ETV Bharat / bharat

Video ವೈರಲ್​​: ನಡುರಸ್ತೆಯಲ್ಲೇ ಕ್ಯಾಬ್​​ ಡ್ರೈವರ್​ ಮೇಲೆ ಹಲ್ಲೆ ನಡೆಸಿದ ಯುವತಿ! - ಕ್ಯಾಬ್​​ ಡ್ರೈವರ್ ಜೊತೆ ಯುವತಿ ಜಗಳ

ಯುವತಿಯೊಬ್ಬಳು ನಡುರಸ್ತೆಯಲ್ಲೇ ಕ್ಯಾಬ್​​ ಡ್ರೈವರ್ ಜೊತೆ ಜಗಳವಾಡಿ ಆತನೊಂದಿಗೆ ಅಸಭ್ಯವಾಗಿ ನಡೆದುಕೊಂಡಿರುವ ಘಟನೆ ಲಖನೌದಲ್ಲಿ ನಡೆದಿದೆ.

Women
Women
author img

By

Published : Aug 2, 2021, 10:27 PM IST

ಲಖನೌ (ಉತ್ತರ ಪ್ರದೇಶ): ರಾತ್ರಿ ವೇಳೆ ಯುವತಿಯೊಬ್ಬಳು ನಡು ರಸ್ತೆಯಲ್ಲೇ ಕ್ಯಾಬ್​ ಡ್ರೈವರ್​​ ಜೊತೆ ಜಗಳ ತೆಗೆದು ಆತನ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ನಡೆದಿದ್ದು, ಇದರ ವಿಡಿಯೋ ಇದೀಗ ವೈರಲ್​​​ ಆಗಿದೆ. ಶುಕ್ರವಾರ ರಾತ್ರಿ ಕೃಷ್ಣ ನಗರದ ರಸ್ತೆಯಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ನಡುರಸ್ತೆಯಲ್ಲೇ ಕ್ಯಾಬ್​​ ಡ್ರೈವರ್​ ಮೇಲೆ ಹಲ್ಲೆ ನಡೆಸಿದ ಯುವತಿ!

ಕ್ಯಾಬ್​ ಡ್ರೈವರ್​ ತನ್ನ ಮೇಲೆ ಹಲ್ಲೆ ನಡೆಸಿರುವ ಜೊತೆಗೆ ಕಿರುಕುಳ ನೀಡಿದ್ದಾನೆಂದು ಆಕೆ ಆರೋಪ ಮಾಡಿದ್ದು, ಸುಮಾರು 20 ನಿಮಿಷಗಳ ಕಾಲ ರಸ್ತೆಯಲ್ಲೇ ಹೈಡ್ರಾಮಾ ಮಾಡಿದ್ದಾಳೆ. ಇದೇ ವೇಳೆ, ಡ್ರೈವರ್​​ನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಇದರಿಂದ ಸ್ಥಳದಲ್ಲಿ ಸುಮಾರು ನಿಮಿಷಗಳ ಕಾಲ ಟ್ರಾಫಿಕ್​​​ ಸಮಸ್ಯೆಯಾಗಿತ್ತು.

Women
ನಡುರಸ್ತೆಯಲ್ಲೇ ಡ್ರೈವರ್​​ನಿಗೆ ಕಪಾಳಮೋಕ್ಷ

ಇದನ್ನೂ ಓದಿರಿ: ಸಚಿವ ಸಂಪುಟ ರಚನೆ ಸರ್ಕಸ್​...ಜೆಪಿ ನಡ್ಡಾ ಭೇಟಿ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ

ಡ್ರೈವರ್​ ಯುವತಿ ಬಳಿ ಮನವಿ ಮಾಡಿದರೂ ಸುಮ್ಮನಾಗಿಲ್ಲ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ ಬಳಿಕ, ಕ್ಯಾಬ್​ ಡ್ರೈವರ್​ ಸಾದತ್​​ ನಿರಪರಾಧಿ ಎಂಬುದು ಗೊತ್ತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.