ಮುಂಬೈ : ಇಂದು 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2019 ಘೋಷಣೆಯಾಗುವ ಸಾಧ್ಯತೆ ಇದೆ. ಪ್ರಶಸ್ತಿ ಗೆಲ್ಲುವ ಸಾಲಿನಲ್ಲಿ ಹಲವು ಚಿತ್ರಗಳು ಸ್ಥಾನ ಗಿಟ್ಟಿಸಿವೆ.
ಭಾರತದ ಮೊಟ್ಟ ಮೊದಲ ಚಲನಚಿತ್ರ (ಮೂಕಿ) ರಾಜಾ ಹರಿಶ್ಚಂದ್ರ ಮೇ 3, 1913ರಂದು ರಿಲೀಸ್ ಆಗಿತ್ತು. ಇದರ ಸ್ಮರಣಾರ್ಥ ಮೇ 3ರಂದು ಪ್ರಶಸ್ತಿ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ.
ಕಳೆದ ಬಾರಿ ಕೊರೊನಾ ಇದ್ದ ಕಾರಣದಿಂದಾಗಿ ಮೇಯಲ್ಲಿ ನಡೆಯಬೇಕಿದ್ದ ಸಮಾರಂಭವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿತ್ತು. ಇದೀಗ ಮತ್ತೆ ಪ್ರಶಸ್ತಿ ಘೋಷಣೆಯಾಗುವ ಸಾಧ್ಯತೆ ಇದೆ.
ಕಳೆದ ಬಾರಿ ಕನ್ನಡದ ಒಂದಲ್ಲ ಎರಡಲ್ಲ ಚಿತ್ರಕ್ಕೆ ರಾಷ್ಟ್ರೀಯ ಭಾವೈಕ್ಯತೆ ಪ್ರಶಸ್ತಿ ಲಭಿಸಿತ್ತು. ಜೊತೆಗೆ ಸರ್ಕಾರಿ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಎಂಬ ಪ್ರಶಸ್ತಿ ಪಡೆದಿದ್ದವು. ಇವುಗಳ ಜೊತೆ ಕನ್ನಡಕ್ಕೆ ಒಟ್ಟು 10 ಪ್ರಶಸ್ತಿ ಒಲಿದು ಬಂದಿತ್ತು.