ETV Bharat / bharat

ಇದು ಕೋವಿಡ್‌ ಕಾಲ.. ಯಾವ ವಾಹನದಲ್ಲಿ ಪ್ರಯಾಣ ಹೆಚ್ಚು ಸುರಕ್ಷಿತ? ಈ ಅಧ್ಯಯನ ವರದಿ ತಪ್ಪದೆ ಓದಿ.. - ನಾನ್‌ ಎಸಿ ಕಾರು

ಕೋವಿಡ್‌-19 ಭೀತಿಯ ನಡುವೆಯೂ ನೀವು ವಾಹನಗಳಲ್ಲಿ ಸಂಚಾರ ಮಾಡುತ್ತಿದ್ದರೆ ಆ ವಾಹನ ನಿಮಗೆಷ್ಟು ಸುರಕ್ಷಿತ?, ಒಂದು ವೇಳೆ ನಿಮ್ಮ ಜೊತೆಗಿರುವ ಸಹ ಪ್ರಯಾಣಿಕರಲ್ಲಿ ಒಬ್ಬರು ಕೊರೊನಾ ಸೋಂಕಿತರಿದ್ದರೆ ಅವರಿಂದ ನಿಮಗೆ ವೈರಸ್‌ ಹರಡುವ ಸಾಧ್ಯತೆ ಇದೆಯೇ? ಎಂಬುದರ ಬಗ್ಗೆ ಅಧ್ಯಯನವೊಂದು ಕುತೂಹಲಕಾರಿ ಮಾಹಿತಿ ನೀಡಿದೆ.

The risk of corona is less in auto journey john hopkins study on this issue
Corona: ವೈರಸ್‌ ಭೀತಿ; ಸಂಚಾರಕ್ಕೆ ಯಾವ ವಾಹನ ಅತ್ಯಂತ ಸುರಕ್ಷಿತ..?
author img

By

Published : Jun 10, 2021, 1:12 PM IST

ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದೀರಾ? ಸಹ ಪ್ರಯಾಣಿಕರ ಜೊತೆ ಪ್ರಯಾಣಿಸುತ್ತಿದ್ದರೆ ಅದರಲ್ಲೊಬ್ಬರು ಕೋವಿಡ್‌ ಸೋಂಕಿತರಿದ್ದರೆ ಅವರಿಂದ ಹೇಗೆ ವೈರಸ್‌ ಹರಡುತ್ತಿದೆ ಗೊತ್ತೇ? ಆಟೋ, ಬಸ್‌, ಎಸಿಯೇತರ ಕಾರು... ಈ ನಾಲ್ಕು ವಾಹನಗಳಲ್ಲಿ ಸಂಚಾರಕ್ಕೆ ಯೋಗ್ಯವಾದ ವಾಹನಗಳ ಬಗ್ಗೆ ಸಂಶೋಧನೆ ನಡೆಸಿದಾಗ ಇತರೆ ವಾಹನಗಳಿಗಿಂತ ಆಟೋದಲ್ಲಿ ಪ್ರಯಾಣಿಸಿದರೆ ವೈರಸ್‌ ಹರಡುವ ಸಾಧ್ಯತೆ ತೀರಾ ಕಡಿಮೆ ಎನ್ನುತ್ತಿವೆ ಅಧ್ಯಯನಗಳು.

ಹೌದು, ಅಮೆರಿಕಾದ ಪ್ರತಿಷ್ಠಿತ ಜಾನ್‌ ಹಾಪ್‌ಕಿನ್ಸ್‌ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಬ್ಲೂಮ್‌ ಬರ್ಗ್‌ ಸ್ಕೂಲ್‌ ಆಫ್‌ ಪಬ್ಲಿಕ್‌ ಹೆಲ್ತ್‌ ಕೇರ್‌ ಸಂಶೋಧನಾ ಸಂಸ್ಥೆ ಆಟೋದಲ್ಲಿ ವೈರಸ್‌ ಹರಡುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟಿದೆ. ಇದಕ್ಕೆ ಕಾರಣವಾಗುವ ಅಂಶಗಳನ್ನು ನೀಡಿದೆ.

ಆರೋಗ್ಯ, ಇಂಜಿಯರಿಂಗ್‌ ವಿಭಾಗದಲ್ಲಿ ತಜ್ಞರಾದ ದರ್ಪಣ್‌ ದಾಸ್‌, ಗುರುಮೂರ್ತಿ ರಾಮಚಂದ್ರನ್‌ ಇವರು ಕೋವಿಡ್‌-19 ಮಹಾಮಾರಿ ಸಂದರ್ಭದಲ್ಲಿ ಭಾರತದಲ್ಲಿ ವಿವಿಧ ರೀತಿಯ ವಾಹನಗಳಲ್ಲಿ ಪ್ರಯಾಣ ಎಷ್ಟು ಅಪಾಯಕಾರಿ ಎಂಬುದನ್ನು ಅಧ್ಯಯನ ಮಾಡಿದ್ದಾರೆ. ಇವರ ಸಂಶೋಧನೆಯ ಪತ್ರವನ್ನು ಎನ್ವಿರಾನ್ಮೆಂಟ್‌ ರಿಸರ್ಚ್‌ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: ಬಿಗ್​ ಶಾಕಿಂಗ್​​! ದೇಶದಲ್ಲಿ ಒಂದೇ ದಿನ 6,148 ಜನರು ಕೊರೊನಾಗೆ ಬಲಿ, ವಿಶ್ವದಲ್ಲೇ ಮೊದಲು

ಸಹ ಪ್ರಯಾಣಿಕರಲ್ಲಿ ಓರ್ವ ಕೋವಿಡ್‌ ರೋಗಿ ಇದ್ದರೆ ಆಟೋದಲ್ಲಿ ಹೋಗುವುದಕ್ಕಿಂತ ಎಸಿ(ಹವಾ ನಿಯಂತ್ರಿತ) ಕಾರಿನಲ್ಲಿ ಹೋದಾಗ ವೈರಸ್‌ ತಗುಲುವ ಸಾಧ್ಯತೆ ಶೇ 300 ರಷ್ಟು ಇರುತ್ತದೆ ಎಂದು ಈ ಅಧ್ಯಯನ ಎಚ್ಚರಿಸುತ್ತದೆ.

ಅಧ್ಯಯನ ಹೇಗೆ?

ಪರಿಶೀಲನೆ ನಡೆಸಿದ ವಾಹನಗಳು:

ಆಟೋ, ನಾನ್‌ ಎಸಿ ಕಾರು, ಎಸಿ ಕಾರು ಹಾಗು ಬಸ್ಸು

ಯಾವ ವಾಹನದಲ್ಲಿ ಎಷ್ಟು ಜನ?:

ಆಟೋ, ನಾನ್‌ ಎಸಿ ಕಾರು, ಎಸಿ ಕಾರಿನಲ್ಲಿ 5 ಮಂದಿ, ಬಸ್‌ನಲ್ಲಿ ಚಾಲಕ ಸೇರಿ 40 ಮಂದಿ

ಅಧ್ಯಯನಕ್ಕೆ ಅನುಸರಿಸಿದ ವಿಧಾನ:

ಗಾಳಿಯ ಮೂಲಕ ಸಾಂಕ್ರಾಮಿಕ ರೋಗದ ವ್ಯಾಪ್ತಿಯನ್ನು ಅಳೆಯುವ ಸಾಧನ ಬಳಕೆ

ಇದನ್ನೂ ಓದಿ: ನನ್ನ ಮೇಲೆ ಆರೋಪ ಸಾಬೀತಾಗದಿದ್ದರೆ ಸಿಂಧೂರಿ ರಾಜೀನಾಮೆ ಕೊಡ್ತಾರಾ?: ಸಾ‌.ರಾ ಮಹೇಶ್

ಯಾಕೆ? ಹೇಗೆ?

1. ಆಟೋದಲ್ಲಿ ಹೊರಗಡೆಯಿಂದ ಬರುವ ಗಾಳಿ ಹೆಚ್ಚಾಗಿರುತ್ತದೆ. ಪ್ರತಿ ಗಂಟೆಗೆ ಬದಲಾಗುವ ಗಾಳಿ (Air change per ho‌ur) ಪ್ರಯಾಣ ಅಧಿಕವಾಗಿರುತ್ತದೆ. ಅದಕ್ಕೆ ವೈರಸ್‌ ಹರಡುವ ಸಾಧ್ಯತೆ ಕಡಿಮೆ ಇರುತ್ತದೆ.

2. ನಾನ್‌ ಎಸಿ ವಾಹನದಲ್ಲಿ ಹೋಗುವಾಗ ಗಾಳಿಗಾಗಿ ವಾಹನದ ಕಿಟಕಿ ಗಾಜುಗಳನ್ನು ತೆರಯಲಾಗುತ್ತದೆ. ಇದರಿಂದ ಆಮ್ಲಜನಕ ಹೆಚ್ಚಾಗಿ ಬರುವುದರಿಂದ ಸೋಂಕು ಹರಡುವಿಕೆ ಪ್ರಮಾಣ ಕಡಿಮೆ.

3. ಎಸಿ ಕಾರಿನಲ್ಲಿ ಪ್ರಯಾಣಿಸುವಾಗ ಕಾರಿನ ಕಿಟಕಿ ಗಾಜನ್ನು ಮುಚ್ಚಲಾಗುತ್ತದೆ. ಆದ್ದರಿಂದ ಸೋಂಕಿತರು ಹೊರಬಿಡುವ ಡ್ರಾಪ್‌ಲೆಟ್ಸ್‌ಗಳು ಕಾರಿನಿಂದ ಹೊರಗಡೆ ಹೋಗುವ ಪ್ರಮಾಣ ಕಡಿಮೆ. ಇದರಿಂದಲೂ ಸಹ ಪ್ರಯಾಣಿಕರಿಗೆ ಸೋಂಕು ಬಹುಬೇಗ ಹರಡಬಲ್ಲದು.

4. ವಾಹನಗಳಲ್ಲಿ ವೆಂಟಿಲೇಷನ್‌ ಆದಷ್ಟು ಹೆಚ್ಚಾಗಿದ್ದರೆ ವೈರಸ್‌ ಹರಡುವ ಸಾಧ್ಯತೆಯೂ ಅಷ್ಟೇ ಕಡಿಮೆಯಾಗಿರುತ್ತದೆ. ಸಾರ್ವಜನಿಕ ವಾಹನಗಳಲ್ಲಿ ಸಂಚಾರ ಮಾಡುವಾಗ ಸಾಧ್ಯವಾದಷ್ಟು ವಾಹನದ ಕಿಟಕಿಗಳನ್ನು ತೆರೆಯುವುದೊಳಿತು ಎಂದು ಅಧ್ಯಯನ ಸಲಹೆ ನೀಡುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.