ನವದೆಹಲಿ : ಸೆಂಗೊಲ್ ವಿಷಯದಲ್ಲಿ ಕಾಂಗ್ರೆಸ್ ಮುಖಂಡ ಮತ್ತು ಸಂಸದ ಶಶಿ ತರೂರ್ ತಮ್ಮದೇ ಪಕ್ಷದ ವಿರುದ್ಧ ನಿಲುವು ಪ್ರದರ್ಶಿಸಿದ್ದಾರೆ. ಇತಿಹಾಸದ ಮೌಲ್ಯಗಳನ್ನು ವರ್ತಮಾನದಲ್ಲಿ ಮುಂದುವರಿಸಲು ಪ್ರತಿಯೊಬ್ಬರೂ ಈ ಸಂಕೇತವನ್ನು ಒಪ್ಪಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಹೊಸ ಸಂಸತ್ ಕಟ್ಟಡವನ್ನು ರಾಷ್ಟ್ರಕ್ಕೆ ಸಮರ್ಪಿಸುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯ ಸಭಾಂಗಣದಲ್ಲಿ ಐತಿಹಾಸಿಕ ಸೆಂಗೊಲ್ ಅನ್ನು ಸ್ಥಾಪಿಸಿರುವುದು ಇಲ್ಲಿ ಗಮನಾರ್ಹ. 'ಸೆಂಗೊಲ್' ಸಂಪ್ರದಾಯದ ನಿರಂತರತೆಯನ್ನು ಪ್ರತಿಬಿಂಬಿಸುತ್ತದೆ ಎಂಬ ಸರ್ಕಾರದ ವಾದವನ್ನು ತರೂರ್ ಬೆಂಬಲಿಸಿದ್ದಾರೆ. ಆದಾಗ್ಯೂ, ಅವರು ಪ್ರತಿಪಕ್ಷಗಳ ವಾದವನ್ನು ಸಹ ಬೆಂಬಲಿಸಿದ್ದು, ಸಂವಿಧಾನವನ್ನು ಜನರ ಹೆಸರಿನಲ್ಲಿ ಅಂಗೀಕರಿಸಲಾಗಿದೆ ಎಂದು ಹೇಳಿದ್ದಾರೆ.
-
My own view on the #sengol controversy is that both sides have good arguments. The government rightly argues that the sceptre reflects a continuity of tradition by embodying sanctified sovereignty & the rule of dharma. The Opposition rightly argues that the Constitution was… pic.twitter.com/OQ3RktGiIp
— Shashi Tharoor (@ShashiTharoor) May 28, 2023 " class="align-text-top noRightClick twitterSection" data="
">My own view on the #sengol controversy is that both sides have good arguments. The government rightly argues that the sceptre reflects a continuity of tradition by embodying sanctified sovereignty & the rule of dharma. The Opposition rightly argues that the Constitution was… pic.twitter.com/OQ3RktGiIp
— Shashi Tharoor (@ShashiTharoor) May 28, 2023My own view on the #sengol controversy is that both sides have good arguments. The government rightly argues that the sceptre reflects a continuity of tradition by embodying sanctified sovereignty & the rule of dharma. The Opposition rightly argues that the Constitution was… pic.twitter.com/OQ3RktGiIp
— Shashi Tharoor (@ShashiTharoor) May 28, 2023
ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ತರೂರ್, ಸೆಂಗೊಲ್ ವಿಷಯದಲ್ಲಿ ಎರಡೂ ಕಡೆಯವರ ನಿಲುವು ಸರಿಯಾಗಿಯೇ ಇದೆ ಎಂಬುದು ನನ್ನ ಸ್ವಂತ ಅಭಿಪ್ರಾಯವಾಗಿದೆ. ರಾಜದಂಡವು ಪವಿತ್ರವಾದ ಸಾರ್ವಭೌಮತ್ವ ಮತ್ತು ಧರ್ಮದ ಆಳ್ವಿಕೆಯನ್ನು ಸಾಕಾರಗೊಳಿಸುವ ಮೂಲಕ ಸಂಪ್ರದಾಯದ ನಿರಂತರತೆಯನ್ನು ಪ್ರತಿಬಿಂಬಿಸುತ್ತದೆ ಎಂಬ ಸರ್ಕಾರದ ನಿಲುವು ಸರಿಯಾಗಿದೆ. ಹಾಗೆಯೇ, ಸಂವಿಧಾನವನ್ನು ಜನರ ಹೆಸರಿನಲ್ಲಿ ಅಂಗೀಕರಿಸಲಾಗಿದೆ ಮತ್ತು ಸಾರ್ವಭೌಮತ್ವವು ಸಂಸತ್ತಿನಲ್ಲಿ ಜನರನ್ನು ಪ್ರತಿನಿಧಿಸುತ್ತದೆ. ಇದು ದೇವರಿಂದ ನೀಡಲಾದ ರಾಜನ ಅಧಿಕಾರದಂತೆ ಅಲ್ಲ ಎಂದು ಹೇಳಿದ್ದಾರೆ.
ಅಧಿಕಾರದ ವರ್ಗಾವಣೆಯನ್ನು ಸಂಕೇತಿಸಲು ಮೌಂಟ್‌ಬ್ಯಾಟನ್ ನೆಹರೂ ಅವರಿಗೆ ರಾಜದಂಡವನ್ನು ಹಸ್ತಾಂತರಿಸಿದರು ಎಂಬ ವಿವಾದಾತ್ಮಕ ವಿಷಯವನ್ನು ಕೈಬಿಟ್ಟರೆ ಎರಡೂ ಕಡೆಯವರ ನಿಲುವುಗಳು ಹೊಂದಾಣಿಕೆಯಾಗುತ್ತವೆ. ಮೌಂಟ್‌ಬ್ಯಾಟನ್ ನೆಹರೂ ಅವರಿಗೆ ರಾಜದಂಡವನ್ನು ಹಸ್ತಾಂತರಿಸಿದರು ಎಂಬ ವಾದಕ್ಕೆ ಯಾವುದೇ ಪುರಾವೆಗಳಿಲ್ಲ. ಸೆಂಗೋಲ್ ರಾಜದಂಡವು ಶಕ್ತಿ ಮತ್ತು ಅಧಿಕಾರದ ಸಾಂಪ್ರದಾಯಿಕ ಸಂಕೇತವಾಗಿದೆ ಮತ್ತು ಅದನ್ನು ಲೋಕಸಭೆಯಲ್ಲಿ ಇರಿಸುವ ಮೂಲಕ ಭಾರತದ ಸಾರ್ವಭೌಮತ್ವವನ್ನು ಪ್ರತಿಪಾದಿಸಲಾಗಿದೆಯೇ ಹೊರತು ಭಾರತದ ಸಾರ್ವಭೌಮತ್ವ ಯಾವುದೇ ರಾಜನ ಕೈಯಲ್ಲಿಲ್ಲ ಎಂಬುದನ್ನು ದೃಢಪಡಿಸುತ್ತಿದೆ ಎಂದು ಅವರು ಹೇಳಿದರು.
ಸೆಂಗೊಲ್ ವಿಷಯದಲ್ಲಿ ತರೂರ್ ಅವರ ನಿಲುವು ಪಕ್ಷದ ಇತರ ನಾಯಕರ ನಿಲುವಿಗಿಂತ ಭಿನ್ನವಾಗಿರುವುದು ಗಮನಾರ್ಹ. ಸೆಂಗೊಲ್ ವಿಷಯದಲ್ಲಿ ಕೇಂದ್ರ ಸರ್ಕಾರವು ಸುಳ್ಳು ನಿರೂಪಣೆಗಳನ್ನು ಹರಡುತ್ತಿದೆ ಎಂದು ಮತ್ತೋರ್ವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆರೋಪಿಸಿದ್ದರು.
ವಾಟ್ಸ್ಆ್ಯಪ್ ವಿಶ್ವವಿದ್ಯಾನಿಲಯದ ವಿಶಿಷ್ಟ ಸುಳ್ಳು ನಿರೂಪಣೆಗಳೊಂದಿಗೆ ಹೊಸ ಸಂಸತ್ತು ಪವಿತ್ರವಾಗುತ್ತಿದೆ ಎಂದು ಹೇಳುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ ಅಲ್ಲವೇ? ಬಿಜೆಪಿ, ಆರ್‌ಎಸ್‌ಎಸ್ ಡಿಸ್ಟೋರಿಯನ್ಸ್ಗಳು ಯಾವುದೇ ಸಾಕ್ಷಿಗಳಿಲ್ಲದೆ ಗರಿಷ್ಠ ಪ್ರತಿಪಾದನೆಗಳನ್ನು ಮಾಡುತ್ತಿರುವುದು ಇದರಿಂದ ಜಗಜ್ಜಾಹೀರಾಗಿದೆ ಎಂದು ರಮೇಶ್ ಶುಕ್ರವಾರ ಟ್ವಿಟರ್‌ನಲ್ಲಿ ಹೇಳಿದ್ದಾರೆ. ಹಿಸ್ಟೋರಿಯನ್ಸ್ ಅಥವಾ ಇತಿಹಾಸಕಾರರು ಎಂಬ ಪದವನ್ನು ಡಿಸ್ಟೋರಿಯನ್ಸ್ ಎಂಬುದಾಗಿ ಜೈರಾಮ್ ರಮೇಶ್ ಇಲ್ಲಿ ವ್ಯಂಗ್ಯವಾಗಿ ಬಳಸಿದ್ದಾರೆ. ಸೆಂಗೊಲ್ ಅನ್ನು ಬ್ರಿಟಿಷರಿಂದ ಅಧಿಕಾರದ ಹಸ್ತಾಂತರದ ಸಂಕೇತವೆಂದು ಹೇಳಲು ಯಾವುದೇ ದಾಖಲಿತ ಪುರಾವೆಗಳಿಲ್ಲ ಮತ್ತು ಬಿಜೆಪಿ ಪ್ರತಿಪಾದನೆಗಳು ಬೋಗಸ್ ಎಂದು ರಮೇಶ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಮನ್ ಕಿ ಬಾತ್ 101ನೇ ಸಂಚಿಕೆ: ಯುವ ಸಂಗಮ ಕಾರ್ಯಕ್ರಮ ಶ್ಲಾಘಿಸಿದ ಪ್ರಧಾನಿ ಮೋದಿ