ETV Bharat / bharat

ಪೊಲೀಸರ ಸೂಚನೆಗೆ ಕ್ಯಾರೇ ಎನ್ನದ ಕ್ರಿಮಿನಲ್ಸ್​.. ಎನ್​ಕೌಂಟರ್​ಗೆ ಮೂವರು ಬಲಿ

author img

By

Published : Apr 2, 2022, 9:08 AM IST

ಅಸ್ಸೋಂನ ಗೋಲ್​ಪರಾ ಜಿಲ್ಲೆಯಲ್ಲಿ ಮೂವರು ಕ್ರಿಮಿನಲ್​ಗಳನ್ನು ಪೊಲೀಸರು ಎನ್​ಕೌಂಟರ್​ ಮಾಡಿರುವ ಘಟನೆ ನಡೆದಿದ್ದು, ಆ ಮೂವರೂ ಕೊಲೆ ಮತ್ತು ಕಿಡ್ನಾಪ್​ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

Three criminals killed in encounter in Assam's Goalpara
ಪೊಲೀಸರ ಸೂಚನೆಗೆ ಕ್ಯಾರೇ ಎನ್ನದ ಕ್ರಿಮಿನಲ್ಸ್​.. ಎನ್​ಕೌಂಟರ್​ಗೆ ಮೂವರು ಬಲಿ

ಗೋಲ್​ಪರಾ(ಅಸ್ಸೋಂ): ಮೂವರು ಕ್ರಿಮಿನಲ್​ಗಳನ್ನು ಪೊಲೀಸರು ಎನ್​ಕೌಂಟರ್​ ಮಾಡಿರುವ ಘಟನೆ ಗೋಲ್​ಪರಾ ಜಿಲ್ಲೆಯಲ್ಲಿ ನಡೆದಿದೆ. ಮೊದಲು ಶರಣಾಗುವಂತೆ ಪೊಲೀಸರು ಹೇಳಿದರೂ ಅಪರಾಧಿಗಳು ಇದಕ್ಕೆ ಸೊಪ್ಪು ಹಾಕಲಿಲ್ಲ. ಹಾಗಾಗಿ ಎನ್​ಕೌಂಟರ್​ ಕಾರ್ಯಾಚರಣೆ ನಡೆಸಬೇಕಾಯಿತು ಎಂದು ಸಹಾಯಕ ಪೊಲೀಸ್​ ವರಿಷ್ಠಾಧಿಕಾರಿ ಮೃನಲ್​ ಡೇಕಾ ಮಾಹಿತಿ ನೀಡಿದ್ದಾರೆ.

ಹತರಾದವರನ್ನು ಶಹಜಹಾನ್​, ನಝ್ಮುಲ್​ ಮತ್ತು ಸಾಜಲ್​ ಎಂದು ಗುರುತಿಸಲಾಗಿದೆ. ಈ ಹಿಂದೆ ಇವರ ವಿರುದ್ಧ ಕ್ರಿಮಿನಲ್​ ಕೇಸ್​ಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ. ಘಟನೆ ಕುರಿತು ವಿವರಿಸಿರುವ ಎ​ಎಸ್​ಪಿ ಮೃನಲ್​ ಡೇಕಾ, 'ಕ್ರಿಮಿನಲ್​ಗಳು ಟ್ರಕ್​ನಲ್ಲಿ ಅಡಗಿ ಕುಳಿತು ಪರಾರಿಯಾಗಲು ಯತ್ನಿಸಿದ್ದರು. ಆಗ ಟ್ರಕ್​ ಅನ್ನು ತಡೆದು ಬಂಧಿಸಲು ಮುಂದಾದಾಗ ನಮ್ಮ ಮೇಲೆಯೇ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದರು. ಈ ವೇಳೆ ಪ್ರತಿಯಾಗಿ ಗುಂಡು ಹಾರಿಸಬೇಕಾಯಿತು' ಎಂದಿದ್ದಾರೆ.

ಈ ವೇಳೆ ಗಾಯಗೊಂಡಿದ್ದ ಕ್ರಿಮಿನಲ್​ಗಳನ್ನು ಆಸ್ಪತ್ರೆಗೆ ಕರೆದೊಯ್ದಾಗ ಮೂವರು ಸಾವನ್ನಪ್ಪಿರುವ ಬಗ್ಗೆ ವೈದ್ಯರು ದೃಢಪಡಿಸಿದರು. ಈ ಮೂವರು ಅಪರಾಧಿಗಳು ಕೊಲೆ ಮತ್ತು ಕಿಡ್ನಾಪ್​ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಎಸ್​ಎಸ್​ಪಿ ತಿಳಿಸಿದ್ದಾರೆ. ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಗೋಲ್​ಪರಾ ಜಿಲ್ಲೆಯ ಅಲೋಕ್​ ಬಜಾರ್​ನಲ್ಲಿ ಈ ಎನ್​ಕೌಂಟರ್​ ನಡೆದಿದೆ.

ಇದನ್ನೂ ಓದಿ: ಆಸ್ಕರ್​ ವೇದಿಕೆಯಲ್ಲಿ ಕಪಾಳಮೋಕ್ಷ ಪ್ರಕರಣ.. ಅಕಾಡೆಮಿ ಸದಸ್ಯತ್ವಕ್ಕೆ ವಿಲ್ ಸ್ಮಿತ್​ ರಾಜೀನಾಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.