ETV Bharat / bharat

ಬಾಂಗ್ಲಾದೇಶಿ ಸಹೋದರರಿಂದ ಕೋಲ್ಕತ್ತಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ - ಬಾಂಗ್ಲಾದೇಶ

ಚಿಕಿತ್ಸೆಗೆಂದು ಬಾಂಗ್ಲಾದೇಶದಿಂದ ಕೋಲ್ಕತ್ತಾಕ್ಕೆ ಬಂದ ಮೂವರು ಸಹೋದರರಿಂದ ಯುವತಿಯ ಸಾಮೂಹಿಕ ಅತ್ಯಾಚಾರ- ಸಂತ್ರಸ್ತೆ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಿದ ನ್ಯೂ ಮಾರ್ಕೆಟ್​ ಠಾಣೆ ಪೊಲೀಸರು.

Three Bangladeshis arrested on rape charge
ಮೂರು ಬಾಂಗ್ಲಾದೇಶಿ ಸಹೊದರರಿಂದ ಯುವತಿಯ ಅತ್ಯಾಚಾರ...
author img

By

Published : Dec 1, 2022, 7:19 PM IST

ಕೊಲ್ಕತ್ತಾ(ಪಶ್ಚಿಮ ಬಂಗಾಳ): ಮೂವರು ಬಾಂಗ್ಲಾದೇಶಿ ಸಹೋದರರು ಯುವತಿಯನ್ನು ಹೋಟೆಲ್​ಗೆ ಕರೆದೊಯ್ದು ಅತ್ಯಾಚಾರವೆಸಗಿದ ಪ್ರಕರಣ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.

ಯುವತಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಆರಂಭಿಸಿದ ನ್ಯೂ ಮಾರ್ಕೆಟ್​ ಠಾಣೆ ಪೊಲೀಸರು, ವಿಶೇಷ ತಂಡವನ್ನು ರಚಿಸಿ ಮಾರ್ಕ್ವಿಸ್ ಸ್ಟ್ರೀಟ್‌ನಲ್ಲಿರುವ ಹೋಟೆಲ್‌ವೊಂದರಲ್ಲಿ ತಂಗಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಚಿಕಿತ್ಸೆಗಾಗಿ ಬಾಂಗ್ಲಾದೇಶದಿಂದ ಕೋಲ್ಕತ್ತಾಕ್ಕೆ ಬಂದಿದ್ದ ಸಹೋದರರು ಯುವತಿಯನ್ನು ಹೋಟೆಲ್‌ಗೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿದುಬಂದಿದೆ.

ಮೊಹಮ್ಮದ್ ರಸೆಲ್ ಶೇಖ್ (37), ಮೊಹಮ್ಮದ್ ಕೌಸರ್ ಚೌಧರಿ (37), ಮತ್ತು ಮೊಹಮ್ಮದ್ ಅಬ್ದುಲ್ ಅಲಿ ಮಿಜಾನ್ (36) ಬಂಧಿತ ಆರೋಪಿಗಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿ ಹಾಗೂ ಹೋಟೆಲ್​ನ ರಿಜಿಸ್ಟರ್​ ಪುಸ್ತಕವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: 10 ದಿನದ ಹಿಂದೆ ಪತ್ನಿಯನ್ನು ಕೊಲೆಗೈದು ಎಸ್ಕೇಪ್ ಆಗಿದ್ದ ಆರೋಪಿ ಪತಿ ಅಂದರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.