ETV Bharat / bharat

ಪಂಜಾಬ್​ಗೆ ಪಿಎಂ ಮೋದಿ ಭೇಟಿ ಹಿನ್ನೆಲೆ..ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗೆ ಸಿದ್ಧತೆ ಕೈಗೊಂಡಿರುವ ಆಪ್​ ಸರ್ಕಾರ

ಪಂಜಾಬ್​ಗೆ ಪಿಎಂ ಮೋದಿ ಭೇಟಿ ಹಿನ್ನೆಲೆ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗೆ ಆಪ್​ ಸರ್ಕಾರ ಸಕಲ ಸಿದ್ಧತೆ ಕೈಗೊಂಡಿದ್ದಾರೆ.

ಪಂಜಾಬ್​ಗೆ ಪಿಎಂ ಮೋದಿ ಭೇಟಿ ಹಿನ್ನೆಲೆ
ಪಂಜಾಬ್​ಗೆ ಪಿಎಂ ಮೋದಿ ಭೇಟಿ ಹಿನ್ನೆಲೆ
author img

By

Published : Aug 20, 2022, 10:12 AM IST

ಚಂಡೀಗಢ, ಪಂಜಾಬ್​: ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 24 ರಂದು ಮೊಹಾಲಿಗೆ ಆಗಮಿಸುತ್ತಿರುವ ಹಿನ್ನೆಲೆ ಪಂಜಾಬ್ ಪೊಲೀಸರು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗೆ ಸಿದ್ಧತೆಗಳನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ.

ಈ ಸಿದ್ಧತೆಗಳನ್ನು ಅಂತಿಮಗೊಳಿಸಲು ಡಿಜಿಪಿ ಗೌರವ್ ಯಾದವ್ ಅವರು ಶನಿವಾರ (ಇಂದು) ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದಾರೆ. ಪ್ರಸ್ತುತ, ಪಂಜಾಬ್ ಪೊಲೀಸರು ಪ್ರಧಾನಿ ಮೋದಿ ಅವರ ಕಾರ್ಯಕ್ರಮವನ್ನು ಗಮನದಲ್ಲಿಟ್ಟುಕೊಂಡು ಏಳು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಜವಾನರನ್ನು ನಿಯೋಜಿಸಲು ನಿರ್ಧರಿಸಿದ್ದಾರೆ.

ಈ ಭದ್ರತಾ ವ್ಯವಸ್ಥೆಯು ಮೂರರಿಂದ ಐದು ಪದರಗಳನ್ನು ಹೊಂದಿರುತ್ತದೆ. ಯಾವುದೇ ಹೊರಗಿನವರಿಗೆ ಅನುಮತಿಯಿಲ್ಲದೇ ಪ್ರವೇಶಿಸಲು ಸಾಧ್ಯವಿಲ್ಲ. ಇದಲ್ಲದೇ ಈ ಪ್ರದೇಶದಲ್ಲಿ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಪ್ರಧಾನಿ ಫಿರೋಜ್‌ಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭದ್ರತೆಯಲ್ಲಿ ಭಾರಿ ಲೋಪ ಉಂಟಾಗಿತ್ತು. ಇದರಿಂದಾಗಿ ಪ್ರಧಾನಿ ಮಧ್ಯದಲ್ಲಿ ದೆಹಲಿಗೆ ಮರಳಬೇಕಾಯಿತು. ಇದೀಗ ರಾಜ್ಯ ಸರ್ಕಾರ ಮತ್ತು ಪಂಜಾಬ್ ಪೊಲೀಸರು ಪ್ರಧಾನಿಯವರ ಭೇಟಿಯನ್ನು ಸುಗಮ ಮತ್ತು ಶಾಂತಿಯುತವಾಗಿ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ತೊಡಗಿದ್ದಾರೆ.

ಮೊಹಾಲಿಯಲ್ಲಿ ಪ್ರಧಾನಿ ಕಾರ್ಯಕ್ರಮ ಆಯೋಜನೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಜಿಪಿ ಗೌರವ್ ಯಾದವ್, ಸಾರ್ವಜನಿಕ ಸಭೆಯನ್ನು ಆಯೋಜಿಸುವ ಬಗ್ಗೆ ಪ್ರಸ್ತುತ ನಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದರು.

ಓದಿ: ಪ್ರಧಾನಿ ಮೋದಿ ಭದ್ರತೆಗೆ ಮುಧೋಳ ಶ್ವಾನಗಳು: ಎರಡು ಮರಿಗಳನ್ನು ದೆಹಲಿಗೆ ಕೊಂಡೊಯ್ದ ಎಸ್​ಪಿಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.