ETV Bharat / bharat

ರಾಜಸ್ಥಾನದ ಮೂವರು ಪತಿಯರಿಂದ ಪಾಕಿಸ್ತಾನದ ಪತ್ನಿಯರಿಗಾಗಿ ಕಾಯುವಿಕೆ !

author img

By

Published : Feb 21, 2021, 7:28 PM IST

Updated : Feb 21, 2021, 8:34 PM IST

2019 ರ ಜನವರಿಯಲ್ಲಿ ಪಾಕಿಸ್ತಾನದ ಸಿಂಧ್‌ನಲ್ಲಿ ರಾಜಸ್ಥಾನದ ಬಾರ್ಮರ್ ಮತ್ತು ಜೈಸಲ್ಮೇರ್ ಜಿಲ್ಲೆಯ ಮೂವರು ಪುರುಷರು ಪಾಕಿಸ್ತಾನದ ಮಹಿಳೆಯರನ್ನು ವಿವಾಹವಾಗಿದ್ದರು. ಇದಾದ ಒಂದು ತಿಂಗಳ ನಂತರ, ಪುಲ್ವಾಮಾ ದಾಳಿ ನಡೆದ ಹಿನ್ನೆಲೆ ಎರಡು ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಅಂದಿನಿಂದ ಪಾಕಿಸ್ತಾನದ ವಧುಗಳು ರಾಜಸ್ಥಾನಕ್ಕೆ ಬರಲು ಭಾರತೀಯ ವೀಸಾವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಇದೀಗ ವೀಸಾ ದೊರೆಯುವ ಭರವಸೆ ಅವರಲ್ಲಿ ಮೂಡಿದೆ.

men of Barmer got married in Sindh
ಮೂವರು ಪತಿಯರಿಂದ ಪಾಕಿಸ್ತಾನದ ಪತ್ನಿಯರಿಗಾಗಿ ಕಾಯುವಿಕೆ

ಬಾರ್ಮರ್ (ರಾಜಸ್ಥಾನ): ಭಾರತ ಮತ್ತು ಪಾಕಿಸ್ತಾನದ ನಡುವೆ ಶತ್ರುತ್ವ ಎಷ್ಟಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಇದರ ಹೊರತಾಗಿಯೂ ರಾಜಸ್ಥಾನದ ಅಂತಾರಾಷ್ಟ್ರೀಯ ಗಡಿಯಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ಬಾರ್ಮರ್ ಮತ್ತು ಜೈಸಲ್ಮೇರ್ ಜನರು ನೆರೆಯ ದೇಶದೊಂದಿಗೆ ಇಂದಿಗೂ 'ರೋಟಿ-ಬೇಟಿ' ಸಂಬಂಧವನ್ನು ಹೊಂದಿದ್ದಾರೆ.

ಎರಡು ದೇಶದ ಗಡಿಯ ಬದಿಯಲ್ಲಿ ವಾಸಿಸುವ ಜನರು ಹೆಚ್ಚಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮದುವೆಯಾಗುತ್ತಿದ್ದಾರೆ. ಭಾರತೀಯರು ಪಾಕಿಸ್ತಾನದಿಂದ ವಧುಗಳನ್ನು ತಂದರೆ, ಪಾಕಿಸ್ತಾನದವರು ಕೂಡ ಭಾರತದ ಹುಡುಗಿಯೊಂದಿಗೆ ಮದುವೆಯಾಗುತ್ತಿದ್ದಾರೆ.

2019 ರ ಜನವರಿಯಲ್ಲಿ ಬಾರ್ಮರ್‌ನ ಮೂವರು ಪುರುಷರು ಪಾಕಿಸ್ತಾನದ ಸಿಂಧ್‌ನಲ್ಲಿ ವಿವಾಹವಾಗಿದ್ದರು. ಇದಾದ ಒಂದು ತಿಂಗಳ ನಂತರ ಪುಲ್ವಾಮಾ ದಾಳಿಯಿಂದ ಎರಡು ದೇಶಗಳ ನಡುವೆ ಉದ್ವಿಗ್ನತೆ ಏರ್ಪಟ್ಟಿತ್ತು. ಅಂದಿನಿಂದ ಪಾಕಿಸ್ತಾನದ ವಧುಗಳು ರಾಜಸ್ಥಾನಕ್ಕೆ ಬರಲು ಭಾರತೀಯ ವೀಸಾ ಪಡೆಯಲು ಸಾಧ್ಯವಾಗಲಿಲ್ಲ.

ವಧುಗಳನ್ನು ಮರಳಿ ಭಾರತಕ್ಕೆ ಕರೆತರುವ ಭರವಸೆಯೊಂದಿಗೆ ವರರು ಪಾಕಿಸ್ತಾನದಲ್ಲಿಯೇ ಕಾಯುತ್ತಿದ್ದರು. ಆದ್ರೂ ಭಾರತದ ವಲಸೆ ಇಲಾಖೆ ವಧುಗಳಿಗೆ ಪ್ರವೇಶ ನೀಡಲಿಲ್ಲ.

ಓದಿ:ಯುವತಿ ಅನುಮಾನಾಸ್ಪದ ಸಾವು; ಪಾದ್ರಿಗಳಿಬ್ಬರು ಸೇರಿ ತಂದೆ ವಿರುದ್ಧ ಪ್ರಕರಣ

ಈಗ ಭಾರತದ ವಿದೇಶಾಂಗ ಸಚಿವಾಲಯವು ವಧುಗಳನ್ನು ಭಾರತಕ್ಕೆ ಕರೆತರುವ ಕೆಲಸವನ್ನು ಪ್ರಾರಂಭಿಸಿದ್ದು, ಶೀಘ್ರದಲ್ಲೇ ಅವರು ಭಾರತದಲ್ಲಿರುವ ತಮ್ಮ ಪತಿಯರ ಮನೆಗೆ ಬರುತ್ತಾರೆ ಎಂಬ ಭರವಸೆಯನ್ನು ಹುಟ್ಟುಹಾಕಿದೆ.

ವಿಕ್ರಮ್ ಸಿಂಗ್ ಮತ್ತು ಅವರ ಸಹೋದರ ನೇಪಾಳ ಸಿಂಗ್, ದರ್ಸಿಯಲ್​​ನ ಬೈಯಾ ಗ್ರಾಮದ ನಿವಾಸಿ ಜೈಸಲ್ಮೇರ್​ನಿಂದ 2019 ರ ಜನವರಿಯಲ್ಲಿ ಥಾರ್ ಎಕ್ಸ್‌ಪ್ರೆಸ್ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದರು. ವಿಕ್ರಮ್ ಸಿಂಗ್ ಜನವರಿ 22 ರಂದು ಮತ್ತು ನೇಪಾಳ ಸಿಂಗ್​ ಜನವರಿ 26 ರಂದು ವಿವಾಹವಾದರು. ಅದೇ ರೀತಿ ಬಾರ್ಮರ್‌ನ ಮಹೇಂದ್ರ ಸಿಂಗ್ ಅವರು ಏಪ್ರಿಲ್ 16 ರಂದು ವಿವಾಹವಾದರು.

ವೀಸಾಗಾಗಿ ಕಾಯುತ್ತಿರುವ ಮಧ್ಯೆಯೇ ನೇಪಾಳ ಸಿಂಗ್ ಅವರ ಪತ್ನಿ ಒಂದು ಮಗುವಿನ ತಾಯಿಯಾಗಿದ್ದಾರೆ. ಅವರ ಮಗ ರಾಜ್ವೀರ್ ಸಿಂಗ್ ಅವರಿಗೆ ಇದೀಗ ಒಂದು ವರ್ಷವಾಗಿದೆ.

Last Updated : Feb 21, 2021, 8:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.