ETV Bharat / bharat

18 ವರ್ಷ ಮೇಲ್ಪಟ್ಟವರಿಗೆ ಶನಿವಾರದಿಂದ ಲಸಿಕೆ ನೋಂದಣಿ ಶುರು: ಪ್ರಕ್ರಿಯೆ ಹೀಗಿರಲಿದೆ..

author img

By

Published : Apr 22, 2021, 2:28 PM IST

ಕೋವಿನ್ ಪೋರ್ಟಲ್​​ ಹಾಗೂ ಆರೋಗ್ಯಾ ಸೇತು ಆ್ಯಪ್ ಮೂಲಕ 18 ವರ್ಷಕ್ಕಿಂತ ಮೇಲ್ಪಟ್ಟವರು ಕೋವಿಡ್​ ಲಸಿಕೆ ಪಡೆಯಲು ಹೇಗೆ ನೋಂದಣಿ ಮಾಡಿಕೊಳ್ಳಬೇಕು ಎಂಬುದರ ವಿವರ ಇಲ್ಲಿದೆ.

Those Above 18 Can Register For Vaccine From Saturday
18 ವರ್ಷ ಮೇಲ್ಪಟ್ಟವರು ಲಸಿಕೆಗಾಗಿ ಶನಿವಾರದಿಂದ ನೋಂದಾಯಿಸಿಕೊಳ್ಳಬಹುದು

ನವದೆಹಲಿ: ಮೇ1 ರಿಂದ ಕೋವಿಡ್​ ವ್ಯಾಕ್ಸಿನೇಷನ್‌ಗೆ ಅರ್ಹರಾಗಿರುವ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಶನಿವಾರ (ಏಪ್ರಿಲ್ 24) ರಿಂದ ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ಅಥವಾ ಆರೋಗ್ಯಾ ಸೇತು ಆ್ಯಪ್ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.

ಭಾರತದಲ್ಲಿ ಅತ್ಯಂತ ಕಠಿಣ ಕೋವಿಡ್ ಪರಿಸ್ಥಿತಿ ಎದುರಿಸುತ್ತಿದ್ದು, ಮೇ 1 ರಿಂದ ಎಲ್ಲಾ ವಯಸ್ಕರಿಗೆ ಲಸಿಕೆ ನೀಡಲು ಸರ್ಕಾರ ಮುಂದಾಗಿದೆ. ಈವರೆಗೆ ಅರ್ಹರು ಎಂದು ಘೋಷಿಸಲ್ಪಟ್ಟ ಕೋವಿಡ್​ ವಿರುದ್ಧದ ಮುಂಚೂಣಿ ಕಾರ್ಮಿಕರು, ಆರೋಗ್ಯ ಕಾರ್ಯಕರ್ತರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೂಡ ಲಸಿಕೆ ನೀಡುವುದನ್ನು ಕೇಂದ್ರ ಸರ್ಕಾರ ಮುಂದುವರಿಸಲಿದೆ.

ಕೋವಿನ್ (CoWin)ನಲ್ಲಿ ನೋಂದಣಿ ಹೇಗೆ?

ಮುಂದಿನ 48 ಗಂಟೆಗಳಲ್ಲಿ ಸರ್ಕಾರದ ಕೋವಿನ್ ಪೋರ್ಟಲ್​​ನಲ್ಲಿ ನೋಂದಣಿ ಆರಂಭವಾಗಲಿದ್ದು, 18 ವರ್ಷ ಮೇಲ್ಪಟ್ಟವರು ಇಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.

  • ಕೋವಿನ್ ವೆಬ್‌ಸೈಟ್‌ಗೆ ಹೋಗಿ, 'ರಿಜಿಸ್ಟರ್ ಅಥವಾ ಸೈನ್ ಇನ್' ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, 'ಗೆಟ್ ಒಟಿಪಿ' ಕ್ಲಿಕ್ ಮಾಡಿ. ನಿಮ್ಮ ಮೊಬೈಲ್​ಗೆ ಬಂದ ಒಟಿಪಿ ನಮೂದಿಸಿ. ಬಳಿಕ 'ಪರಿಶೀಲಿಸಿ' (Verify) ಎಂಬುದರ ಮೇಲೆ ಕ್ಲಿಕ್ ಮಾಡಿ.
  • ವ್ಯಾಕ್ಸಿನೇಷನ್ ಫಾರ್ ರಿಜಿಸ್ಟರ್ ಪುಟದಲ್ಲಿ, ಫೋಟೋ ಐಡಿ ಪ್ರೂಫ್, ಹೆಸರು, ಲಿಂಗ ಮತ್ತು ಹುಟ್ಟಿದ ವರ್ಷ ಸೇರಿದಂತೆ ಎಲ್ಲಾ ವಿವರಗಳನ್ನು ನಮೂದಿಸಿ. 'ರಿಜಿಸ್ಟರ್' (Register) ಮೇಲೆ ಕ್ಲಿಕ್ ಮಾಡಿ.
  • ನೋಂದಾಯಿಸಿದ ನಂತರ, ಅಪಾಯಿಂಟ್ಮೆಂಟ್ ಅನ್ನು ನಿಗದಿಪಡಿಸುವ ಆಯ್ಕೆಯನ್ನು ನೀವು ಪಡೆಯುತ್ತೀರಿ, ನೋಂದಾಯಿತ ವ್ಯಕ್ತಿಯ ಹೆಸರಿನ ಪಕ್ಕದಲ್ಲಿರುವ 'ವೇಳಾಪಟ್ಟಿ' (Schedule) ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಪಿನ್ ಕೋಡ್ ನಮೂದಿಸಿ ಮತ್ತು 'ಹುಡುಕಾಟ' (Search) ಮೇಲೆ ಕ್ಲಿಕ್​ ಮಾಡಿ. ಪಿನ್ ಕೋಡ್‌ನಲ್ಲಿರುವ ಕೇಂದ್ರಗಳು ಕಾಣಿಸಿಕೊಳ್ಳುತ್ತವೆ, ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ ಮತ್ತು 'ದೃಢೀಕರಿಸಿ' (Confirm) ಮೇಲೆ ಕ್ಲಿಕ್ ಮಾಡಿ.
  • ಒಂದು ಲಾಗಿನ್ ಮೂಲಕ ನೀವು ನಾಲ್ಕು ಸದಸ್ಯರನ್ನು ಸೇರಿಸಬಹುದು. ಇದೇ ಪ್ರಕ್ರಿಯೆ ಬಳಸಿ ನಿಮ್ಮ ನೇಮಕಾತಿಯನ್ನು ಮರು ನಿಗದಿಪಡಿಸಬಹುದು.

ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಣಿ ಪ್ರಕ್ರಿಯೆ

  • ಆರೋಗ್ಯ ಸೇತು ಅಪ್ಲಿಕೇಶನ್‌ಗೆ ಹೋಗಿ - ಕೋವಿನ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
  • ವ್ಯಾಕ್ಸಿನೇಷನ್ ನೋಂದಣಿ ಆಯ್ಕೆ ಮಾಡಿ - ಫೋನ್ ಸಂಖ್ಯೆಯನ್ನು ನಮೂದಿಸಿ - ಒಟಿಪಿ ನಮೂದಿಸಿ
  • ಪರಿಶೀಲನೆ (Verify) ಮೇಲೆ ಕ್ಲಿಕ್ ಮಾಡಿದಾಗ ವ್ಯಾಕ್ಸಿನೇಷನ್ ಪುಟ ತೆರೆದುಕೊಳ್ಳುತ್ತದೆ
  • ಬಳಿಕ 'ಕೋವಿನ್' ಪೋರ್ಟಲ್​​ನಂತೆಯೇ ಪ್ರಕ್ರಿಯೆಯ ಹಂತಗಳನ್ನು ಅನುಸರಿಸಿ

ಪ್ರತಿ ನಾಗರಿಕರು ಲಸಿಕೆಯ ಎರಡು ಡೋಸ್​ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೋವ್ಯಾಕ್ಸಿನ್​​ನ ಎರಡನೇ ಡೋಸ್ ಅನ್ನು ಮೊದಲ ಡೋಸ್ ಪಡೆದ 28 ದಿನಗಳಿಂದ 42 ದಿನಗಳ ನಡುವೆ ತೆಗೆದುಕೊಳ್ಳಬೇಕು. ಕೋವಿಶೀಲ್ಡ್​ನ ಎರಡನೇ ಡೋಸ್ ಅನ್ನು ಮೊದಲ ಡೋಸ್ ಪಡೆದ 28 ದಿನಗಳಿಂದ 56 ದಿನಗಳೊಳಗಾಗಿ ತೆಗೆದುಕೊಳ್ಳಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.