ETV Bharat / bharat

ರಾಜಸ್ಥಾನದಲ್ಲಿ ಬದಲಾವಣೆ ತರಬೇಕು: ಬೇಕಾದರೆ ಯುಪಿಯಿಂದ ಬುಲ್ಡೋಜರ್‌ ಕಳುಹಿಸುತ್ತೇನೆ ಎಂದ ಕಂಗನಾ - ಜೋಧ್‌ಪುರ ಗುಂಪು ಸಮುದಾಯಗಳ ನಡುವಿನ ಘರ್ಷಣೆ

ರಾಜಕೀಯಕ್ಕೆ ಪ್ರವೇಶಿಸುವುದು ಮತ್ತೊಂದು ಹೋರಾಟವಾಗಲಿದೆ. ನಾನು ಅದಕ್ಕೆ ಪ್ರಸ್ತುತ ಸಿದ್ಧಳಿಲ್ಲ ಎಂದು ನಟಿ ಕಂಗನಾ ರಣಾವತ್ ತಿಳಿಸಿದ್ದಾರೆ.

Bollywood actor Kangana Ranaut
ಬಾಲಿವುಡ್ ನಟಿ ಕಂಗನಾ ರಣಾವತ್
author img

By

Published : May 6, 2022, 7:48 PM IST

ಜೈಪುರ (ರಾಜಸ್ಥಾನ): ಬಾಲಿವುಡ್ ನಟಿ ಕಂಗನಾ ರಣಾವತ್ ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಜೋಧ್‌ಪುರದಲ್ಲಿ ನಡೆದ ಎರಡು ಸಮುದಾಯಗಳ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಂಗನಾ, ಗಲಭೆಗಳನ್ನು ನಿಯಂತ್ರಿಸುವ ಸರ್ಕಾರ ರಾಜ್ಯದಲ್ಲಿ ಬರಬೇಕೆಂದು ಹೇಳಿದ್ದಾರೆ.

ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಬದಲಾವಣೆ ತರಬೇಕಿದೆ. ಇಲ್ಲಿ ಬದಲಾವಣೆಯಾದರೆ ಕೋಮು ಗಲಭೆಗಳ ನಿಯಂತ್ರಿಸುವ ಸರ್ಕಾರವನ್ನು ತರಬಹುದು. ಅಗತ್ಯವಿದ್ದರೆ ನಾನೇ ನಿಮಗೆ (ರಾಜಸ್ಥಾನ ಸರ್ಕಾರಕ್ಕೆ) ಉತ್ತರ ಪ್ರದೇಶದಿಂದ ಬುಲ್ಡೋಜರ್‌ಗಳನ್ನು ಕಳುಹಿಸುತ್ತೇನೆ ಎಂದಿದ್ದಾರೆ.

ಇದೇ ವೇಳೆ, ನೀವು ರಾಜಕೀಯಕ್ಕೆ ಸೇರುತ್ತೀರಾ ಎಂಬ ಪ್ರಶ್ನೆಗೆ ಕಂಗನಾ, ಸದ್ಯ ಅಂತಹ ಯಾವುದೇ ಯೋಚನೆ ಇಲ್ಲ ಎಂದು ತಿಳಿಸಿದ್ದಾರೆ. ತನ್ನ ವೃತ್ತಿ ಜೀವನದಲ್ಲಿ ಈ ಹಂತವನ್ನು ತಲುಪಲು ಸಾಕಷ್ಟು ಹೋರಾಟಗಳನ್ನು ಎದುರಿಸಿದ್ದೇನೆ. ರಾಜಕೀಯಕ್ಕೆ ಪ್ರವೇಶಿಸುವುದು ಮತ್ತೊಂದು ಹೋರಾಟವಾಗಲಿದೆ. ನಾನು ಅದಕ್ಕೆ ಪ್ರಸ್ತುತ ಸಿದ್ಧಳಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕನ್ನಡದ ಮುಂದೆ ಹಿಂದೆ ಸರಿದ ಹಿಂದಿ.. ಸೆಲೆಬ್ರಿಟಿ ಸೇರಿದಂತೆ ಹಲವು ರಾಜಕೀಯ ನಾಯಕರ ಪ್ರತಿಕ್ರಿಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.