ಆಗ್ರಾ (ಉತ್ತರಪ್ರದೇಶ) : ದೇವರ ವಿಗ್ರಹಕ್ಕೆ ವೈದ್ಯನೋರ್ವ ಚಿಕಿತ್ಸೆ ನೀಡಲು ನಿರಾಕರಣೆ ಮಾಡಿದ್ದರಿಂದ ಅರ್ಚಕನೋರ್ವ ಕೋಪಗೊಂಡು ತಲೆಯನ್ನ ಗೋಡೆಗೆ ಹೊಡೆದುಕೊಂಡು ಗಾಯಗೊಂಡಿದ್ದಾನೆ. ಉತ್ತರಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದೆ.
ಅರ್ಚಕ ಲೇಖ್ ಸಿಂಗ್(Pujari Lekh Singh) ಎಂಬಾಂತ ಇಂತಹ ವಿಚಿತ್ರ ಘಟನೆಗೆ ಸಾಕ್ಷಿಯಾದವ. ಈತ ಕಳೆದ 35 ವರ್ಷಗಳಿಂದ ಲಡ್ಡು ಗೋಪಾಲನ ಪೂಜೆ ಮಾಡುತ್ತಿದ್ದ. ಇಂದು ಬೆಳಗ್ಗೆ ಲಡ್ಡು ಗೋಪಾಲ್ನ ವಿಗ್ರಹಕ್ಕೆ ಸ್ನಾನ ಮಾಡಿಸುವಾಗ ಕೈಯಿಂದ ಜಾರಿ ನೆಲಕ್ಕೆ ಬಿದ್ದಿದೆ. ಈ ವೇಳೆ ಅದರ ಕೈ ಮುರಿದು ಹೋಗಿದೆ.
ತಕ್ಷಣವೇ ಆಗ್ರಾದ ಜಿಲ್ಲಾಸ್ಪತ್ರೆ(district hospital of Agra)ಗೆ ವಿಗ್ರಹದೊಂದಿಗೆ ಆಗಮಿಸಿರುವ ಆತ, ಅದಕ್ಕೆ ಬೆಸುಗೆ ಹಾಕಿ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದ. ಈ ವೇಳೆ ವೈದ್ಯರು ನಿರಾಕರಣೆ ಮಾಡಿದ್ದರಿಂದ ಆತ ಕೋಪಗೊಂಡಿದ್ದಾನೆ.
ವಿಗ್ರಹಕ್ಕೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಅರ್ಚಕನಿಗೆ ವೈದ್ಯರು ಮನವರಿಕೆ ಮಾಡಿದ್ದಾರೆ. ಆದರೆ, ಈ ಮಾತು ಕೇಳಲು ಸಿದ್ಧನಿಲ್ಲದ ಅರ್ಚಕ ತಕ್ಷಣವೇ ಕೋಪದಲ್ಲಿ ತಲೆಯನ್ನ ಗೋಡೆಗೆ ಹೊಡೆದಿದ್ದಾನೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದಾನೆ.
ಇದನ್ನೂ ಓದಿರಿ: ಓದಿ ಸ್ವಂತ ಉದ್ಯೋಗದ ಕನಸು ಕಾಣುತ್ತಿದ್ದ ಯುವತಿಗೆ ಬಲವಂತದ ಮದುವೆ; ಮೂರೇ ದಿನಕ್ಕೆ ಆತ್ಮಹತ್ಯೆ
ಈ ವೇಳೆ ಹಿಂದೂ ಮಹಾಸಭಾ ಸದಸ್ಯರು, ಮುಖ್ಯ ವೈದ್ಯಾಧಿಕಾರಿ ಅಶೋಕ್ ಅಗರ್ವಾಲ್ ವಿಗ್ರಹಕ್ಕೆ ಪ್ಲಾಸ್ಟರ್ ಮಾಡಿ ಅರ್ಚಕನ ಮನಗೆದ್ದಿದ್ದಾರೆ. ವಿಗ್ರಹಕ್ಕೆ ಅರವಳಿಕೆ ನೀಡಿದಾಗ ದೇವರಿಗೆ ತುಂಬಾ ನೋವಾಗಿದೆ ಎಂದು ಅರ್ಚಕ ಹೇಳಿದ್ದಾನೆ.
ಇದು ಬೆಳಗ್ಗೆ 8 ಗಂಟೆಯಿಂದಲೇ ಲಡ್ಡು ಗೋಪಾಲನ ಕೈಗೆ ಪ್ಲಾಸ್ಟರ್ ಹಾಕಿಸಲು ಅರ್ಚಕ ಜಿಲ್ಲಾಸ್ಪತ್ರೆಯಲ್ಲಿ ಅಲೆದಾಡುತ್ತಿದ್ದ. ಈ ವೇಳೆ ವೈದ್ಯರು ಆತನನ್ನ ಹುಚ್ಚ ಎಂದು ಓಡಿಸಿದ್ದರು.
ಆದರೆ, ಅರ್ಚಕನ ಅವಸ್ಥೆ ತಿಳಿದು ಸ್ಥಳಕ್ಕೆ ತಲುಪಿದ ಹಿಂದೂ ಮಹಾಸಭಾದ ಸದಸ್ಯ ಅಶೋಕ್ ಅಗರ್ವಾಲ್, ವೈದ್ಯರ ಸಹಾಯದಿಂದ ವಿಗ್ರಹಕ್ಕೆ ಪ್ಲಾಸ್ಟರ್(Devotee got Laddu Gopal idol plastered) ಮಾಡಿದ್ದಾರೆ.