೆ.

ಬೌರಾಂಪೇಟ್​ ಬಳಿಯ ಕೊಕಾಕೋಲಾ ಕಂಪನಿ ಬಳಿ ಅಪಘಾತ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳು ಅಶೋಕ್ ಎಂಬಾತನನ್ನು ಸುರಾರಾಂ ಮಲ್ಲಾರೆಡ್ಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತರನ್ನು ಪಶ್ಚಿಮ ಗೋದಾವರಿ ಜಿಲ್ಲೆಯ ಎಲ್ಲೂರಿನ ಸಂಜು ಮತ್ತು ಗಣೇಶ್ ಮತ್ತು ವಿಜಯವಾಡದ ಚರಣ್ ಎಂದು ಗುರುತಿಸಲಾಗಿದೆ. ಇವರು ನಿಜಾಂಪೇಟೆಯಲ್ಲಿ ವಾಸಿಸುತ್ತಿದ್ದು, ಕೆಲಸ ಹುಡುಕುತ್ತಿದ್ದರು. ಮದ್ಯಪಾನ ಮಾಡಿ ವಾಹನ ಚಲಾಯಿಸಿರುವುದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿದ್ದ ನಾಲ್ವರೂ ಮದ್ಯ ಸೇವನೆ ಮಾಡಿದ್ದರು. ಗಾಯಗೊಂಡ ಅಶೋಕ್ ಸ್ಥಿತಿ ಚಿಂತಾಜನಕವಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಅಗ್ನಿ ನರ್ತನ: 27 ಮನೆಗಳು, ಎರಡು ದೇವಾಲಯ, 26 ದನಗಳು ಬೆಂಕಿಗಾಹುತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.