ETV Bharat / bharat

ಗುಜರಾತ್​ನಲ್ಲಿ ಕಾಂಗ್ರೆಸ್​ಗೆ ಗೆಲ್ಲುವ ಉತ್ತಮ ಅವಕಾಶ: ಕನ್ಹಯ್ಯಾ ಕುಮಾರ್ - ಕನ್ಹಯ್ಯಾ ಕುಮಾರ್ ವಿಶ್ವಾಸ

ರಾಷ್ಟ್ರಕ್ಕೆ ಬದಲಾವಣೆಯ ಅಗತ್ಯವಿದ್ದಾಗ ಗುಜರಾತ್‌ ನಾಗರಿಕರು ಬದಲಾವಣೆಯನ್ನು ಒದಗಿಸುವ ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಾರೆ ಎಂದು ಕನ್ಹಯ್ಯಾ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಗುಜರಾತ್​ನಲ್ಲಿ ಕಾಂಗ್ರೆಸ್​ಗೆ ಗೆಲ್ಲುವ ಉತ್ತಮ ಅವಕಾಶ: ಕನ್ಹಯ್ಯಾ ಕುಮಾರ್
this-time-congress-has-a-good-chance-to-win-in-gujarat-kanhaiya-kumar
author img

By

Published : Nov 22, 2022, 4:55 PM IST

ಅಹಮದಾಬಾದ್: ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ನಡೆಯಲಿರುವ 2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲು ಕಾಂಗ್ರೆಸ್ ಸ್ಟಾರ್ ಪ್ರಚಾರಕ ಕನ್ಹಯ್ಯಾ ಕುಮಾರ್ ಅಹಮದಾಬಾದ್‌ನಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬಾರಿ ಗುಜರಾತಿನಲ್ಲಿ ಕಾಂಗ್ರೆಸ್‌ ಸರ್ಕಾರ ರಚಿಸುವ ಉತ್ತಮ ಅವಕಾಶಗಳಿದ್ದು, ಜನ ಬೆಂಬಲಕ್ಕೆ ಧನ್ಯವಾದ ಎಂದಿದ್ದಾರೆ.

ಕಳೆದ 27 ವರ್ಷಗಳಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್ ವಿರೋಧ ಪಕ್ಷವಾಗಿ ಸಮರ್ಥ ಪಾತ್ರ ವಹಿಸಿದೆ ಎಂದು ಕನ್ಹಯ್ಯಾ ಕುಮಾರ್ ಪ್ರತಿಪಾದಿಸಿದ್ದಾರೆ. ಈಗ ನಿರುದ್ಯೋಗ ಸಮಸ್ಯೆ, ಅಧಿಕ ವಿದ್ಯುತ್ ಬಿಲ್‌ ಮತ್ತು ರೈತರ ಸಾಲದ ಸಮಸ್ಯೆಗಳು ಕೊನೆಗೊಳ್ಳುವಂತೆ ರಾಜ್ಯದ ಜನರು ಬದಲಾವಣೆಯತ್ತ ಎದುರು ನೋಡುತ್ತಿದ್ದಾರೆ. ರಾಷ್ಟ್ರಕ್ಕೆ ಬದಲಾವಣೆಯ ಅಗತ್ಯ ಇದ್ದಾಗ ಗುಜರಾತ್‌ ನಾಗರಿಕರು ಬದಲಾವಣೆಯನ್ನು ಒದಗಿಸುವ ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಗೆಲ್ಲುವ ಉತ್ತಮ ಅವಕಾಶಗಳಿವೆ ಮತ್ತು ಆಮ್ ಆದ್ಮಿ ಪಾರ್ಟಿ (ಎಎಪಿ) ಅಂಶವು ಈ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ಬಗ್ಗೆ ಮತದಾರರು ಅತೃಪ್ತರಾಗಿದ್ದಾರೆ. ಹಣದುಬ್ಬರ ತೀವ್ರವಾಗಿ ಏರಿಕೆಯಾಗಿದೆ ಮತ್ತು ನಿರುದ್ಯೋಗದ ಮಟ್ಟ ಆತಂಕಕಾರಿಯಾಗಿದೆ ಎಂದು ಅವರು ಹೇಳಿದರು.

ಜಮಾಲ್‌ಪುರ ಖಾಡಿಯಾ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಖಡೇವಾಲಾ ಪರ ಪ್ರಚಾರ ನಡೆಸಿದ ಕನ್ಹಯ್ಯಾ ಕುಮಾರ್, ಹಲವು ಸಮಸ್ಯೆಗಳು ದೇಶವನ್ನು ಕಾಡುತ್ತಿರುವ ಸಂದರ್ಭದಲ್ಲಿ ಗುಜರಾತ್‌ನ ಯುವಕರು ಇಡೀ ದೇಶಕ್ಕೆ ಮಾರ್ಗದರ್ಶನ ನೀಡುವ ಸವಾಲನ್ನು ಸ್ವೀಕರಿಸಬೇಕೆಂದು ಕರೆ ನೀಡಿದರು. ಕಾಂಗ್ರೆಸ್ ಪಕ್ಷದಿಂದ ಮಾತ್ರ ದೇಶವನ್ನು ಉಳಿಸಲು ಸಾಧ್ಯ ಎಂದರು.

ಇದನ್ನೂ ಓದಿ: ಖಾದಿ ಮಂಡಳಿ ಉಪಾಧ್ಯಕ್ಷರಿಗೆ ಬುಲೆಟ್ ಪ್ರೂಫ್ ಕಾರ್: ಚರ್ಚೆಗೆ ಕಾರಣವಾಯ್ತು ಪಿಣರಾಯಿ ಸರ್ಕಾರದ ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.