ETV Bharat / bharat

ಅಮೆರಿಕದಲ್ಲಿ ಮಿಂಚುತ್ತಿದೆ ಗುಜರಾತ್​​ನಲ್ಲಿ ತಯಾರಾದ ವಿಶ್ವದ ಅತಿ ದೊಡ್ಡ ವಜ್ರ

ವಿಶ್ವದ ಅತಿದೊಡ್ಡ ವಜ್ರವನ್ನು ಇಂಟರ್‌ನ್ಯಾಷನಲ್ ಜೆಮೊಲಾಜಿಕಲ್ ಇನ್ಸ್ಟಿಟ್ಯೂಟ್ ಪ್ರಮಾಣೀಕರಿಸಿದೆ.

ಲ್ಯಾಬ್‌ಗ್ರೋನ್ ವಜ್ರ
author img

By

Published : Jun 13, 2022, 2:47 PM IST

ಸೂರತ್(ಗುಜರಾತ್​): ಸೂರತ್ ಮೂಲದ ವಜ್ರ ಕಂಪನಿಯೊಂದು ತಯಾರಿಸಿದ ವಿಶ್ವದ ಅತಿದೊಡ್ಡ ಲ್ಯಾಬ್‌ಗ್ರೋನ್ ವಜ್ರವನ್ನೀಗ ಅಮೆರಿಕದಲ್ಲಿ ಪ್ರದರ್ಶಿಸಲಾಗಿದೆ. ಪ್ರಯೋಗಾಲಯದಲ್ಲಿ ತಯಾರಾದ 30.18 ಕ್ಯಾರೆಟ್ ವಜ್ರ ನೋಡಿದ ಜನರು ಅಚ್ಚರಿಗೊಂಡಿದ್ದಾರೆ. ಏಕೆಂದರೆ, ಇದು ನೈಸರ್ಗಿಕ ವಜ್ರವಲ್ಲ, ಬದಲಾಗಿ ಪ್ರಯೋಗಾಲಯದಲ್ಲಿ ತಯಾರಿಸಿದ ವಜ್ರ. ವಿಶ್ವದ ಅತಿದೊಡ್ಡ ವಜ್ರವನ್ನು ಇಂಟರ್‌ನ್ಯಾಷನಲ್ ಜೆಮೊಲಾಜಿಕಲ್ ಇನ್ಸ್ಟಿಟ್ಯೂಟ್ ಪ್ರಮಾಣೀಕರಿಸಿದೆ.

ನೈಸರ್ಗಿಕ ವಜ್ರಗಳನ್ನು ಕತ್ತರಿಸಿ ಪಾಲಿಶ್ ಮಾಡಲು ಹೆಸರುವಾಸಿಯಾಗಿರುವ ಗುಜರಾತ್‌ನ ಸೂರತ್ ಈಗ ಲ್ಯಾಬ್ ಗ್ರೋನ್ ವಜ್ರಗಳಿಗೆ ವಿಶ್ವಪ್ರಸಿದ್ಧ. ಕಳೆದ 5 ವರ್ಷಗಳಲ್ಲಿ ಇಲ್ಲಿಂದ ಶೇ 5ರಷ್ಟು ಹೆಚ್ಚು ವಜ್ರ ರಫ್ತಾಗಿದೆ. ಇದೇ ಸಮಯದಲ್ಲಿ ಉದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲು, ಸೂರತ್ ಕೈಗಾರಿಕೋದ್ಯಮಿಯೊಬ್ಬರು ವಿಶೇಷ ವಜ್ರವನ್ನು ತಯಾರಿಸಿದ್ದಾರೆ. 30.18 ಕ್ಯಾರೆಟ್ ಗುಣಮಟ್ಟ ಹೊಂದಿದ್ದು, ಜೂನ್‌ 10ರಿಂದ 13 ರವರೆಗೆ ಅಮೆರಿಕದ ಲಾಸ್ ವೇಗಾಸ್‌ನ ವ್ಯಾಟಿಕನ್ ಜೆಸಿಕೆ ಲಾಸ್ ವೇಗಾಸ್‌ನಲ್ಲಿ ಪ್ರದರ್ಶನಕ್ಕಿಡಲಾಗಿದೆ.

ವಜ್ರ ಕಂಪನಿಯ ಮಾಲೀಕ ಕಿಶೋರ್ ವಿರಾನಿ ಮಾತನಾಡಿ, "ವಿಶ್ವದ ಅತಿದೊಡ್ಡ ವಜ್ರವನ್ನು ಇಂಟರ್‌ನ್ಯಾಷನಲ್ ಜೆಮೊಲಾಜಿಕಲ್ ಇನ್ಸ್ಟಿಟ್ಯೂಟ್ ಪ್ರಮಾಣೀಕರಿಸಿದೆ. ಇದು ಹಸಿರು ವಜ್ರವಾಗಿದ್ದು ಪ್ರಯೋಗಾಲಯದಲ್ಲಿ ತಯಾರಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚು ಬೇಡಿಕೆ ಇದ್ದು, ರಾಸಾಯನಿಕ ಆವಿ ಶೇಖರಣೆ ಪ್ರಕ್ರಿಯೆಯಿಂದ ತಯಾರಿಸಲಾಗುತ್ತದೆ" ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.