ETV Bharat / bharat

ಗೋವಾಕ್ಕೆ ತೆರಳಿದ್ದ ಯುವಕರ ದರೋಡೆ; ಹುಡುಗಿಯರೊಂದಿಗೆ ಅರೆಬೆತ್ತಲೆ ವಿಡಿಯೋ ಮಾಡಿ ಬ್ಲಾಕ್​ಮೇಲ್! - ಗೋವಾದಲ್ಲಿ ಯುವಕರ ದರೋಡೆ

ಗೋವಾಕ್ಕೆ ತೆರಳಿದ್ದ ಮಹಾರಾಷ್ಟ್ರದ 11 ಯುವಕರನ್ನ ದರೋಡೆ ಮಾಡಲಾಗಿದ್ದು, ಅರೆಬೆತ್ತಲೆ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿರುವ ಘಟನೆ ನಡೆದಿದೆ.

The youths who went to Goa were robbed
The youths who went to Goa were robbed
author img

By

Published : Jun 1, 2022, 10:06 AM IST

ಕೊಲ್ಹಾಪುರ(ಮಹಾರಾಷ್ಟ್ರ): ಗೋವಾ ಪ್ರವಾಸಕ್ಕೆಂದು ತೆರಳಿದ್ದ ಮಹಾರಾಷ್ಟ್ರದ 11 ಯುವಕರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅವರನ್ನೆಲ್ಲ ಬೆದರಿಸಿ, ಕೊಠಡಿವೊಂದರಲ್ಲಿ ಕೂಡಿ ಹಾಕಲಾಗಿದ್ದು, ಹುಡುಗಿಯರೊಂದಿಗೆ ಅರೆಬೆತ್ತಲೆ ವಿಡಿಯೋ ಸೆರೆ ಹಿಡಿದು, ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಮಹಾರಾಷ್ಟ್ರದ ಕೊಲ್ಹಾಪುರದಿಂದ ಗೋವಾಕ್ಕೆ ತೆರಳಿದ್ದ ಯುವಕರನ್ನ ಬೊಂಡಗೇಶ್ವರ ದೇವಸ್ಥಾನದ ಬಳಿ ಕೆಲವು ಅಪರಿಚಿತ ವ್ಯಕ್ತಿಗಳು ತಡೆದು ನಿಲ್ಲಿಸಿದ್ದಾರೆ. ಈ ವೇಳೆ, ನಮ್ಮ ಹೋಟೆಲ್​​​​ನಲ್ಲಿ ಒಳ್ಳೆಯ ಊಟ ಸಿಗುತ್ತದೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಮೋಸ ಮಾಡಿದ್ದಾರೆ.

ಈ ವೇಳೆ ಅವರನ್ನ ಥಳಿಸಲಾಗಿದ್ದು. ಬಟ್ಟೆ ತೆಗೆದು ಹುಡುಗಿಯರೊಂದಿಗೆ ನಿಲ್ಲಿಸಿ, ವಿಡಿಯೋ ಮಾಡಿ ಬ್ಲಾಕ್​ ಮೇಲ್ ಮಾಡಿದ್ದಾರೆ. ಈ ವೇಳೆ ಅವರ ಬಳಿಯ ಹಣ, ಮೊಬೈಲ್ ಫೋನ್, ಚಿನ್ನದ ಉಂಗುರಗಳು ಮತ್ತು ಚೈನ್​ಗಳನ್ನ ಕಿತ್ತುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿದ್ರೆ, ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: ರಾಮಮಂದಿರ ಗರ್ಭಗುಡಿಗೆ ಯೋಗಿ ಶಂಕುಸ್ಥಾಪನೆ.. ಉಡುಪಿ ಪೇಜಾವರ ಶ್ರೀ ಭಾಗಿ

ಗೋವಾದ ಮಪಾಸಾ ಎಂಬಲ್ಲಿ ಈ ಘಟನೆ ನಡೆದಿದ್ದು, ಚಂದಗಡ ತಾಲೂಕಿನ 11 ಯುವಕರು ಇದೀಗ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾರೆ. ಇವರೆಲ್ಲರೂ ಗೋವಾದ ಸೈಟ್ ಸೀಯಿಂಗ್​ಗೆ ಹೋಗಿದ್ದರು. ಅಲ್ಲಿಂದ ಮನೆಗೆ ವಾಪಸ್​ ಬರುತ್ತಿದ್ದಾಗ ಈ ಘಟನೆ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.