ಸಿಮ್ಡೆಗಾ (ಜಾರ್ಖಂಡ್): ಜೂನ್ 5 ರಂದು 14 ವರ್ಷದ ಬುಡಕಟ್ಟು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜಾರ್ಖಂಡ್‌ನ ಕೊಲೆಬಿರಾ ಪೊಲೀಸರು ಮಂಗಳವಾರ ಮೂವರನ್ನು ಬಂಧಿಸಿದ್ದಾರೆ. ಬಾಲಕಿಯನ್ನು ಹೊಟ್ಟೆನೋವು ಎಂದು ಸದರ್ ಆಸ್ಪತ್ರೆಗೆ ಕರೆದೊಯ್ದ ನಂತರ ಅತ್ಯಾಚಾರ ಎಸೆಗಿರುವುದು ಗೊತ್ತಾಗಿದೆ.
ಆ ಬಳಿಕ ಸಂತ್ರಸ್ತೆಯ ಕುಟುಂಬ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು, ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆಗೆ ಒಳಪಡಿಸಿದ್ದರು. ವೈದ್ಯರ ತಪಾಸಣೆ ವೇಳೆ ಬಾಲಕಿ ಗರ್ಭಿಣಿ ಎಂಬುದು ಗೊತ್ತಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜೂನ್ 5 ರಂದು ಆಕಾಶ್ ಟೆಟೆ, ಅಮನ್ ಡುಂಗ್‌ಡಂಗ್ ಮತ್ತು ಬನ್ಸ್ ಬಹಲ್ ಎಂಬುವರು ಸ್ನೇಹಿತರೊಂದಿಗೆ ಕೋಣೆಗೆ ಬೀಗ ಹಾಕಿ ಅತ್ಯಾಚಾರ ಎಸಗಿದ್ದಾರೆ ಎಂದು ಅಪ್ರಾಪ್ತ ದೂರಿನಲ್ಲಿ ಆರೋಪಿಸಿದ್ದಾಳೆ. ಈ ಬಗ್ಗೆ ಕೊಲೆಬೀರಾ ಪೊಲೀಸ್ ಠಾಣೆ ಪ್ರಭಾರಿ ರಾಮೇಶ್ವರ ಭಗತ್ ಮಾತನಾಡಿದ್ದು, ತಾಚಿತೈತಾಂಗರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮೂವರು ಆರೋಪಿಗಳು ಸಂತ್ರಸ್ತೆಗೆ ಈ ಬಗ್ಗೆ ಯಾರಿಗೂ ಹೇಳಬೇಡಿ, ಇಲ್ಲದಿದ್ದರೆ ಕೊಲ್ಲಲಾಗುವುದು ಎಂದು ಬೆದರಿಕೆ ಹಾಕಿದ್ದರು ಎಂದು ಬಾಲಕಿ ದೂರಿನಲ್ಲಿ ಆರೋಪಿಸಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.
ಬಾಲಕಿಯ ಪಾಲಕರು ಅತ್ಯಾಚಾರ ನಡೆದಿರುವ ದೂರು ದಾಖಲಿಸುತ್ತಿದ್ದಂತೆ, ಕೆಲವೇ ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಯಿತು ಎಂದು ಸಿಮ್ಡೆಗಾ ಎಸ್ಪಿ ತಿಳಿಸಿದ್ದಾರೆ. ಪೊಲೀಸ್ ದಾಳಿಯ ಬಗ್ಗೆ ಸುಳಿವು ಸಿಕ್ಕ ನಂತರ ಮೂವರು ಆರೋಪಿಗಳು ಪರಾರಿಯಾಗಿದ್ದರು. ಆದರೆ ಪೊಲೀಸರು ಆರೋಪಿಗಳನ್ನು ತಾಚಿತೈತಂಗಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಜೈಲಿಗೆ ಹಾಕಿದ್ದು, ಅವರ ವಿಚಾರಣೆ ನಡೆಸುತ್ತಿದ್ದಾರೆ. ಉಳಿದ ಸ್ನೇಹಿತರಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.
ಇದನ್ನು ಓದಿ:ಕಾಸರಗೋಡು ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗೆ ರ‍್ಯಾಗಿಂಗ್.. ವಿಡಿಯೋ ವೈರಲ್