ಪ್ರಯಾಗರಾಜ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಹಳ್ಳಿವೊಂದರಲ್ಲಿ ಶೇಕಡಾ 80ರಷ್ಟು ಜನರು ಜನವರಿ 1ರಂದೇ ಹುಟ್ಟಿದ್ದಾರಂತೆ!. ಹಾಗಂತ ಹೇಳುತ್ತಿರುವುದು ಅವರವರ ಆಧಾರ್ ಕಾರ್ಡ್. ಪ್ರಯಾಗರಾಜ್ನ ಬಾರಾ ತೆಹಲ್ಸಿ ಗ್ರಾಮಸ್ಥರ ಆಧಾರ್ ಕಾರ್ಡ್ ಪರಿಶೀಲಿಸಿದಾಗ ಈ ಅಚ್ಚರಿಯ ಮಾಹಿತಿ ಗೊತ್ತಾಗಿದೆ.
ಗ್ರಾಮಸ್ಥರೆಲ್ಲರೂ ಹೊಸ ವರ್ಷದ ಮೊದಲ ದಿನವಾದ ಜನವರಿ 1ರಂದೇ ಜನಿಸಿರುವ ಬಗ್ಗೆ ಆಧಾರ್ ಕಾರ್ಡ್ಗಳು ಹೇಳುತ್ತವೆ. ಒಂದು ಕುಟುಂಬದ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಿದಾಗ ಕುಟುಂಬದ ತಂದೆ, ತಾಯಿ, ಪುತ್ರರು, ಮಗಳು, ಸೊಸೆ ಮತ್ತು ಇತರರು ಸೇರಿದಂತೆ ಹತ್ತು ಸದಸ್ಯರು ಹೊಸ ವರ್ಷದಂದು ಜನಿಸಿದ್ದು, ಈಟಿವಿ ಭಾರತ ಈ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾದಾಗ ಸತ್ಯ ಗೊತ್ತಾಗಿದೆ.
ಅಸಲಿಯತ್ತು ಇಂತಿದೆ:
2012ರಲ್ಲಿ ಆಧಾರ್ ಕಾರ್ಡ್‌ನ ಏಜೆಂಟರೊಬ್ಬರು ತಮ್ಮ ಗ್ರಾಮಕ್ಕೆ ಭೇಟಿ ನೀಡಿದ್ದರಂತೆ. ಆಗ ಗ್ರಾಮದ ಶೇಕಡಾ 90ರಷ್ಟು ಜನರಿಗೆ ತಾವು ಜನಿಸಿದ ನಿಖರವಾದ ದಿನಾಂಕದ ಬಗ್ಗೆ ತಿಳಿದಿರಲಿಲ್ಲ. ಆದ್ದರಿಂದ, ಅಧಿಕಾರಿಗಳು ಆಧಾರ್ ಕಾರ್ಡ್ನಲ್ಲಿ ಜನವರಿ 1ರಂದು ಹುಟ್ಟಿದ್ದಾಗಿ ನಮೂದಿಸಿಕೊಂಡಿದ್ದರು ಎಂದು 38 ವರ್ಷದ ನೀಲಂ ಕುಶ್ವಾಹಾ ಮಾಹಿತಿ ನೀಡಿದ್ದಾರೆ.
ಸದ್ಯ ಗ್ರಾಮಸ್ಥರು ಪಡೆದುಕೊಳ್ಳುತ್ತಿರುವ ಶೇಕಡಾ 70ರಷ್ಟು ಸರ್ಕಾರದ ಯೋಜನೆಗಳು ಇದೇ ಆಧಾರ್ ಕಾರ್ಡ್ಗಳ ಮೇಲೆ ಅವಲಂಬಿತವಾಗಿವೆ ಎಂಬುದು ಕೂಡ ಈ ವೇಳೆ ತಿಳಿದು ಬಂದಿದೆ.