ETV Bharat / bharat

ಜನವರಿ 23ರಿಂದ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಉತ್ತುಂಗಕ್ಕೆ: ಐಐಟಿ ಕಾನ್ಪುರ ತಜ್ಞ - ಕೋವಿಡ್ ಕುರಿತು ಐಐಟಿ ಕಾನ್ಪುರ ತಜ್ಞ ಮನೀಂದ್ರ ಅಗರ್ವಾಲ್ ಹೇಳಿಕೆ

ಕಳೆದ ಏಳು ದಿನಗಳಲ್ಲಿ ಕೆಲವು ನಗರಗಳಲ್ಲಿ ಕೋವಿಡ್ ಏರಿಕೆಯಾಗಿರುವ ಬಗ್ಗೆ ಮನೀಂದ್ರ ಅಗರವಾಲ್ ಹೇಳಿದ್ದು, ಈ ವಾರದಲ್ಲಿ ಕರ್ನಾಟಕ ಮಹಾರಾಷ್ಟ್ರ, ಯುಪಿ, ಗುಜರಾತ್ ಮತ್ತು ಹರಿಯಾಣದಲ್ಲಿ ಕೋವಿಡ್ ಸೋಂಕಿತರು ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.

third-covid-wave-likely-to-peak-on-january-23-in-india-says-iit-kanpur-scientist
ಜನವರಿ 23ರಿಂದ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಉತ್ತುಂಗಕ್ಕೆ: ಐಐಟಿ ಕಾನ್ಪುರ ತಜ್ಞ
author img

By

Published : Jan 20, 2022, 9:49 AM IST

ನವದೆಹಲಿ: ಒಮಿಕ್ರಾನ್ ಭೀತಿ ಜಗತ್ತನ್ನು ಆವರಿಸಿದೆ. ಮೂರನೇ ಅಲೆಗೆ ಕಾರಣವಾಗಿರುವ ಒಮಿಕ್ರಾನ್ ಜನವರಿ 23ರಿಂದ ಹೆಚ್ಚಾಗಬಹುದು. ದಿನಕ್ಕೆ ನಾಲ್ಕು ಲಕ್ಷ ಮಂದಿಗೆ ಸೋಂಕು ತಗುಲಬಹುದು ಎಂದು ಐಐಟಿ ಕಾನ್ಪುರ ಪ್ರಾಧ್ಯಾಪಕ, ತಜ್ಞ ಮನೀಂದ್ರ ಅಗರವಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3.17 ಲಕ್ಷ ಮಂದಿಗೆ ಕೋವಿಡ್​ ದೃಢಪಟ್ಟಿದೆ.

ಕಳೆದ ಏಳು ದಿನಗಳಲ್ಲಿ ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಉತ್ತುಂಗಕ್ಕೇರಿದೆ ಎಂದು ಮನೀಂದ್ರ ಅಗರವಾಲ್ ಹೇಳಿದ್ದು, ಈ ವಾರದಲ್ಲಿ ಕರ್ನಾಟಕ ಮಹಾರಾಷ್ಟ್ರ, ಯುಪಿ, ಗುಜರಾತ್ ಮತ್ತು ಹರಿಯಾಣದಲ್ಲಿ ಕೋವಿಡ್ ಸೋಂಕಿತರು ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಮುಂದಿನ ವಾರದಲ್ಲಿ ಆಂಧ್ರಪ್ರದೇಶ, ಅಸ್ಸೋಂ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಜನವರಿ 11ರವರೆಗಿನ ಅಂಕಿ - ಅಂಶಗಳು ಅವಲೋಕನ ಮಾಡುವುದಾದರೆ, ಜನವರಿ 23ಕ್ಕೆ 7.2ಲಕ್ಷ ಸೋಂಕಿತರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ, ದಿನಕ್ಕೆ 4 ಲಕ್ಷ ಸೋಂಕು ಪ್ರಕರಣಗಳು ದಾಟುವ ಸಾಧ್ಯತೆ ತುಂಬಾ ಕಡಿಮೆ ಇದೆ ಎಂದು ಮನೀಂದ್ರ ಅಗರವಾಲ್ ಟ್ವೀಟ್ ಮಾಡಿದ್ದಾರೆ.

ಜನವರಿ ಅಂತ್ಯದ ವೇಳೆಗೆ ಕೋವಿಡ್ ಮೂರನೇ ಅಲೆ ಉತ್ತುಂಗಕ್ಕೆ ಏರಲಿದೆ ಎಂದು ಮನೀಂದ್ರ ಅಗರವಾಲ್ ಈ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಸೋಂಕು ಪರೀಕ್ಷೆಯ ಮಾರ್ಗಸೂಚಿಯನ್ನು ಬದಲಾಯಿಸುತ್ತದೆ ಎಂದು ನಾನು ಈ ಮೊದಲೇ ಊಹಿಸಿದ್ದೆ. ಕೆಲವೊಂದು ಪ್ರದೇಶಗಳಲ್ಲಿ ಮಾರ್ಗಸೂಚಿಯನ್ನು ಇನ್ನೂ ಅಳವಡಿಸಿಕೊಂಡಿಲ್ಲ ಎಂದು ಮನೀಂದ್ರ ಅಗರವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಹಾವು - ಏಣಿ ಆಟದಂತೆ ಕೋವಿಡ್​ ಪ್ರಕರಣದ ವರದಿ: ಇಂದು ಮೂರು ಲಕ್ಷದ ಗಡಿ ದಾಟಿದ ಕೊರೊನಾ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.