ETV Bharat / bharat

ಹಳಿ ಮೇಲೆ ಆಟವಾಡುತ್ತಿದ್ದ ಬಾಲಕರಿಗೆ ರೈಲು ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವನಿಗೆ ಗಂಭೀರ ಗಾಯ - ರೈಲ್ವೆ ಹಳಿ

ಪಂಜಾಬ್​ನ ರೂಪನಗರ ಜಿಲ್ಲೆಯಲ್ಲಿ ರೈಲು ಡಿಕ್ಕಿ ಹೊಡೆದ ಪರಿಣಾಮ ಮೂವರು ವಲಸೆ ಕಾರ್ಮಿಕರ ಮಕ್ಕಳು ಮೃತಪಟ್ಟಿರುವ ಘಟನೆ ಜರುಗಿದೆ.

three-children-died-after-being-hit-by-train-in-punjab
ಹಳಿ ಮೇಲೆ ಆಟವಾಡುತ್ತಿದ್ದ ಬಾಲಕರಿಗೆ ರೈಲು ಡಿಕ್ಕಿ: ಮೂವರ ದಾರುಣ ಸಾವು, ಮತ್ತೋರ್ವನಿಗೆ ಗಂಭೀರ ಗಾಯ
author img

By

Published : Nov 27, 2022, 10:39 PM IST

ಚಂಡೀಗಢ (ಪಂಜಾಬ್​): ರೈಲು ಡಿಕ್ಕಿ ಹೊಡೆದು ಹಳಿ ಮೇಲೆ ಆಟವಾಡುತ್ತಿದ್ದ ಮೂವರು ಬಾಲಕರು ಸಾವನ್ನಪ್ಪಿರುವ ಘಟನೆ ಪಂಜಾಬ್​ನ ರೂಪನಗರ ಜಿಲ್ಲೆಯಲ್ಲಿ ನಡೆದಿದೆ. ಮತ್ತೋರ್ವ ಬಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಲ್ಲಿನ ಕಿರಾತ್‌ಪುರ ಸಾಹಿಬ್ ಬಳಿ ನಾಲ್ವರು ಬಾಲಕರು ಭಾನುವಾರ ಬೆಳಗ್ಗೆ 11:20ರ ಸುಮಾರಿಗೆ ಮರದ ಹಣ್ಣುಗಳನ್ನು ತಿನ್ನಲೆಂದು ಬಂದು ರೈಲ್ವೆ ಹಳಿ ಮೇಲೆ ಆಡುವಾಡುತ್ತಿದ್ದರು. ಈ ವೇಳೆ ಸಹರಾನ್‌ಪುರದಿಂದ ಉನಾಗೆ ಹೋಗುತ್ತಿದ್ದ ರೈಲು ಗುದ್ದಿ ಈ ದುರಂತ ಸಂಭವಿಸಿದೆ.

ಆಡವಾಡುತ್ತಿದ್ದ ಬಾಲಕರು ರೈಲು ಬರುತ್ತಿದೆ ಎಂಬುದನ್ನೂ ಗಮನಿಸಿದೇ ಹಾಗೆ ಕುಳಿತಿದ್ದರು. ಇದರಿಂದ ರೈಲು ಬಂದು ಗುದ್ದಿದೆ. ಪರಿಣಾಮ ನಾಲ್ವರು ಪೈಕಿ ಇಬ್ಬರು ಬಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇತರ ಇಬ್ಬರು ಬಾಲಕರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗದಲ್ಲಿ ಓರ್ವ ಮೃತಪಟ್ಟಿದ್ದು, ಇನ್ನೊಬ್ಬ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಲಕರಿಗೆ ಡಿಕ್ಕಿ ಹೊಡೆದ ನಂತರ ರೈಲು ಸ್ವಲ್ಪ ದೂರದಲ್ಲಿ ನಿಂತಿದೆ. ಅಲ್ಲದೇ, ರೈಲ್ವೆ ಸಿಬ್ಬಂದಿಯೇ ಬಾಲಕರನ್ನು ಮುಂದಿನ ಕಿರಾತ್‌ಪುರ ಸಾಹಿಬ್ ರೈಲು ನಿಲ್ದಾಣದವರೆಗೆ ಸಾಗಿಸಿದ್ದರು. ಈ ನಾಲ್ವರು ಬಾಲಕರು ಕೂಡ ವಲಸೆ ಕಾರ್ಮಿಕರ ಮಕ್ಕಳು ಎಂದು ತಿಳಿದುಬಂದಿದೆ. ಈ ಘಟನೆಯ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಘಟನಾ ಸ್ಥಳಕ್ಕೆ ಧಾವಿಸಿ ಬಂದಿದ್ದರು. ಸದ್ಯ ಪೊಲೀಸರು ಕೂಡ ಸ್ಥಳಕ್ಕೆ ಪರಿಶೀಲನೆ ನಡೆಸಿ, ಮುಂದಿನ ಕ್ರಮಕೈಗೊಂಡಿದ್ದಾರೆ.

ಇದನ್ನೂ ಓದಿ: ಬೆಂಗಾವಲು ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿ ಸಾವು: ಬಿಜೆಪಿ ಸಂಸದನ ವಿರುದ್ಧ ಕೇಸ್​ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.