ಮುಂಬೈ: ಮುಂಬೈನ ಹಲವು ಕಡೆ ನಕಲಿ ಕೊರೊನಾ ಲಸಿಕೆ ಹಾಕಿದ ಪ್ರಕರಣದಲ್ಲಿ ಪೊಲೀಸರು ಮೂರು ಎಫ್ಐಆರ್ ದಾಖಲಿಸಿದ್ದಾರೆ. ಮುಂಬೈ ಕಾನ್ಡಿವೇಲಿ ಪ್ರದೇಶದಲ್ಲಿರುವ ಹೌಸಿಂಗ್ ಸೊಸೈಟಿಯ ಹಿರಾನಂದಾನಿಯ 390 ನಿವಾಸಿಗಳಿಗೆ ನಕಲಿ ಕೊರೊನಾ ಲಸಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಪ್ರಕರಣ ಸಂಬಂಧ ಈವರೆಗೆ 5 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿಗಳಲ್ಲಿ ಒಬ್ಬರು ತಲೆ ಮರೆಸಿಕೊಂಡಿದ್ದಾರೆ. ಪರಾರಿಯಾಗಿರುವ ಆರೋಪಿ ವೈದ್ಯರಾಗಿದ್ದು, ಹೆಚ್ಚಿನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಖಾರ್, ವರ್ಸೋವಾ ಮತ್ತು ಕಾನ್ಡಿವೇಲಿ ಪ್ರದೇಶದಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು, ಈ ನಕಲಿ ವ್ಯಾಕ್ಸಿನೇಷನ್ನಲ್ಲಿ ಒಂದು ಗ್ಯಾಂಗ್ ಭಾಗಿಯಾಗಿದೆ ಎಂದು ತಿಳಿದು ಬಂದಿದೆ.
ಮೇ 30 ರಂದು ಮುಂಬೈನ ಹಿರಾನಂದಾನಿ ಸಮುಚ್ಚಯದಲ್ಲಿ 390 ಮಂದಿಗೆ ಲಸಿಕೆ ಹಾಕಲಾಗಿದ್ದು, ಲಸಿಕೆ ಪಡೆದವರಿಗೆ ಯಾವ ಕಂಪನಿಯ ವ್ಯಾಕ್ಸಿನ್ ನೀಡಲಾಗಿದೆ, ಯಾವ ಆಸ್ಪತ್ರೆಯಿಂದ ಹಾಕಲಾಗಿದೆ. ಲಸಿಕೆಯ ಅವಧಿ ಏನು ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಗದಿರುವುದರಿಂದ ಇದೊಂದು ನಕಲಿ ಲಸಿಕೆ ಜಾಲ ಎಂದು ತಿಳಿದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಫಸ್ಟ್ನೈಟ್ ದಿನವೇ ಆತ್ಮಹತ್ಯೆಗೆ ಯತ್ನಿಸಿದ ಜೋಡಿ.. ಕಾರಣ?